ಮಂಗಳೂರು : ಸುರ್ ಸೊಭಾಣ್ ಗಾಯನ ತರಬೇತಿ ಶಾಲೆಯ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ‘ಸುರ್ ಸುರಾಯ್’ (ಸ್ವರ -ಶ್ರಾವ್ಯ) ಎಂಬ ಸಂಗೀತ ಕಾರ್ಯಕ್ರಮವು ದಿನಾಂಕ 01 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ.
ಇದು ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 290ನೇ ಕಾರ್ಯಕ್ರಮವಾಗಿದ್ದು, ಪ್ರಸಿದ್ಧ ಗಾಯಕಿ ಹಾಗೂ ಹಿಂದೂಸ್ತಾನಿ ಸಂಗೀತ ತರಬೇತುದಾರರಾದ ಶಿಲ್ಪಾ ತೇಜಸ್ವಿನಿ ಕುಟಿನ್ಹಾ ಇವರ ನಿರ್ದೇಶನದಲ್ಲಿ ತರಬೇತಿ ಪಡೆದ ಮಕ್ಕಳು ಹಿಂದೂಸ್ತಾನಿ ಗಾಯನದ ವಿವಿಧ ರಾಗಗಳನ್ನು ಮತ್ತು ಕೆಲ ಕೊಂಕಣಿ ಹಾಡುಗಳನ್ನು ಹಾಡಲಿರುವರು. ಅದೇ ರೀತಿ ಎರಿಕ್ ಒಝೇರಿಯೊ ಸ್ವರ ಸಂಯೋಜಿಸಿದ ಕೆಲ ಹಾಡುಗಳನ್ನು ಶಾಸ್ತ್ರೀಯ ಸರ್ಗಮದ ಆಧಾರದಲ್ಲಿ ಹಾಡುವ ಪ್ರಯೋಗ ಮೊದಲ ಬಾರಿಗೆ ನಡೆಯಲಿದೆ. ಮಕ್ಕಳೇ ಹಾಡುಗಳ ವಿವರಣೆ ನೀಡಿ, ಕಾರ್ಯಕ್ರಮ ನಿರೂಪಿಸಲಿದ್ದಾರೆ. ಕೆಲ ಪೋಷಕರು ಒಂದು ಹಾಡನ್ನು ಹಾಡಲಿದ್ದಾರೆ. ಉದಯೋನ್ಮುಖ ಸಂಗೀತಗಾರ ಕೇತನ್ ಕ್ಯಾಸ್ತೆಲಿನೊ ನಿರ್ದೇಶನದಲ್ಲಿ ಆಶ್ವಿಲ್ ಕುಲಾಸೊ, ಹ್ಯಾನ್ಸನ್ ಲಸ್ರಾದೊ, ಶನನ್ ಕುಟಿನ್ಹಾ ಮತ್ತು ಐಸ್ಟನ್ ರೊಡ್ರಿಗಸ್ ಸಂಗೀತ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

