ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಹಿಳೆಯರ ಕನ್ನಡದ ಶ್ರೇಷ್ಠ ಕೃತಿಗಳಿಗೆ 2022 ನೇ ಸಾಲಿನ “ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ”ಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದೆ.
ಮೂರು ಅತ್ಯುತ್ತಮ ಕೃತಿಗಳನ್ನು ಆಯ್ಕೆಮಾಡಿ, ಪ್ರತಿಯೊಂದು ಕೃತಿಗೂ ರೂ. 15,000(ಹದಿನೈದು ಸಾವಿರ)ವನ್ನು ಬಹುಮಾನ ನೀಡಿ ಗೌರವಿಸಲಾಗುವುದು.
ನಿಯಮಗಳು
1. ಈ ಬಹುಮಾನಕ್ಕೆ ಮಸ್ತಕಗಳನ್ನು ಲೇಖಕಿಯರು ಮಾತ್ರ ಕಳುಹಿಸಬೇಕು.
2. ಕನ್ನಡ ಕೃತಿಗಳಿಗೆ ಮಾತ್ರ ಬಹುಮಾನ ಇರುವುದು.
3. ಅನುವಾದ ಕೃತಿಗಳಿಗೆ ಅವಕಾಶ ಇರುವುದಿಲ್ಲ.
4. ಬಹುಮಾನಕ್ಕೆ ಕಳುಹಿಸುವ ಕೃತಿಯು 01.01.2022 ರಿಂದ 31.12.2022 ರ ಒಳಗೆ ಪ್ರಕಟವಾದದ್ದಾಗಿರಬೇಕು.
5. ಪ್ರತಿಯೊಂದು ಕೃತಿಯ 9 ಪ್ರತಿಗಳನ್ನು ಕಳುಹಿಸಬೇಕು.
6. ಒಬ್ಬರು ಒಂದಕ್ಕಿಂತ ಹೆಚ್ಚು ಕೃತಿಗಳನ್ನುಕಳುಹಿಸಬಹುದಾದರೂ ಅವರ ಒಂದು ಕೃತಿಗೆ ಮಾತ್ರ ಬಹುಮಾನ ಕೊಡಲಾಗುವುದು.
7. ಲೇಖಕಿಯರು ತಮ್ಮ ಪರಿಚಯವನ್ನು ಸಂಕ್ಷಿಪ್ತವಾಗಿ ಸ್ವಹಸ್ತಾಕ್ಷರದಲ್ಲಿ ಬರೆದು, ಭಾವಚಿತ್ರದೊಂದಿಗೆ ಸಂಪರ್ಕ ಸಂಖ್ಯೆ ಸಮೇತ ಕಳುಹಿಸಬೇಕು.
8. ಪ್ರಕಾಶಕರು ಪುಸ್ತಕಗಳನ್ನು ಸಲ್ಲಿಸಿದರೂ, ಬಹುಮಾನ ಬಂದಲ್ಲಿ ಅದನ್ನು ಲೇಖಕಿಯರಿಗೇ ನೀಡಲಾಗುವುದು.
9. ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿ ವೇಳೆಯಲ್ಲಿ ಸ್ವತಃ ಬಂದು ಅಥವಾ ಅಂಚೆಯ ಮೂಲಕ ಪುಸ್ತಕಗಳನ್ನು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ – 580001 ವಿಳಾಸಕ್ಕೆ ಸಲ್ಲಿಸಲು 30.06.2023 ಕೊನೆಯ ದಿನವಾಗಿರುತ್ತದೆ.
10. ಬಹುಮಾನ ನೀಡುವಲ್ಲಿ ಸಂಘದ ನಿರ್ಣಯವೇ ಅಂತಿಮ.
11. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಇದರಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
12. ಈಗಾಗಲೇ ಈ ಬಹುಮಾನವನ್ನು ಎರಡು ಬಾರಿ ಪಡೆದುಕೊಂಡವರಿದ್ದರೆ ಅಂಥವರ ಕೃತಿಗಳಿಗೆ ಅವಕಾಶವಿರುವುದಿಲ್ಲ.
13. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿಗಳು, ‘ಕರ್ನಾಟಕ ವಿದ್ಯಾವರ್ಧಕಸಂಘ’ ಇವರನ್ನು ಸಂಪರ್ಕಿಸಬಹುದು.
ಶಂಕರ ಹಲಗತ್ತಿ ಪ್ರಧಾನ ಕಾರ್ಯದರ್ಶಿ,
ಸಂಪರ್ಕ ಸಂಖ್ಯೆ :9448022950