ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ವತಿಯಿಂದ ‘ಸಂವಾದ ಕಾರ್ಯಕ್ರಮ’ವನ್ನು ದಿನಾಂಕ 16 ಜನವರಿ 2026ರಂದು ಸಂಜೆ 3-30 ಗಂಟೆಗೆ ಕಾಸರಗೋಡಿನ ಕರಂದಕ್ಕಾಡಿಗೆ ಸಮೀಪದ ಐ.ಎಂ.ಎ. ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಾ. ಗುರುಪ್ರಸಾದ ಐತಾಳ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಾ. ಶ್ರೀಪತಿ ಕಜಂಪಾಡಿ, ಡಾ. ತೇಜಸ್ವಿ ವ್ಯಾಸ, ಶ್ರೀ ರಾಧಾಕೃಷ್ಣ ಉಳಿಯತಡ್ಕ, ಡಾ. ಧನಂಜಯ ಕುಂಬ್ಳೆ ಮತ್ತು ಶ್ರೀಮತಿ ಸ್ನೇಹಲತಾ ದಿವಾಕರ್ ಇವರುಗಳು ಸಂವಾದಕ್ಕೆ ಚಾಲನೆ ನೀಡಲಿದ್ದಾರೆ.

