ಮಂಗಳೂರು : ಶಕ್ತಿನಗರದ ಪದವು ಫ್ರೆಂಡ್ಸ್ ಕ್ಲಬ್ (ರಿ.) ಇದರ ಸ್ವರ್ಣ ಸಂಭ್ರಮದ ಪ್ರಯುಕ್ತ ಸ್ವರ್ಣ ಸಂಭ್ರಮ ಸಮಿತಿ ಸಹಯೋಗದೊಂದಿಗೆ ‘ರಂಗೋಲಿ ಸ್ಪರ್ಧೆ’ಯನ್ನು ದಿನಾಂಕ 18 ಜನವರಿ 2026ರಂದು ಶಕ್ತಿನಗರದ ಸರಕಾರಿ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
1ರಿಂದ 7ನೇ ತರಗತಿ, 8ರಿಂದ 12ನೇ ತರಗತಿಯವರೆಗೆ ಹಾಗೂ ಪದವಿ ತರಗತಿಯಿಂದ ಮೇಲ್ಪಟ್ಟು ಸಾರ್ವಜನಿಕ ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ರಂಗೋಲಿ ಪುಡಿ ಮಾತ್ರ ಬಳಸಿ ರಚಿಸಬೇಕು. ಇದೊಂದು ವೈಯುಕ್ತಿಕ ಸ್ಪರ್ಧೆಯಾಗಿದ್ದು, ಯಾವುದೇ ಅಚ್ಚುಗಳನ್ನು ಬಳಸುವಂತಿಲ್ಲ. ಹೆಚ್ಚಿನ ವಿವರಗಳಿಗೆ ಪ್ರಸಾದ್ ಟಿ. 9243303006 ಮತ್ತು ರವಿಚಂದ್ರ 9900713662 ಸಂಖ್ಯೆಯನ್ನು ಸಂಪರ್ಕಿಸಿರಿ.

