ಬೆಂಗಳೂರು : ನಾಟಕ ತಂಡಗಳು 50 ವರ್ಷ ಪೂರೈಸಿದ ಹಿನ್ನೆಲೆ ರಂಗಭೂಮಿ ದಿಗ್ಗಜರಿಗೆ ನಮನ ಸಲ್ಲಿಸುವುದಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 21ರಿಂದ 26 ಫೆಬ್ರವರಿ 2026ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಹೊನ್ನಾರು ನಾಟಕೋತ್ಸವ’ದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.
ದಿನಾಂಕ 21 ಫೆಬ್ರವರಿ 2026ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರು ಉದ್ಘನಟನೆ ಮಾಡಲಿದ್ದು, ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನಟ ಪ್ರಕಾಶ್ ರಾಜ್, ದತ್ತಣ್ಣ, ಶ್ರೀನಿವಾಸ್ ಕಪ್ಪಣ್ಣ, ಮೇರು ನಟಿಯರಾದ ಜಯಶ್ರೀ, ಡಾ. ಉಮಾಶ್ರೀ, ಗಿರೀಜಾ ಲೋಕೇಶ್, ನಿರ್ದೇಶಕ ಟಿ.ಎಸ್. ನಾಗಾಭರಣ, ವಿ.ಎಂ. ನಾಗೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ರಂಗೋತ್ಸವದಲ್ಲಿ ರಂಗಸಂಪದ, ಸಮುದಾಯ, ನಟರಂಗ, ಕಲಾ ಗಂಗೋತಿ, ಸ್ಪಂದನ ಹಾಗೂ ಬೆನಕ ತಂಡಗಳು ಪಾಲ್ಗೊಳ್ಳಲಿವೆ. ದಿನಾಂಕ 21 ಫೆಬ್ರವರಿ 2026ರಂದು ರಂಗಸಂಪದ ತಂಡದಿಂದ ಸಂಜೆ ಗಂಟೆ 7-00ಕ್ಕೆ ‘ಶರ್ಮಿಷ್ಠೆ’, ದಿನಾಂಕ 22 ಫೆಬ್ರವರಿ 2026ರಂದು ಸಮುದಾಯ ತಂಡದಿಂದ ಸಂಜೆ ಗಂಟೆ 6-30ಕ್ಕೆ ‘ಭಗವಂತನ ಮರಣ’, ದಿನಾಂಕ 23 ಫೆಬ್ರವರಿ 2026ರಂದು ನಟರಂಗ ತಂಡದಿಂದ ಸಂಜೆ ಗಂಟೆ 6-30ಕ್ಕೆ ‘ನೀರಗನ್ನಡಿ’, ದಿನಾಂಕ 24 ಫೆಬ್ರವರಿ 2026ರಂದು ಕಲಾ ಗಂಗೋತ್ರಿ ತಂಡದಿಂದ ಸಂಜೆ ಗಂಟೆ 6-30ಕ್ಕೆ ‘Moneyಯೇ ದೇವರು’, ದಿನಾಂಕ 25 ಫೆಬ್ರವರಿ 2026ರಂದು ಸ್ಪಂದನ ತಂಡದಿಂದ ಸಂಜೆ ಗಂಟೆ 6-30ಕ್ಕೆ ‘ಬೆಳಗಿನ ಕನಸು’, ದಿನಾಂಕ 26 ಫೆಬ್ರವರಿ 2026ರಂದು ಬೆನಕ ತಂಡದಿಂದ ಸಂಜೆ ಗಂಟೆ 6-30ಕ್ಕೆ ‘ಜೋಕುಮಾರಸ್ವಾಮಿ’ ನಾಟಕಗಳು ಪ್ರದರ್ಶನವಾಗಲಿವೆ.

