Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಹಾಲಾಡಿಯವರು ಮಾಡಿದ ‘Solo ಟ್ರಿಪ್’ ಕಥನ

    February 5, 2026

    ಹರಿಕಥಾ ಪರಿಷತ್ತಿನ 16ನೇ ವಾರ್ಷಿಕೋತ್ಸವ

    February 5, 2026

    ಡಾ. ಕೆ.ಬಿ. ಸೂರ್ಯಕುಮಾರ್‌ಗೆ ‘ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’ ಪ್ರಕಟ

    February 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಡಾ. ಸುಂದರ ಕೇನಾಜೆಯವರ ಕೃತಿ ಬಿಡುಗಡೆ | ಜನವರಿ 31
    Book Release

    ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಡಾ. ಸುಂದರ ಕೇನಾಜೆಯವರ ಕೃತಿ ಬಿಡುಗಡೆ | ಜನವರಿ 31

    January 26, 2026Updated:February 5, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುಳ್ಯ : ಲೇಖಕ, ಸಂಶೋಧಕ ಡಾ. ಸುಂದರ ಕೇನಾಜೆಯವರ ‘ಮಾತಿಲ್ಲದ ಮಾತು’ ಕೃತಿಯು ದಿನಾಂಕ 31 ಜನವರಿ 2026ರಂದು ಸಂಜೆ 4-00 ಗಂಟೆಗೆ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆಯಾಗಲಿದೆ. ಸುಳ್ಯ ಪ್ರೆಸ್ ಕ್ಲಬ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಕೃತಿ ಬಿಡುಗಡೆಗೊಳಿಸಲಿದ್ದು, ಖ್ಯಾತ ವ್ಯಂಗ್ಯ ಚಿತ್ರಕಾರ, ವಿಮರ್ಶಕ ದಿನೇಶ್ ಕುಕ್ಕುಜಡ್ಕ ಕೃತಿಯ ಕುರಿತು ಮಾತನಾಡಲಿದ್ದಾರೆ. ಲೇಖಕ ಡಾ. ಸುಂದರ ಕೇನಾಜೆ, ಪ್ರೆಸ್ ಕ್ಲಬ್ಬಿನ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ ಅಧ್ಯಕ್ಷ ಯಶ್ವಿತ್ ಕಾಳಮನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

    ಈಗಾಗಲೇ ಕನ್ನಡ ಮತ್ತು ತುಳು ಭಾಷೆಯಲ್ಲಿ ಪ್ರಕಟಗೊಂಡಿರುವ ಅವರ ಒಟ್ಟು ಕೃತಿಗಳಲ್ಲಿ 23ನೇ ಕೃತಿಯಾಗಿ ಈ ‘ಮಾತಿಲ್ಲದ ಮಾತು’ ಸೇರ್ಪಡೆಗೊಳ್ಳುತ್ತಿದೆ. 3 ಕಥಾ ಸಂಕಲನ, 8 ಸಂಶೋಧನಾ ಕೃತಿ, ಒಂದು ಪ್ರಬಂಧ ಸಂಕಲನ, 2 ವ್ಯಕ್ತಿಚಿತ್ರ, ಏಳು ಸಂಪಾದಿತ ಕೃತಿಗಳನ್ನು ಡಾ. ಕೇನಾಜೆ ಪ್ರಕಟಿಸಿಸಿದ್ದಾರೆ. 180 ಪುಟಗಳ ‘ಮಾತಿಲ್ಲದ ಮಾತು’ ಕೃತಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಪ್ರಾದೇಶಿಕ ಚರಿತ್ರೆ, ಜಾನಪದ, ಕಲಾ ವಿಮರ್ಶೆ, ಮನೋವಿಜ್ಞಾನ, ಶಿಕ್ಷಣ, ವ್ಯಕ್ತಿ ಮತ್ತು ಕೃತಿ ಪರಿಚಯ ಎನ್ನುವ ವೈವಿಧ್ಯ ವಸ್ತು ಬರಹಗಳಿವೆ. ಅಧ್ಯಯನ, ಅನುಭವ ಮತ್ತು ಕ್ಷೇತ್ರ ಕಾರ್ಯದ ಮಾಹಿತಿಯನ್ನು ಒಳಗೊಂಡ ಬರಹಗಳು ಇದೆ. ಎಲ್ಲಾ ಲೇಖನಗಳು ಒಂದೇ ಚೌಕಟ್ಟಿನೊಳಗೆ ಒಳಗೊಳ್ಳುವಂತೆ ಪ್ರಕಟಗೊಂಡಿದ್ದರೂ ಪ್ರತೀ ಲೇಖನಗಳು ಆಕರ್ಷಕ ಶೀರ್ಷಿಕೆ ಮತ್ತು ಗಮನ ಸೆಳೆಯುವ ಒಳನೋಟಗಳಿಂದ ಕೂಡಿದ್ದಾಗಿವೆ. ಮೈಸೂರಿನ ಮಡಿಲು ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ. ಹಿರಿಯ ಪತ್ರಕರ್ತ ಮುಳ್ಳೂರು ರಾಜು ಮುನ್ನುಡಿಯ ಮಾತುಗಳನ್ನು ಕನ್ನಡದ ಖ್ಯಾತ ಸಾಹಿತಿಗಳ ಅಭಿಪ್ರಾಯಗಳ ಬೆನ್ನುಡಿಯ ಕೆಲವು ವಾಕ್ಯಗಳನ್ನೂ ನೀಡಲಾಗಿದೆ. ಆಕರ್ಷಕ ಮುಖಪುಟವನ್ನು ಈ ಕೃತಿ ಹೊಂದಿದೆ.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಹೆಸರಾಂತ ಹಿರಿಯ ಸಂಶೋಧಕಿ ಅಪೂರ್ವ ಬರಹಗಾರ್ತಿ ಡಾ. ಜೋತ್ಸ್ನಾ ಕಾಮತ್
    Next Article ಸಾಹಿತ್ಯ ವೈಭವದಲ್ಲಿ ಕೃತಿಗಳ ಲೋಕಾರ್ಪಣೆ, ತುಳು ಮತ್ತು ಕನ್ನಡ ಕವಿಗೋಷ್ಠಿ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಹಾಲಾಡಿಯವರು ಮಾಡಿದ ‘Solo ಟ್ರಿಪ್’ ಕಥನ

    February 5, 2026

    ಹರಿಕಥಾ ಪರಿಷತ್ತಿನ 16ನೇ ವಾರ್ಷಿಕೋತ್ಸವ

    February 5, 2026

    ಡಾ. ಕೆ.ಬಿ. ಸೂರ್ಯಕುಮಾರ್‌ಗೆ ‘ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’ ಪ್ರಕಟ

    February 5, 2026

    ಮಂಗಳೂರಿನ ಪುರಭವನದಲ್ಲಿ ‘ಮಾರ್ಗಂ ಮಾಧುರ್ಯಂ’ ಭರತನೃತ್ಯ ಸಮೂಹ ಪ್ರಸ್ತುತಿ | ಫೆಬ್ರವರಿ 08

    February 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.