ಶಿವಮೊಗ್ಗ : ಕರ್ನಾಟಕ ಸಂಘದಿಂದ 2025ನೇ ಸಾಲಿನ ‘ಪುಸ್ತಕ ಬಹುಮಾನ’ಕ್ಕೆ ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. 2025ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕಾದಂಬರಿ, ಅನುವಾದ, ಮಹಿಳಾ ಸಾಹಿತ್ಯ, ಅಂಕಣ ಬರಹ, ನಾಟಕ, ಪ್ರವಾಸ ಸಾಹಿತ್ಯ, ಕವನ ಸಂಕಲನ ಸೇರಿದಂತೆ ಒಟ್ಟು 12 ವಿಭಾಗಗಳಲ್ಲಿ ಕೃತಿಗಳನ್ನು ಕಳುಹಿಸಬಹುದು.
ಬಹುಮಾನಕ್ಕೆ ಕಳುಹಿಸುವ ಕೃತಿಗಳು ಮರು ಮುದ್ರಣ ಆಗಿರಬಾರದು. ಹಸ್ತಪ್ರತಿ, ಸಂಪಾದಿತ ಕೃತಿಗಳಿಗೆ ಅವಕಾಶ ಇಲ್ಲ. ಈ ಹಿಂದೆ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಬಹುಮಾನಕ್ಕೆ ಒಟ್ಟು 4 ಪುಸ್ತಕ ಕಳುಹಿಸಬೇಕು. ಕೃತಿ ಕಳುಹಿಸಲು 31 ಮಾರ್ಚ್ 2026 ಕಡೆಯ ದಿನವಾಗಿದೆ.
ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಕೋರಿಯರ್ ಅಥವಾ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಸಲ್ಲಿಸಬೇಕು. ಆಯ್ಕೆಯಾದ ಕೃತಿಗಳಿಗೆ ರೂ.10,000 ನಗದು ಬಹುಮಾನವಿದೆ. ಮಾಹಿತಿಗೆ 9980159696 ಸಂಪರ್ಕಿಸಬಹುದು.
