ಉಜಿರೆ : ನಾಟ್ಯಾರಾಧನಾ ಕಲಾ ಕೇಂದ್ರ ಪ್ರಸ್ತುತ ಪಡಿಸುವ ನೃತ್ಯ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಶಿಷ್ಯೆಯರಾದ ಕುಮಾರಿ ಧರಿತ್ರಿ ಭಿಡೆ ಮತ್ತು ಕುಮಾರಿ ಹಂಸಿನೀ ಭಿಡೆ ಸಹೋದರಿಯರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ದಿನಾಂಕ 21 ಫೆಬ್ರವರಿ 2026ರಂದು ಸಂಜೆ ಗಂಟೆ 4-30ಕ್ಕೆ ಉಜಿರೆಯ ಎಸ್.ಡಿ.ಎಂ. ಕಾಲೇಜ್ ಕ್ಯಾಂಪಸ್ ನ ಇಂದ್ರಪ್ರಸ್ಥ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ, ಗುರು ಚಂದ್ರಶೇಖರ್ ನಾವಡ, ಡಾ. ಸತೀಶ್ಚಂದ್ರ ಎಸ್. ಮತ್ತು ಶರತ್ ಕೃಷ್ಣ ಪಾದ್ವೆಟ್ನಾಯ ಇವರುಗಳು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪೂರು ಬೆಂಗಳೂರು, ಮೃದಂಗ ವಾದನ ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು, ಕೊಳಲು ವಾದನ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಬೆಂಗಳೂರು ಮತ್ತು ವೀಣೆ ವಿದುಷಿ ಶ್ರೀಲತಾ ನಿಕ್ಷಿತ್ ಬೆಂಗಳೂರು ಸಹಕರಿಸಲಿದ್ದಾರೆ. ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತ ಕೋರಲಾಗಿದೆ.

