ಕೋಟ : ಯಕ್ಷಾಂಗಣ ಟ್ರಸ್ಟ್ ಬೆಂಗಳೂರು ಸಂಯೋಜನೆಯಲ್ಲಿ ಆದಿತ್ಯ ಹೆಗಡೆ ವಿರಚಿತ ‘ಮಿತ್ರ ವಿಂದಾ ಪರಿಣಯ’ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 17 ಜನವರಿ 2026ರಂದು ಸಂಜೆ 5-00 ಗಂಟೆಗೆ ಕೋಟ ಹಂದೆ ಶ್ರೀ ಮಹಾಗಣಪತಿ ಮಹಾವಿಷ್ಣು ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ, ಚೆಂಡೆಯಲ್ಲಿ ಶಿವಾನಂದ ಕೋಟ ಮತ್ತು ಸುದೀಪ ಉರಾಳ ಹಾಗೂ ಮುಮ್ಮೇಳದಲ್ಲಿ ತಮ್ಮಣ್ಣ ಗಾಂವ್ಕರ್, ಆದಿತ್ಯ ಹೆಗಡೆ, ಶಶಾಂಕ್ ಪಾಟೀಲ್, ರಾಘವೇಂದ್ರ ತುಂಗ ಕೆ., ಸ್ಪೂರ್ತಿ ಭಟ್, ಅಬ್ದುಲ್ ರವೂಫ್, ನರಸಿಂಹ ತುಂಗ, ರಾಘವೇಂದ್ರ ತುಂಗ, ಶಶಾಂಕ ಉರಾಳ, ಮಹೇಶ್ ಮಧ್ಯಸ್ಥ, ರಾಜು ಪೂಜಾರಿ, ನಾಗರಾಜ ಪೂಜಾರಿ ಇನ್ನಿತರರು ಸಹಕರಿಸಲಿದ್ದಾರೆ.

