ಮುಂಬೈ : ಮೈಸೂರು ಅಸೋಸಿಯೇಷನ್ ಮುಂಬಯಿಯ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ ‘ನೇಸರು ಜಾಗತಿಕ ಶಿಶು ಕವನ ರಚನಾ ಸ್ಪರ್ಧೆ -2025’, ‘ನೇಸರು ಜಾಗತಿಕ ಸಣ್ಣ ಕತೆ ಸ್ಪರ್ಧೆ 2025’ ಮತ್ತು ‘ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ -2025’ಯ ಫಲಿತಾಂಶ ಪ್ರಕಟವಾಗಿದೆ.
‘ನೇಸರು ಜಾಗತಿಕ ಶಿಶು ಕವನ ರಚನಾ ಸ್ಪರ್ಧೆ -2025’ಯ ಪ್ರಥಮ ಬಹುಮಾನಕ್ಕೆ ಗುರುರಾಜ್ ಇವರ ‘ನನಗೂ ಒಂದು ರೋಬೋ ಸಿಕ್ಕರೆ’, ದ್ವಿತೀಯ ಬಹುಮಾನಕ್ಕೆ ಡಾ. ಟಿ.ಎಚ್. ಲವಕುಮಾರ ಇವರ ‘ಅಮ್ಮನ ಡಬ್ಬಿ’, ತೃತೀಯ ಬಹುಮಾನಕ್ಕೆ ರಮ್ಯ ಕೆ.ಜಿ. ಇವರ ‘ಪುಟ್ಟಿಯ ಮಳೆ ರಜೆ’ ಹಾಗೂ ಮೆಚ್ಚುಗೆಯ ಬಹುಮಾನಕ್ಕೆ ಮೀನಾಕ್ಷಿ ಸುರೇಶ್ ಭಾಂಗಿ ಇವರ ‘ಬಾರೋ ಭೂಮಿಯ ಕಂದ’ ಮತ್ತು ಸತ್ಯವತಿ ಭಟ್ ಕೊಳ ಚಪ್ಪು ಇವರ ‘ಬಸವಣ್ಣ’ ಕವನ ಆಯ್ಕೆಯಾಗಿದೆ.
‘ನೇಸರು ಜಾಗತಿಕ ಸಣ್ಣ ಕತೆ ಸ್ಪರ್ಧೆ 2025’ಯ ಪ್ರಥಮ ಬಹುಮಾನಕ್ಕೆ ವಿವೇಕ ಬೆಟ್ಕುಳಿ ಇವರ ‘ಹರಕೆ ಹುಂಜ’, ದ್ವಿತೀಯ ಬಹುಮಾನಕ್ಕೆ ಜಯರಾಮಚಾರಿ ಇವರ ‘ನೆಲದ ಗಾಯ’, ತೃತೀಯ ಬಹುಮಾನಕ್ಕೆ ಮುನವ್ವರ್ ಜೋಗಿಬೆಟ್ಟು ಇವರ ‘ಅರ್ಥದಾರಿ’ ಹಾಗೂ ಮೆಚ್ಚುಗೆಯ ಬಹುಮಾನಕ್ಕೆ ಭವ್ಯಾ ಪಿ.ಆರ್. ನಿಡ್ಪಳ್ಳಿ ಇವರ ‘ಕೊನೆಯವಳು’ ಮತ್ತು ಅಶ್ವಿತಾ ಶೆಟ್ಟಿ ಇನೋಳಿ ಇವರ ‘ದರಗು ಉಲಿಯ ಹೊಂಬಣ್ಣದ ಆಶಯ’ ಕಥೆ ಆಯ್ಕೆಯಾಗಿದೆ.
‘ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ -2025’ಯ ಪ್ರಥಮ ಬಹುಮಾನಕ್ಕೆ ವೆಂಕಟೇಶ ಪ್ರಸಾದ ರಾಮಕೃಷ್ಣ ಹೆಗಡೆ ಇವರ ‘ನಾರಿ ಭಾರತ’, ದ್ವಿತೀಯ ಬಹುಮಾನಕ್ಕೆ ಪ್ರಹ್ಲಾದ ಜೋಶಿ ಇವರ ‘ಎಲ್ಲಿದೆ ನಮ್ಮ ಮನೆ’, ತೃತೀಯ ಬಹುಮಾನಕ್ಕೆ ಅಕ್ಷತಾ ರಾಜ್ ಪೆರ್ಲ ಇವರ ‘ದಿ ಲಾಸ್ಟ್ ಅಟೋನ್ಮೆಂಟ್’ ನಾಟಕ ಆಯ್ಕೆಯಾಗಿದೆ. ಮಾರ್ಚ್ ನಲ್ಲಿ ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

