ಉಡುಪಿ : ಪ್ರಕಾಶ್ ಮಲ್ಪೆ ಇವರ ‘ರತ್ನಗರ್ಭಾ ವಸುಂಧರಾ’ ಕೃತಿ ಲೋಕರ್ಪಣಾ ಸಮಾರಂಭವನ್ನು ದಿನಾಂಕ 29 ಜನವರಿ 2026ರಂದು ಪೂರ್ವಾಹ್ನ 10-00 ಗಂಟೆಗೆ ಉಡುಪಿಯ ಶ್ರೀ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಆಧ್ಯಾತ್ಮಿಕ ಚಿಂತಕರಾದ ಡಾ. ವೀಣಾ ಬನ್ನಂಜೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಕಾರ್ಯವಾಹರು ಪ್ರಕಾಶ್ ಪಿ.ಎಸ್. ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

