ಮಂಗಳೂರು : ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಅಶೋಕನಗರ, ಉರ್ವಸ್ಟೋರ್ ಮಂಗಳೂರು ಇದರ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ‘ಮಹಿಳಾ ವೈಭವ -2026’ ಕಾರ್ಯಕ್ರಮವನ್ನು ದಿನಾಂಕ 01 ಮತ್ತು 02 ಫೆಬ್ರುವರಿ 2026ರಂದು ಬೆಳಿಗ್ಗೆ 9-30 ಗಂಟೆಗೆ ಮಂಗಳೂರಿನ ನೆಹರು ಮೈದಾನ ಮತ್ತು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 01 ಫೆಬ್ರುವರಿ 2026ರಂದು ಮಂಗಳೂರಿನ ನೆಹರು ಮೈದಾನದ ಅಬ್ಬಕ್ಕ ವೇದಿಕೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ‘ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ, ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಬೆಳಿಗ್ಗೆ 8-30 ಗಂಟೆಗೆ ಮಹಿಳಾ ಜಾಥಾ, ಧ್ವಜಾರೋಹಣ ಮತ್ತು ಜಾನಪದ ಕ್ರೀಡೋತ್ಸವ ನಡೆಯಲಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ, ಆರೋಗ್ಯ ಶಿಬಿರ, ಮಾರಾಟ ಮಳಿಗೆ ಉದ್ಘಾಟನೆ ನಡೆಯಲಿದೆ.
ದಿನಾಂಕ 02 ಫೆಬ್ರುವರಿ 2026ರಂದು ಸಂಜೆ 3-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸನ್ಮಾನ್ಯ ಜೈಜುನ್ನೀಸಾ ಇವರು ದೀಪ ಪ್ರಜ್ವಲನೆ ಮಾಡಲಿದ್ದು, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಸನ್ಮಾನ ಚಂಚಲಾ ತೇಜೋಮಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಇದರ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಇವರು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಲಿದ್ದಾರೆ.



