ಕಾಸರಗೋಡು : ಪೆರ್ಲ ಸಮೀಪದ ಬಳ್ಳಂಬೆಟ್ಟು ಶ್ರೀ ಪರಿವಾರ ಸಹಿತ ಶಾಸ್ತಾರ ದೇವಳದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ದಿನಾಂಕ 14 ಜನವರಿ 2026ರಂದು ಅಗರಿ ಭಾಗವತ ವಿರಚಿತ ‘ಶಾಂಭವಿ ವಿಲಾಸ’ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್ ಭಟ್ ಹೊಸ ಮೂಲೆ, ಚೆಂಡೆ ಮದ್ದಳೆಗಳಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ಶುಭಾ ಅಡಿಗ (ರಕ್ತಬೀಜ), ಶುಭಾ ಗಣೇಶ್ (ಚಂಡ), ಶಾರದ ಅರಸ್ (ಮುಂಡ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಸತತ ಮೂರು ವರ್ಷಗಳಿಂದ ಆಂಜನೇಯ ಮಹಿಳಾ ಯಕ್ಷಗಾನ ಸಂಘಕ್ಕೆ ತಾಳಮದ್ದಳೆ ಮಾಡುವರೇ ಅವಕಾಶವಿತ್ತ ಪ್ರಾಯೋಜಕರಾದ ಬದಿಯಡ್ಕದ ಉದ್ಯಮಿ ಗಿರಿಧರ ಪೈಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

