ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇದರ ಸಹಯೋಗದೊಂದಿಗೆ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವ’ವು ದಿನಾಂಕ 07-05-2023ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಡಿತ್ ರವಿಕಿರಣ್ ಮಣಿಪಾಲ್, ಎಂ.ಆರ್.ಪಿ.ಎಲ್. ಹಾಗೂ ಒ.ಎನ್.ಜಿ.ಸಿ. ಜನರಲ್ ಮ್ಯಾನೇಜರ್ ಮಂಜುನಾಥ ಎಚ್.ವಿ. ಮೊದಲಾದವರು ಉಪಸಿತರಿದ್ದರು.
ಧ್ಯಾನ ಸಂಗೀತ ಅಕಾಡೆಮಿ ಕಲಾ ಟಸ್ಟ್ ಇದರ ಆಧ್ಯಕ್ಷರಾದ ಶ್ರೀಮತಿ ಲೋಕೇಶ್ ಇವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಸಂಗೀತಗಾರರಾದ ಹಿರಿಯ ಕಲಾವಿದ ರಮಾನಾಥ್ ಕೋಟೆಕಾರ್ ಅವರನ್ನು ಸಮ್ಮಾನಿಸಲಾಯಿತು.
ಅನಂತರ ನಡೆದ ಪ್ರಖ್ಯಾತ ಹಿಂದೂಸ್ಥಾನಿ ಗಾಯಕರಾದ ಪಂಡಿತ್ ಕುಮಾರ್ ಮರ್ಡೂರ್ ಧಾರವಾಡ, ಶ್ರೀಮತಿ ಮೇಧಾ ಭಟ್ ಸಿದ್ದಾಪುರ, ಶ್ರೀ ವಿಶಾಲ ಭಗವಾನ್ ರಾವ್ ಮಹರ್ ಗುಡೆ, ಅಮಿತ್ ಕುಮಾರ್ ಬೆಂಗ್ರೆ ಹಾಗೂ ಧ್ಯಾನ ಸಂಗೀತ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮ ನಡೆಯಿತು. ಸಹ ವಾದನದಲ್ಲಿ ತಬಲ ವಾದಕರಾಗಿ ಶ್ರೀಧರ್ ಮಾಂಡ್ರೆ ಧಾರವಾಡ, ಶ್ರೀ ವಿಘ್ನೇಶ್ ಕಾಮತ್ ಕೋಟೇಶ್ವರ, ಹಾರ್ಮೋನಿಯಂ ವಾದನದಲ್ಲಿ ಶ್ರೀ ಶಶಿಕಿರಣ್ ಮಣಿಪಾಲ್, ಶ್ರೀ ಪ್ರಸಾದ್ ಕಾಮತ್ ಉಡುಪಿ ಮೊದಲಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಂದೇಶ್ ಕಾಮತ್ ಸ್ವಾಗತಿಸಿ, ಪ್ರತಾಪ್ ಕುಮಾರ್ ವಾರ್ಷಿಕ ವರದಿ ವಾಚಿಸಿ, ಅಮಿತ್ ಕುಮಾರ್ ಬೆಂಗ್ರೆ ಅವರು ವಂದಿಸಿ, ಆಶಾಲತಾ ಮತ್ತು ಡಾ. ರತಿ ನಿರೂಪಿಸಿದರು.