ಮಂಗಳೂರು: ಶ್ರೀ ಶಾರದಾ ನಾಟ್ಯಾಲಯ ಕುಳಾಯಿ-ಹೊಸಬೆಟ್ಟು ಮಂಗಳೂರು ಇವರ ರಜತ ಸಂಭ್ರಮದ ಪ್ರಯುಕ್ತ ನಡೆಯುವ ಸರಣಿ ಕಾರ್ಯಕ್ರಮ ‘ನೃತ್ಯ ಶರಧಿ’ ದಿನಾಂಕ 21-05-2023ರಂದು ಸಂಜೆ 5-30ರಿಂದ ಕುದ್ಮುಲ್ ರಂಗರಾವ್ ಪುರಭವನ ಮಂಗಳೂರು ಇಲ್ಲಿ ಸಂಪನ್ನಗೊಳ್ಳಲಿದೆ.
ನಾಟ್ಯ ರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಉಳ್ಳಾಲ ಶ್ರೀ ಮೋಹನ ಕುಮಾರ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಸನಾತನ ನಾಟ್ಯಾಲಯ ಮಂಗಳೂರು ಹಾಗೂ ವಿದ್ವಾನ್ ಶ್ರೀ ಕೆ. ಮುರಳೀಧರ್ ‘ಮಾಧವ ಸ್ಮರಣಮ್’ ಡಿಜಿಟಲ್ ಸ್ಟುಡಿಯೋ ಉಡುಪಿ ಇವರು ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
ಹಿಮ್ಮೇಳದಲ್ಲಿ ನೃತ್ಯ ನಿರ್ದೇಶನ : ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರಿಂದ, ನಟುವಾಂಗದಲ್ಲಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಮತ್ತು ವಿದುಷಿ ಶ್ರೀಮತಿ ಪ್ರಣತಿ ಸತೀಶ್. ಹಾಡುಗಾರಿಕೆಯಲ್ಲಿ ವಿದುಷಿ ಶ್ರೀಮತಿ ಅಪರ್ಣಾ ಶರ್ಮ ಪಾಂಡಿಚೇರಿ, ಮೃದಂಗ : ವಿದ್ವಾನ್ ಶ್ರೀ ಕೆ. ಬಾಲಚಂದ್ರ ಭಾಗವತ್ ಉಡುಪಿ, ಕೊಳಲು : ವಿದ್ವಾನ್ ಶ್ರೀ ಕೆ. ಮುರಳೀಧರ್ ಉಡುಪಿ, ಪಿಟೀಲು : ವಿದ್ವಾನ್ ಶ್ರೀ ಶ್ರೀಧರ ಅಚಾರ್ ಉಡುಪಿ, ಪ್ರಸಾದನ : ಶ್ರೀ ಮಧು ಕುಮಾರ್ ತೂಮಿನಾಡು, ವಸ್ತ್ರ ವಿನ್ಯಾಸ : ಶ್ರೀ ಸುನಿಲ್ ಉಚ್ಚಿಲ್ ಮಂಗಳೂರು, ನಿರೂಪಣೆ : ಶ್ರೀ ಎನ್.ಆರ್. ದಾಮೋದರ್ ಶರ್ಮಾ “ಶ್ರೀ ನವಾಕ್ಷರೀ’ ಬಾರಕೂರು, ಛಾಯಾಗ್ರಹಣ : ಶ್ರೀ ಗಣಪತಿ ರಾವ್ ಸುರತ್ಕಲ್ ಹಾಗೂ ವಿಡಿಯೋ : ಶ್ರೀ ಸತೀಶ್ ಸುರತ್ಕಲ್.
ಈ ಕಾರ್ಯಕ್ರಮಕ್ಕೆ ವಿದುಷಿ ಶ್ರೀಮತಿ ಭಾರತೀ ಸುರೇಶ್ ನಿರ್ದೇಶಕರು, ವಿದುಷಿ ಶ್ರೀಮತಿ ಪ್ರಣತಿ ಸತೀಶ್ ಸಹ ನಿರ್ದೇಶಕರು ತಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದಾರೆ.