ಪುತ್ತೂರು : ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ (ರಿ.) ಇದರ ವತಿಯಿಂದ ಜಾತ್ರೋತ್ಸವದ ಅಂಗವಾಗಿ ತಾಳಮದ್ದಳೆ ಕೂಟವು ದಿನಾಂಕ 07 ಫೆಬ್ರವರಿ 2026ರಂದು ಪೂರ್ವಾಹ್ನ 10-00 ಗಂಟೆಗೆ ಶ್ರೀ ಕ್ಷೇತ್ರ ಬಾರ್ಯದಲ್ಲಿ ನಡೆಯಲಿದೆ.
‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದ ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ, ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಜಯರಾಮ ಭಟ್ ಮತ್ತು ಮುರಳೀಧರ ಕಲ್ಲೂರಾಯ ಹಾಗೂ ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ, ಡಾ. ಶ್ರೀಪತಿ ಕಲ್ಲೂರಾಯ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಶ್ರೀಮತಿ ರಾಜಶ್ರೀ ಶಬರಾಯ ಸಹಕರಿಸಲಿದ್ದಾರೆ.

