ಮೂಲ್ಕಿ : ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 01 ಮಾರ್ಚ್ 2026ರ ಭಾನುವಾರ ಕಟೀಲು ದೇಗುಲದ ಕುದ್ರುವಿನಲ್ಲಿ ನಡೆಯಲಿದೆ. ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದ ಸಲುವಾಗಿ ಮೂಲ್ಕಿ ತಾಲೂಕಿನ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ ರಚನೆ (ಎ4 ಹಾಳೆಯಲ್ಲಿ ಒಂದು ಪುಟ), ಕವನ ರಚನೆ ಸ್ಪರ್ಧೆ (12 ಸಾಲುಗಳು), ಹಾಸ್ಯ ಬರಹ ಸ್ಪರ್ಧೆ (ಎರಡು ಪುಟ), ನಾನು ಓದಿದ ಉತ್ತಮ ಪುಸ್ತಕ – ಪ್ರಬಂಧ ಸ್ಪರ್ಧೆ (ಎರಡು ಪುಟ) ಆಯೋಜಿಸಲಾಗಿದೆ. ಮೂಲ್ಕಿ ತಾಲೂಕಿನಲ್ಲಿ ವಾಸವಾಗಿರುವ, ಉದ್ಯೋಗದಲ್ಲಿರುವ ಮತ್ತು ಮೂಲತಃ ಮೂಲ್ಕಿ ತಾಲೂಕಿನವರಾಗಿ ಬೇರೆ ಕಡೆಗಳಲ್ಲಿ ಇರುವ ಸಾಹಿತ್ಯಾಸಕ್ತರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಪ್ರತಿ ವಿಭಾಗದಲ್ಲಿ ಉತ್ತಮವಾದ ಎರಡು ಬರಹಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧಿಗಳು ತನ್ನ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಬರಹಗಳನ್ನು ರಘುನಾಥ್ ಕಾಮತ್, ಅಂಚೆ ಕಚೇರಿ ಕಿನ್ನಿಗೋಳಿ, ಮೂಲ್ಕಿ ತಾಲೂಕು – 574150 ದೂರವಾಣಿ 9448887697 ಈ ವಿಳಾಸಕ್ಕೆ ದಿನಾಂಕ 21 ಫೆಬ್ರುವರಿ 2026ರ ಶನಿವಾರದ ಒಳಗಡೆ ತಲುಪಿಸಬೇಕು.
ಮೂಲ್ಕಿ ತಾಲೂಕಿನ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಹೀಗೆ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಾನು ಓದಿದ ಉತ್ತಮ ಪುಸ್ತಕ – ಪ್ರಬಂಧ ಸ್ಪರ್ಧೆ (ಎರಡು ಪುಟ), ಸಣ್ಣ ಕಥೆ ರಚನೆ ಸ್ಪರ್ಧೆ (ಒಂದು ಪುಟ). ಪ್ರತಿ ವಿಭಾಗದಲ್ಲಿ ಉತ್ತಮವಾದ ಎರಡು ಬರಹಗಳಿಗೆ ಬಹುಮಾನ ನೀಡಲಾಗುವುದು. ವಿದ್ಯಾರ್ಥಿ ತನ್ನ ಹೆಸರು, ಶಾಲೆ, ತರಗತಿ, ದೂರವಾಣಿ ಸಂಖ್ಯೆಯೊಂದಿಗೆ ಪ್ರಬಂಧ/ ಸಣ್ಣ ಕಥೆಯನ್ನು ರಾಜಶೇಖರ ಎಸ್., ಉಪ ಪ್ರಾಚಾರ್ಯರು, ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ, ಕಟೀಲು, ಮೂಲ್ಕಿ ತಾಲೂಕು-574148, ದೂರವಾಣಿ 9880687478 ಈ ವಿಳಾಸಕ್ಕೆ ದಿನಾಂಕ 21 ಫೆಬ್ರುವರಿ 2026ರ ಶನಿವಾರದ ಒಳಗಡೆ ತಲುಪಿಸಬೇಕು ಎಂದು ತಿಳಿಸಿದೆ.
