ಮೈಸೂರು: ಮೈಸೂರಿನ ಶ್ರೀ ಗುರು ಕಲಾ ಶಾಲೆಯು ಮೂರು ತಿಂಗಳ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ದಿನಾಂಕ 02-06-2023 ರಂದು ಆರಂಭವಾಗುವ ಈ ಶಿಬಿರದಲ್ಲಿ 7 ರಿಂದ 14 ವರ್ಷದವರೆಗಿನ ಮಕ್ಕಳು ಭಾಗವಹಿಸಬಹುದು.
ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅಭಿನಯ, ನೃತ್ಯ, ದೇಹ ಭಾಷೆ, ಸಂಭಾಷಣ ಕೌಶಲ್ಯ, ರಂಗಾಟಗಳು, ರಂಗಗೀತೆ, ಭಾಷಾ ಬಳಕೆ, ಓದುವ ರೀತಿ, ಧ್ವನಿ ವ್ಯತ್ಯಾಸ, ವ್ಯಕ್ತಿತ್ವ ವಿಕಸನ ಹೀಗೆ ಹತ್ತು ಹಲವು ವಿಷಯಗಳನ್ನು ಪರಿಣತರು ಹೇಳಿಕೊಡಲಿದ್ದಾರೆ.
ಈ ತರಗತಿಗಳು ವಾರದಲ್ಲಿ ಎರಡು ದಿನ ನಡೆಯಲಿದ್ದು ಶುಕ್ರವಾರ ಸಂಜೆ 4.30 ರಿಂದ 6.30ರ ವರೆಗೆ ಹಾಗೂ ಶನಿವಾರ 3.00 ರಿಂದ 6.00ರ ವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ -9980794690 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಶ್ರೀಗುರು ಕಲಾ ಶಾಲೆ-
ಮೈಸೂರಿನ ಶ್ರೀರಾಂಪುರದಲ್ಲಿ (ಪ್ರೀತಿ ಲೇಔಟ್)ನಲ್ಲಿ 2016ರಂದು ಸ್ಥಾಪನೆಯಾಯಿತು. ಇಲ್ಲಿ ಮಕ್ಕಳು, ಮಹಿಳೆಯರು ಒಳಗೊಂಡಂತೆ ಎಲ್ಲ ವಯೋಮಾನದ ಆಸಕ್ತರಿಗೂ ಸಂಗೀತವನ್ನು ಹೇಳಿಕೊಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೈಸೂರಿನ ಆಕಾಶವಾಣಿಯಲ್ಲಿ ’ಮಕ್ಕಳ ಮಂಟಪ’ ಮತ್ತು ‘ಕೇಳಿ ಗಿಳಿಗಳಿರ’ ಎಂಬ ಕಾರ್ಯಕರ್ಮಗಳನ್ನು ಹಲವಾರು ಬಾರಿ ನೀಡಿದ್ದಾರೆ. ಪ್ರತಿ ಶುಕ್ರವಾರ ಮತ್ತು ಶನಿವಾರಗಳಂದು ರಂಗ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ಮೂರು ತಿಂಗಳ ಅವಧಿಗೆ ಹತ್ತು ವಿದ್ಯಾರ್ಥಿಗಳನ್ನು ಮಾತ್ರ ಆಯ್ದುಕೊಂಡು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಗೆ ರಂಗಭೂಮಿಯ ಎಲ್ಲಾ ಆಯಾಮಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಶಿಬಿರದ ಕೊನೆಯಲ್ಲಿ ಮಕ್ಕಳು ಒಂದು ನಾಟಕದಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ನಮ್ಮೆಲ್ಲ ಚಟುವಟಿಕೆಗಳಿಗೆ ಪೋಷಕರ, ಸ್ನೇಹಿತರ ಮತ್ತು ಹಿತೈಷಿಗಳ ಪ್ರೋತ್ಸಾಹ ನಿರಂತರವಾಗಿ ಸಿಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಮಕ್ಕಳ ಬೇಸಿಗೆ ಶಿಬಿರ “ಪುಟಾಣಿ ಪ್ರಪಂಚ”. ಇಪ್ಪತ್ತೈದು ದಿನಗಳ ಶಿಬಿರ ಯಶಸ್ವಿಯಾಗಿ ನಡೆದು ಸುಮಾರು ಎಂಬತ್ತಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದ್ದಾರೆ. 2023ರ ಜೂನ್ 2ನೇ ತಾರೀಖಿನಿಂದ ಮೂರು ತಿಂಗಳ ಮಕ್ಕಳ ರಂಗ ಶಿಬಿರವನ್ನು(ಪ್ರತಿ ಶುಕ್ರವಾರ ಮತ್ತು ಶನಿವಾರ) ಆಯೋಜಿಸಲಾಗುತ್ತಿದೆ.ರಂಗ ಭೂಮಿಯ ವಿವಿಧ ವಿಭಾಗಗಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಂದ ಮಕ್ಕಳಿಗೆ ತರಬೇತಿಯನ್ನು ನೀಡಲಾಗುವುದು. ನಾಟಕ ವಾಚನ, ರಂಗದ ಆಟಗಳು, ರಂಗ ಸಂಗೀತ, ಅಭಿನಯ, ಮುಖವಾಡ ತಯಾರಿಕೆ, ಪ್ರಸಾಧನ, ರಂಗಸಜ್ಜಿಕೆ, ಕೋಲಾಟ, ಕಂಸಾಳೆ, ಕತೆ ಹೇಳುವುದು, ಕಥಾ ರಚನೆ, ಭಾಷಣ ಕಲೆ, ಕನ್ನಡ ವ್ಯಾಕರಣ, ಪದ್ಯ ರಚನೆ ಹೀಗೆ ಹತ್ತು ಹಲವಾರು ವಿಚಾರಗಳನ್ನು ತರಬೇತಿಯ ಅವಧಿಯಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಶಿಬಿರದ ಮುಕ್ತಾಯ ಸಮಾರಂಭಕ್ಕೆ ಮಕ್ಕಳಿಂದ ಒಂದು ನಾಟಕವನ್ನು ಮಾಡಿಸಲಾಗುವುದು. ರಂಗಭೂಮಿಯ ಪಾಠಗಳನ್ನು ಕಲಿತು ಮಕ್ಕಳು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಲು ಇಂತಹ ಶಿಬಿರಗಳು ಅತ್ಯಂತ ಸಹಾಯಕಾರಿ ಎಂದು ಹೇಳಬಹುದು.
- ಎನ್.ಧನಂಜಯ – ಅಧ್ಯಕ್ಷರು, ಶ್ರೀಗುರು ಕಲಾಶಾಲೆ