ಬಂಟ್ವಾಳ : ಕಥಾಬಿಂದು ಪ್ರಕಾಶನ ಮಂಗಳೂರು, ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ನೇತ್ರಾವತಿ ಸಂಗಮ ಜೋಡುಮಾರ್ಗ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಸಮಿತಿ ಅಶ್ರಯದಲ್ಲಿ ‘ಕಥಾಬಿಂದು ಸಾಹಿತ್ಯ ಸಂಭ್ರಮ -2026’ ದಿನಾಂಕ 04 ಜನವರಿ 2025ರಂದು ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸಾಹಿತ್ಯ ಜನಮನವನ್ನು ತಲುಪಬೇಕು. ಪುಸ್ತಕ ಓದುವ ಪ್ರವೃತ್ತಿ ಬೆಳೆಯಬೇಕು. ಪುಸ್ತಕಗಳನ್ನು ಪ್ರಕಟಣೆಗೆ ಸಹಕಾರ ನೀಡುವ ಮೂಲಕ ಬರೆಯುವವರಿಗೆ ಪ್ರೋತ್ಸಾಹ ನೀಡಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ಭಾಗವಹಿಸಿ “ಸಾಹಿತ್ಯದಿಂದ ಸಂಘಟನೆ ಸಾಧ್ಯ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಾಹಿತ್ಯ ಹೆಚ್ಚು ಹೆಚ್ಚು ಪ್ರಕಟವಾಗಬೇಕು” ಎಂದರು. ಹಿರಿಯ ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಕ.ಚು.ಸಾ.ಪ. ಬಂಟ್ವಾಳ ತಾಲೂಕು ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಕವಯಿತ್ರಿ ಡಾ. ಶಾಂತ ಪುತ್ತೂರು ಸಮ್ಮೇಳನಕ್ಕೆ ಶುಭ ಹಾರೈಸಿ ಮಾತನಾಡಿದರು.
ಹಿರಿಯ ಸಾಹಿತಿ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹಾ.ಮ. ಸತೀಶ್ ಬೆಂಗಳೂರು, ಶಾರದಾ ಮೊಳೆಯಾರ್, ಪ್ಲಾವಿಯಾ ಅಲ್ಬುಕರ್ಕ್ ಪುತ್ತೂರು, ಗೀತಾ ಕೊಂಕೋಡಿ, ಸೌಮ್ಯ ಆರ್. ಶೆಟ್ಟಿ, ರೋಹಿಣಿ ಆಚಾರ್ಯ ಪುತ್ತೂರು, ಮಲ್ಲಿಕಾರ್ಜುನ ಕೆರೊಡಿ, ಸವಿತಾ ಕರ್ಕೇರ ಕಾವೂರು, ಸುರೇಶ ಎಂ. ಹರಿಜನ, ಅಶ್ವಿಜ ಶ್ರೀಧರ, ಮಮತ ಡಿ.ಕೆ., ಸುರೇಶ್ ಕುಮಾರ್ ಚಾರ್ವಕ, ಜಯರಾಮ ಪಡ್ರೆ, ಶಿಲ್ಪ ಎನ್., ವಿಂದ್ಯಾ ಕುದ್ಪಾಜೆ, ಶ್ವೇತಾ ಡಿ. ಬಡಗಬೆಳ್ಳೂರು, ರಮೇಶ್ ಮೆಲ್ಕಾರ್, ರಜನಿ ಚಿಕ್ಕಯ್ಯಮಠ ಮೊದಲಾದವರು ಸ್ವರಚಿತ ಕವನ ವಾಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಪತ್ರಕರ್ತೆ ವಾಣಿ ರಘುನಾಥ್ ಮುಂಬೈ, ಡಾ. ಜೋಸೆಫ್ ಲೋಬೋ, ಯಾದವ ಹರೀಶ್, ರಕ್ತದಾನಿ ಮಂಜು ಮೈಸೂರು, ಪೂರ್ಣಿಮಾ ಗುರುಮೂರ್ತಿ, ಅನಿಲ್ ಮೆಂಡೋನ್ಸಾ, ಮಂಜುನಾಥ ಕೆ. ಮೈಸೂರು, ಕುಮಾರ್, ಅರ್ನಾ ಎಸ್. ಭಟ್ ಇವರನ್ನು ‘ಕನ್ನಡ ರತ್ನ ರಾಜ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಎ.ಪಿ. ಉಮಾಶಂಕರಿ ಮರಿಕೆ ಇವರ ‘ಬಾಂಧವ್ಯದ ನೆಲೆ ಹಾಗೂ ತಿರುವುಗಳು’, ಪಂಕಜಾ ರಾಮ ಭಟ್ ಮುಡಿಪುರವರ ‘ಮಾನಸ ವೀಣೆ’, ಪುಷ್ಪ ಪ್ರಸಾದರ ‘ದಿವ್ಯಾಕ್ಷರಿ’, ನೀಮಾ ಲೋಬೋ ಇವರ ‘ಕನಸ್ಸೇ ಥ್ಯಾಂಕ್ಯೂ’, ಡಾ. ಕೊಳ್ಚಪ್ಪೆ ಗೋವಿಂದ ಭಟ್ಟರ ಸಂಪಾದಕತ್ವದ ‘ಕಥಾ ತೋರಣ’ ಕೃತಿಗಳನ್ನು ಹರಿಕೃಷ್ಣ ಪುನರೂರು ಲೋಕಾರ್ಪಣೆ ಮಾಡಿದರು.
ಕಥಾ ಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದು ಲೇಖಕರಿಗೆ ಅಭಿನಂದನೆ ಸಲ್ಲಿಸಿದರು. ಶೋಭ ದಿನೇಶ್ ಉದ್ಯಾವರ, ಗೀತಾ ಕೊಂಕೋಡಿ ನಿರೂಪಿಸಿದರು. ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿಕ್ಷಕಿ ರೇಖಾ ರಾವ್ ಕಾರ್ಯಕ್ರಮ ವಂದಿಸಿದರು.
