ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ರಾಮಕೃಷ್ಣ ಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಸಂಗೀತ ತ್ರಿಮೂರ್ತಿಗಳಾದ ಪುರಂದರದಾಸ, ಕನಕದಾಸ ಮತ್ತು ವಾದಿರಾಜರ ‘ಆರಾಧನೋತ್ಸವ 2026’ ಕಾರ್ಯಕ್ರಮವನ್ನು ದಿನಾಂಕ 17 ಮತ್ತು 18 ಜನವರಿ 2026ರಂದು ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 17 ಜನವರಿ 2026ರಂದು ಸಂಜೆ 3-45 ಗಂಟೆಗೆ ಪಂಚರತ್ನ ಗೋಷ್ಠಿ ಗಾಯನಕ್ಕೆ ಕುಮಾರಿ ಮಹತೀ ಕೆ. ಕಾರ್ಕಳ ವಯೋಲಿನ್ ನಲ್ಲಿ ಮತ್ತು ಅವಿನಾಶ್ ಬೆಳ್ಳಾರೆ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 5-15ಕ್ಕೆ ಚೆನ್ನೈಯ ಸುನಿಲ್ ಗಾರ್ಜಿಯನ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ವೈಭವ ರಮಣಿ ವಯೋಲಿನ್, ಬೆಂಗಳೂರಿನ ಬಿ.ಎಸ್. ಪ್ರಶಾಂತ್ ಮೃದಂಗ ಹಾಗೂ ಮಂಗಳೂರಿನ ಸುಮುಖ ಕಾರಂತ್ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 18 ಜನವರಿ 2026ರಂದು ಸಂಜೆ 3-00 ಗಂಟೆಗೆ ಸುರತ್ಕಲ್ ನ ಸಂಗೀತರಂಗ ಸಂಸ್ಥೆಯ ಗುರು ಶ್ರೀಮತಿ ಗಿರಿಜ ಜಿ. ಭಟ್ ಮತ್ತು ವಿದ್ಯಾರ್ಥಿಗಳ ಹಾಡುಗಾರಿಕೆಗೆ ಮಂಗಳೂರಿನ ಗೌತಮ್ ಭಟ್ ಪಿ.ಜಿ. ವಯೋಲಿನ್ ನಲ್ಲಿ ಮತ್ತು ಕಟೀಲಿನ ಶೈಲೇಶ್ ರಾವ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. 4-00 ಗಂಟೆಗೆ ಉಜಿರೆಯ ಕೃಷ್ಣಗಾನಸುಧಾ ಸಂಗೀತ ವಿದ್ಯಾಲಯದ ಗುರು ಶ್ರೀಮತಿ ಅನಸೂಯ ದೇವಸ್ಥಳಿ ಮತ್ತು ವಿದ್ಯಾರ್ಥಿಗಳ ಹಾಡುಗಾರಿಕೆಗೆ ಮಂಗಳೂರಿನ ಗೌತಮ್ ಭಟ್ ಪಿ.ಜಿ. ವಯೋಲಿನ್ ನಲ್ಲಿ ಮತ್ತು ಕಟೀಲಿನ ಶೈಲೇಶ್ ರಾವ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. 5-15 ಗಂಟೆಗೆ ಬೆಂಗಳೂರಿನ ವಂಶಿಧರ್ ವಿ. ಇವರ ಕೊಳಲು ವಾದನಕ್ಕೆ ಬೆಂಗಳೂರಿನ ಜನಾರ್ದನ ಎಸ್. ವಯೋಲಿನ್ ನಲ್ಲಿ ಬೆಂಗಳೂರಿನ ಸುನಿಲ್ ಸುಬ್ರಹ್ಮಣ್ಯ ಇವರು ಮೃದಂಗದಲ್ಲಿ ಮತ್ತು ಕೊಟ್ಟಾಯಂನ ಆರ್. ರೋಹಿತ್ ಪ್ರಸಾದ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ.

