ಮಂಗಳೂರು : ಬ್ಯಾರಿ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಮಾಸಿಕ ಬ್ಯಾರಿವಾರ್ತೆ ತನ್ನ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಐವರು ಬ್ಯಾರಿ ಸಾಹಿತಿಗಳಿಗೆ ಗೌರವ ಪ್ರಶಸ್ತಿ ಪ್ರಕಟಿಸಿದೆ.
ಬ್ಯಾರಿವಾರ್ತೆಯಲ್ಲಿ ಕಳೆದ ಐದು ವರ್ಷಗಳಿಂದ ನಿರಂತರ 68 ಅಂಕಣಗಳನ್ನು ಬರೆದ ಹಪ್ಸಾ ಬಾನು ಬೆಂಗಳೂರು, ಬ್ಯಾರಿ ಬರಹಗಾರ ಹಿರಿಯ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಅನಿವಾಸಿ ಪತ್ರಕರ್ತ ಅಬ್ದುಲ್ ಸಲಾಮ್ ದೇರಳಕಟ್ಟೆ, ಕವಿ ಅಂಕಣಗಾರ ಯು.ಕೆ. ಖಾಲಿದ್ ಉಳ್ಳಾಲ್ಕಾರ್ ಮತ್ತು ಬ್ಯಾರಿ ವಾರ್ತೆ ಪತ್ರಿಕೆಗಾಗಿ ಹತ್ತು ವರ್ಷಗಳಿಂದ 75ಕ್ಕೂ ಹೆಚ್ಚು ಲೇಖನಗಳನ್ನು ಬರೆದ ಝುಲೇಖ ಮುಮಾಝ್ ಇವರುಗಳು ‘ಬ್ಯಾರಿವಾರ್ತೆಯ ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ಸಂಪಾದಕ ಬಶೀರ್ ಬೈಕಂಪಾಡಿ ತಿಳಿಸಿದ್ದಾರೆ.
