ಧಾರವಾಡ : ರಾಷ್ಟ್ರೀಯ ಸಾಹಿತ್ಯ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾದ ಧಾರವಾಡ ಕಟ್ಟೆ (ರಿ.) ಇದರ ವತಿಯಿಂದ 359ನೇ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆಯನ್ನು ದಿನಾಂಕ 05 ಫೆಬ್ರವರಿ 2026ರಂದು ಸಂಜೆ 6-00 ಗಂಟೆಗೆ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿ ಹಿರೆಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಪ್ರಕಾಶ್ ಶೆಟ್ಟಿ ಎಚ್. ಮತ್ತು ಕಲಬುರುಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜ ಡೋಣೂರ ಇವರು ‘ಯಶೋಧರ ಚರಿತೆ ಎಂಬ ಮತಿ ಮತ್ತು ಮತಲೋಕ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

