Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೂಡುಬಿದಿರೆ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ
    Literature

    ಮೂಡುಬಿದಿರೆ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಪಕ್ಕಲಡ್ಕ

    February 14, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಕಡಂದಲೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ದಿನಾಂಕ 21 ಫೆಬ್ರವರಿ 2026ರಂದು ನಡೆಯಲಿರುವ ಮೂಡುಬಿದಿರೆ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮಿಜಾರಿನ ಅಬ್ದುಲ್ ಹಮೀದ್ ಪಕ್ಕಲಡ್ಕ ಇವರು ಆಯ್ಕೆಯಾಗಿರುತ್ತಾರೆ ಎಂಬುದಾಗಿ ಕ.ಸಾ.ಪ. ಮೂಡುಬಿದಿರೆ ತಾಲೂಕು ಅಧ್ಯಕ್ಷರಾದ ಕೆ. ವೇಣುಗೋಪಾಲ ಶೆಟ್ಟಿಯವರು ತಿಳಿಸಿದ್ದಾರೆ.

    ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಪಕ್ಕಲಡ್ಕದ ಅಹಮ್ಮದ್ ಕೆ.ಪಿ. ಹಾಗೂ ಫಾತಿಮಾ ದಂಪತಿಯ ಸುಪುತ್ರರಾಗಿ 1947ರಲ್ಲಿ ಜನಿಸಿದ ಅವರು ಬಿ.ಕಾಂ ಪದವೀಧರರು. 1968ರಲ್ಲಿ ರಾಜ್ಯ ಸರಕಾರದ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು ನಂತರ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ಅಧೀಕ್ಷರಾಗಿಯೂ ಭಡ್ತಿ ಪಡೆದು 37 ವರ್ಷಗಳ ತನ್ನ ಸಾರ್ಥಕ ಸೇವೆಯನ್ನು ಮುಗಿಸಿ 2005ರಲ್ಲಿ ನಿವೃತ್ತರು. ಕೃಷಿಯ ಜೊತೆ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಅವರು ಸಣ್ಣ ಕಥಾ ರಚನೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದವರು. ಈಗಾಗಲೇ ‘ಪಾದದಡಿಯ ಸ್ಪರ್ಗ’, ‘ಬಿಳಿಗೋಡೆ’, ‘ಅಲೆಮಾರಿ’, ‘ಭ್ರಮೆ’ ‘ಒಂಟಿತೆಪ್ಪ’, ‘ನೆನಪುಗಳು ಸಾಯುವುದಿಲ್ಲ’, ‘ಮೋಹಕ್ಷಯ’ ಮತ್ತು ‘ಹಾದಿಯೇ ಇಲ್ಲದ ಹಾದಿ’ ಎಂಬ ಇವರ ಎಂಟು ಕಥಾಸಂಕಲನಗಳು ಪ್ರಕಟಗೊಂಡಿವೆ. ‘ಪಾದದಡಿಯ ಸ್ಪರ್ಗ’ ಕಥಾಸಂಕಲನವು ಶ್ರೀಮತಿ ಝುಬೇದ ಗುರುಪುರ ಇವರಿಂದ ‘ಕಾಲಡಿರೆ ಸ್ವರ್ಗ’ ಎಂಬ ಹೆಸರಿನಲ್ಲಿ ಬ್ಯಾರಿ ಭಾಷೆಗೆ ಅನುವಾದಗೊಂಡಿದೆ. ಇವರ ‘ಭ್ರಮೆ’ ಕಥಾಸಂಕಲನಕ್ಕೆ ‘ವರ್ಧಮಾನ ಉದಯೋನ್ಮುಖ ಪ್ರಶಸ್ತಿ’ (2017), ‘ಅಲೆಮಾರಿ’ ಕಥಾ ಸಂಕಲನಕ್ಕೆ ‘ಪಿ. ಲಂಕೇಶ್ ಪ್ರಶಸ್ತಿ’ ಮತ್ತು ಮುಸ್ಲಿಂ ಸಾಹಿತ್ಯ ಪ್ರಶಸ್ತಿ (2009), ‘ಒಂಟಿತೆಪ್ಪ’ ಕಥಾಸಂಕಲನಕ್ಕೆ ‘ನಿರತ ಸಾಹಿತ್ಯ ಪ್ರಶಸ್ತಿ’ (2020), ‘ಬಾಂಧವ್ಯ ಕಥಾಪುರಸ್ಕಾರ’ (2020) ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಭಾಷೆಯ ಕಥೆಗೆ ಕೊಡಮಾಡುವ ಬ್ಯಾರಿ ಸಾಹಿತ್ಯ ಸ್ಪರ್ಧಾ ಪುರಸ್ಕಾರ (2020)ವೂ ಇವರಿಗೆ ಸಂದಿವೆ. ಕೃಷಿ ಆಸಕ್ತಿಯ ಜೊತೆ ಯೋಗ ಮತ್ತು ಧ್ಯಾನವನ್ನು ತನ್ನ ಜೀವನದಲ್ಲಿ ಇವರು ಅಳವಡಿಸಿಕೊಂಡಿದ್ದಾರೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರು ವಿ.ವಿ.ಯಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ | ಫೆಬ್ರವರಿ 15
    Next Article ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16
    roovari

    Add Comment Cancel Reply


    Related Posts

    ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ

    February 14, 2026

    ಪ್ರೊ. ಬಿ.ಎ. ವಿವೇಕ ರೈಯವರ ‘ಪಡುವಣ ತೀರದ ಕನ್ನಡ ನಾಡಿನ’ ಕೃತಿ ಲೋಕಾರ್ಪಣೆ

    February 14, 2026

    ಮುಂಬೈಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ | ಫೆಬ್ರವರಿ 16

    February 14, 2026

    ಬೆಂಗಳೂರು ವಿ.ವಿ.ಯಲ್ಲಿ ‘ಕಾವ್ಯ ಶಿವರಾತ್ರಿ’ ಅಹೋರಾತ್ರಿ ಕಾವ್ಯ ಗಾಯನ | ಫೆಬ್ರವರಿ 15

    February 14, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.