ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಪ್ರೇರಣಾ 5’ ಸಂಗೀತ ಕಛೇರಿ ಮತ್ತು ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ದಿನಾಂಕ 28 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಮಾಲೆಮಾರ್ ಇಲ್ಲಿರುವ ಗಾನ ನೃತ್ಯ ಅಕಾಡೆಮಿಯ ತರಂಗಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ವಿದುಷಿ ಶ್ರೇಯಾ ಕೊಲತ್ತಾಯ ಇವರ ಹಾಡುಗಾರಿಕೆಗೆ ವಿದುಷಿ ಸುನಾದ ಕೃಷ್ಣ ಅಮೈ ಇವರು ಮೃದಂಗ ಮತ್ತು ಕುಮಾರಿ ತನ್ಮಯೀ ಉಪ್ಪಂಗಳ ಇವರು ವಯೋಲಿನ್ ನಲ್ಲಿ ಸಹಕರಿಸಲಿದ್ದಾರೆ. ಬಳಿಕ ವಿದುಷಿ ರಶ್ಮಿ ಉಡುಪ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

