ಬೆಂಗಳೂರು : ‘ಈ ಹೊತ್ತಿಗೆ ಟ್ರಸ್ಟ್’ ನೀಡುವ 2026ನೇ ಸಾಲಿನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರ ‘ಪೆನಲೊಪಿ’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಕಥೆಗಾರ ಎಂ. ಮನೋಹರ ಪೈ ಇವರ ‘ಲಾಧಾಕ್ಷಿಸ್ಣ ಮತ್ತು ಇಂದಿಲಾ ಕ್ಯಾಂಟೀನು’ ಅಪ್ರಕಟಿತ ಕಥಾಸಂಕಲನ ಆಯ್ಕೆಯಾಗಿವೆ.
ಪ್ರಶಸ್ತಿಗಳು ತಲಾ ರೂ.10,000/- ನಗದು ಒಳಗೊಂಡಿವೆ. ಕಾವ್ಯ ವಿಭಾಗದಲ್ಲಿ ಕವಿ ಆನಂದ ಝುಂಜರವಾಡ ಮತ್ತು ಕಥಾ ವಿಭಾಗದಲ್ಲಿ ಲೇಖಕಿ ಜಯಶ್ರೀ ದೇಶಪಾಂಡೆ ತೀರ್ಪುಗಾರರಾಗಿದ್ದರು. ಚಿತ್ರದುರ್ಗದ ತಾರಿಣಿ ಶುಭದಾಯಿನಿ ಅವರ ಹಲವು ಕವನ ಸಂಕಲನ, ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಕಾರ್ಕಳದ ಮನೋಹರ ಪೈ ಅವರ ಕಥಾ ಸಂಕಲನ ಮತ್ತು ಕಾದಂಬರಿಗಳು ಪ್ರಕಟವಾಗಿವೆ. ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ.
