ಮಂಗಳೂರು : ಸಾಹಿತ್ಯ ಕ್ಷೇತ್ರದ ವಿಶಿಷ್ಟ ಸಾಧನೆಗಾಗಿ ಡಾ. ವಸಂತಕುಮಾರ ಪೆರ್ಲ ಇವರನ್ನು ಮಂಗಳೂರು ಹವ್ಯಕ ಸಭೆಯು ತನ್ನ ವಾರ್ಷಿಕೋತ್ಸವ ಸಂದರ್ಭದಲ್ಲಿ ದಿನಾಂಕ 19 ಜನವರಿ 2026ರಂದು ನಂತೂರಿನ ಶ್ರೀಭಾರತಿ ಕಾಲೇಜು ಸಭಾಂಗಣದಲ್ಲಿ ಸನ್ಮಾನಿಸಿತು. ಹವ್ಯಕ ಸಭಾದ ಅಧ್ಯಕ್ಷೆ ಗೀತಾದೇವಿ ಚೂಂತಾರು, ಪೂರ್ವಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ದ.ಕ. ಕಾಸರಗೋಡು ಹವ್ಯಕ ಮಹಾಸಭೆಯ ಅಧ್ಯಕ್ಷ ಗಿರೀಶ್ಚಂದ್ರ ಎ.ಟಿ., ಮುಖ್ಯ ಅತಿಥಿ ಡಾ. ಶಿವಶಂಕರ ಭಟ್ ಅಂಗ್ರಿ, ಹವ್ಯಕ ಸಭೆಯ ಸದಸ್ಯ ಅನಂತ ಶರ್ಮ ಮತ್ತು ದಿವಾಣ ಕೇಶವ ಭಟ್ ಉಪಸ್ಥಿತರಿದ್ದರು.
