Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೃತಿ ಲೋಕಾರ್ಪಣೆ, ಸಂವಾದ, ವಿನೂತನ ಯಕ್ಷಪ್ರಸ್ತುತಿ | ಫೆಬ್ರವರಿ 13

    February 12, 2026

    ಪುಸ್ತಕ ವಿಮರ್ಶೆ | ಗಣೇಶ್ ಪ್ರಸಾದ್ ಜೀ (ಜೀ ಜೀ)ಯವರ ‘ಕಾಂತೆ ಕವಿತೆ’

    February 12, 2026

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14
    Awards

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ ಕಾರ್ಯಕ್ರಮವನ್ನು ದಿನಾಂಕ 14 ಫೆಬ್ರವರಿ 2026ರಂದು ಪೆರ್ಮನ್ನೂರು ತೊಕ್ಕೊಟ್ಟು ಒಳಪೇಟೆಯ ಡಾ. ಅಂಬೇಡ್ಕರ್ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಮಧ್ಯಾಹ್ನ 2-00 ಗಂಟೆಗೆ ಸ್ವರ ಮಾಧುರ್ಯ ತಂಡದ ಶ್ರೀಮತಿ ಯಶಸ್ವಿನಿ ಉಳ್ಳಾಲ್ ಇವರಿಂದ ‘ನಾಡು ನುಡಿ ಗೀತೋತ್ಸವ’, 3-00 ಗಂಟೆಗೆ ಅಲ್ ಅಝ್ಝಾರಿಯಾ ದಫ್ ತಂಡದಿಂದ ದಫ್ ಕಾರ್ಯಕ್ರಮ ಮತ್ತು ಹುಸೈನ್ ಕಾಟಿಪಳ್ಳ ಬಳಗದಿಂದ ಬ್ಯಾರಿ ಹಾಡುಗಳ ಸಂಭ್ರಮ, 3-30 ಗಂಟೆಗೆ ಯುವವಾಹಿನಿ (ರಿ.) ಕೊಲ್ಯ ಘಟಕದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4-00 ಗಂಟೆಗೆ ಕೊಂಕಣಿ ಕಾರ್ಯಕ್ರಮದಲ್ಲಿ ಕುಡುಂಬಿ ನೃತ್ಯ, 4-30 ಗಂಟೆಗೆ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸಾ ಕಾಪು ತಂಡದವರಿಂದ ‘ಹಾಸ್ಯ ವೈವಿಧ್ಯ – ಬಲೇ ತೆಲಿಪಾಲೆ’, 5-00 ಗಂಟೆಗೆ ಪಜೀರು ನೃತ್ಯಲಹರಿ ನಾಟ್ಯಾಲಯದ ವಿದುಷಿ ರೇಶ್ಮಾ ನಿರ್ಮಲ್ ಭಟ್ ಇವರಿಂದ ‘ಸ್ವಾಗತ ನೃತ್ಯ’ ಪ್ರಸ್ತುತವಿದೆ.

    ಸಂಜೆ 5-30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಯು.ಟಿ. ಖಾದರ್ ಫರೀದ್ ಇವರು ವಹಿಸಲಿದ್ದು, ಸನ್ಮಾನ್ಯ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಸಾಯಿಗೀತಾ ಮತ್ತು ವಿದುಷಿ ರಾಜಶ್ರೀ ಉಳ್ಳಾಲ್ ಇವರಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಪ್ರದಾನ ಹಾಗೂ 80ನೇ ಹುಟ್ಟು ಹಬ್ಬದ ವರ್ಷಾಚರಣೆಯ ಪ್ರಯುಕ್ತ ಸನ್ಮಾನ್ಯ ಕೆ. ಜಯರಾಮ ಶೆಟ್ಟಿ ಇವರಿಗೆ ಗೌರವ ಸನ್ಮಾನ ಮಾಡಲಾಗುವುದು. ರಾತ್ರಿ 7-30 ಗಂಟೆಗೆ ಮಂಗಳೂರಿನ ಕಲಾಭಿ ತಂಡದಿಂದ ಮೂಲ ಜಾನಪದ ವೈವಿಧ್ಯಮಯ ನೃತ್ಯ, 8-00 ಗಂಟೆಗೆ ದಿನೇಶ್ ಅತ್ತಾವರ ಇವರ ನಿರ್ದೇಶನದಲ್ಲಿ ತುಳು ನಾಟಕ ‘ಜಾಗರ್ತೆ’ ಮತ್ತು 8-30 ಗಂಟೆಗೆ ಅಶ್ವಥ್ ಮಂಜನಾಡಿ ಇವರ ನಿರ್ದೇಶನದಲ್ಲಿ ‘ಯಕ್ಷ ನೃತ್ಯ’ ಪ್ರದರ್ಶನ ನಡೆಯಲಿದೆ.

    award baikady bharatanatyam dance felicitation folk Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮಿತ್ತಬೈಲು ಶ್ರೀ ರಾಮ ಭಜನಾ ಮಂದಿರದಲ್ಲಿ ‘ಶ್ರೀಮದ್ ಭಾಗವತ ಪುರಾಣ’ ಪ್ರವಚನ | ಫೆಬ್ರವರಿ 13ರಿಂದ 19
    Next Article ಪುಸ್ತಕ ವಿಮರ್ಶೆ | ಗಣೇಶ್ ಪ್ರಸಾದ್ ಜೀ (ಜೀ ಜೀ)ಯವರ ‘ಕಾಂತೆ ಕವಿತೆ’
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೃತಿ ಲೋಕಾರ್ಪಣೆ, ಸಂವಾದ, ವಿನೂತನ ಯಕ್ಷಪ್ರಸ್ತುತಿ | ಫೆಬ್ರವರಿ 13

    February 12, 2026

    ಪುಸ್ತಕ ವಿಮರ್ಶೆ | ಗಣೇಶ್ ಪ್ರಸಾದ್ ಜೀ (ಜೀ ಜೀ)ಯವರ ‘ಕಾಂತೆ ಕವಿತೆ’

    February 12, 2026

    ಮಿತ್ತಬೈಲು ಶ್ರೀ ರಾಮ ಭಜನಾ ಮಂದಿರದಲ್ಲಿ ‘ಶ್ರೀಮದ್ ಭಾಗವತ ಪುರಾಣ’ ಪ್ರವಚನ | ಫೆಬ್ರವರಿ 13ರಿಂದ 19

    February 12, 2026

    ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ‘ಆ ಊರು – ಈ ಊರು’ ನಾಟಕ ಪ್ರದರ್ಶನ | ಫೆಬ್ರವರಿ 15

    February 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.