ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 07 ಫೆಬ್ರವರಿ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-11’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ. ಕೊಂಕಣಿಯ ಜನಪ್ರಿಯ ಗಾಯಕರಾದ ಶ್ರೀಮತಿ ಝೀನಾ ಪಿರೇರಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಂಕಣಿಯ ಹಿರಿಯ ಕಾರ್ಯಕರ್ತೆ ಹಾಗೂ ಹೆಸರಾಂತ ಕವಯತ್ರಿಗಳಾದ ಶ್ರೀಮತಿ ಜ್ಯೂಲಿಯೆಟ್ ಮೊರಾಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಖ್ಯಾತ ಕವಿಗಳಾದ ಶ್ರೀ ವಿನ್ಸೆಂಟ್ ಆಳ್ವರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಮ್ಯಾಕ್ಸಿಂ ಲುದ್ರಿಗ್ ಬೊಂದೆಲ್, ಸೀಮಾ ಕಾಮತ್, ಜಗದೀಶ್ ಭಂಡಾರಿ, ಮಾರ್ಟಿನ್ ಆರ್. ಡಿಸೋಜಾ, ಸಿ. ಸಿಲ್ವಿಯಾ ಸುವಾರಿಸ್, ವನಿತಾ ನಾಯಕ್, ರೋಶನ್ ಕ್ರಾಸ್ತಾ, ಜೊಯ್ಸ್ ಪಿಂಟೊ ಮತ್ತು ಫೆಲ್ಸಿ ಲೋಬೊ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
