ಉಡುಪಿ : ಉಡುಪಿಯ ಚಿತ್ರಕಲಾಮಂದಿರ ಕಲಾ ವಿದ್ಯಾಲಯವು ಕನ್ನಡ ವಿಶ್ವವಿದ್ಯಾಲಯ, ಹಂಪಿ ಸಂಯೋಜನೆಯೊಂದಿಗೆ ‘ಚಿತ್ರಕಲೆಯಲ್ಲಿ ಪದವಿ’ ಪಡೆಯುವ ಅವಕಾಶ ಒದಗಿಸಿದೆ.
ಇದಕ್ಕೆ ಅಗತ್ಯವಿರುವ ವಿದ್ಯಾರ್ಹತೆ : ‘ಬ್ಯಾಚುಲರ್ ಇನ್ ವಿಜುವಲ್ ಆರ್ಟ್’ (BVA) ಪದವಿಗೆ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು ಹಾಗೂ ‘ಕಲಾಮೂಲ’ (PUC ತತ್ಸಮಾನ)ಕ್ಕೆ ಎಸ್.ಎಸ್.ಎಲ್.ಸಿ. ತೇರ್ಗಡೆ ಹೊಂದಿರಬೇಕು.
ಕಿವುಡ ಮತ್ತು ಮೂಗರಿಗೂ ಪ್ರವೇಶಕ್ಕೆ ಅವಕಾಶವಿದೆ. ಹಾಸ್ಟೆಲ್, ವಿದ್ಯಾರ್ಥಿ ವೇತನ, ಮಧ್ಯಾಹ್ನದ ಊಟ, 1000 ಪುಸ್ತಕಗಳ ಗ್ರಂಥಾಲಯಗಳ ಸೌಲಭ್ಯವಿದೆ.
ಬೋಧನಾ ವಿಷಯಗಳು – ನಿಸರ್ಗ, ಭಾವಚಿತ್ರ, ಶಿಲ್ಪ, ಮ್ಯೂರಲ್, ಕರಕುಶಲ ಕಲೆ, ಫೋಟೋಗ್ರಾಫಿ, ಸ್ಕ್ರೀನ್ ಪ್ರಿಂಟ್ ಇತ್ಯಾದಿ.
ಉದ್ಯೋಗ ಅವಕಾಶಗಳು – ಸಿನೇಮಾ, ಎನಿಮೇಶನ್, ಜಾಹೀರಾತು, ಡ್ರಾಯಿಂಗ್/ಕಾಫ್ಟ್ ಟೀಚರ್, ಗ್ರಾಫಿಕ್ ಡಿಸೈನ್, ಇಂಟಿರಿಯರ್ ಡೆಕೊರೇಶನ್.
ಸಂಪರ್ಕ ವಿಳಾಸ : ಚಿತ್ರಕಲಾ ಮಂದಿರ ಕಲಾ ವಿದ್ಯಾಲಯ, ರಾಜ್ ಟವರ್ಸ್ ಬಲಕ್ಕೆ, ಸಿಟಿ ಬಸ್ ಸ್ಟಾಂಡ್, ಉಡುಪಿ -576 101.
ದೂರವಾಣಿ ಸಂಖ್ಯೆ : 97392 49951, 7204144673, 8202522342 ಇಮೈಲ್ : [email protected]
ಸೂಚನೆ : ಈ ಶೈಕ್ಷಣಿಕ ವರ್ಷದಿಂದ ಎಸ್.ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳಿಗೆ ಕಲಾಮೂಲ (PUC ತತ್ಸಮಾನ) ತರಗತಿಗೆ ಪ್ರವೇಶ ನೀಡಲಾಗುವುದು.
ಬ್ಯಾಚುಲರ್ ಇನ್ ವಿಜುವಲ್ ಆರ್ಟ್ (ಬಿವಿಎ) ಹಾಗೂ ಕಲಾಮೂಲ (PUC ತತ್ಸಮಾನ)
ಅರ್ಹತೆ: ಬ್ಯಾಚುಲರ್ ಇನ್ ವಿಜುವಲ್ ಆರ್ಟ್ (ಬಿವಿಎ)ಗೆ ದ್ವಿತೀಯ ಪಿಯುಸಿ ಹಾಗೂ ಕಲಾಮೂಲಕ್ಕೆ ಎಸ್.ಎಸ್.ಎಲ್.ಸಿ. ಪಾಸ್ ಆಗಿರಬೇಕು.