ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ಬಸಂತ್ ಉತ್ಸವ್’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 01 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಂಡಿತ್ ಮಲ್ಯಾಬನ್ ಚಟರ್ಜಿ ಇವರ ಹಾಡುಗಾರಿಕೆ, ಪಂಡಿತ್ ಆಶಿಶ್ ಸೇನ್ ಗುಪ್ತಾ ಇವರ ಏಕವ್ಯಕ್ತಿ ತಬಲಾ ವಾದನ ಮತ್ತು ಪಂಡಿತ್ ಪಾರ್ಥ ಬೋಸ್ ಇವರ ಸಿತಾರ್ ವಾದನಕ್ಕೆ ಸರ್ಫರಾಜ್ ಖಾನ್ ಸಾರಂಗಿ ಮತ್ತು ರೂಪಕ್ ಕಲ್ಲೂರ್ಕರ್ ತಬಲಾ ಸಾಥ್ ನೀಡಲಿದ್ದಾರೆ.

