ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಅಹ್ವಾನಿತ ತಂಡಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಭ್ರಾಮರೀ ಯಕ್ಷ ಝೇಂಕಾರ’ವನ್ನು ದಿನಾಂಕ 30-05-2023 ರಂದು ಮುಂಬೈ ಉದ್ಯಮಿ ಶಶಿಧರ್ ಶೆಟ್ಟಿ ಇನ್ನಂಜೆ ಉದ್ಘಾಟಿಸಿದರು.
ದೇಗುಲದ ವಿಶೇಷಾಧಿಕಾರಿ ಮೋಹನ್ ರಾವ್, ಹಳೆ ವಿದ್ಯಾರ್ಥಿ ಸಂಘದ ಕಿರಣ್ ಪಕ್ಕಳ, ಕಿರಣ್ ಶೆಟ್ಟಿ,ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣ, ಸ್ಪರ್ಧೆಯ ಸಂಘಟಕ ಡಾ.ವಿಜಯ್ ವಿ ಉಪಸ್ಥಿತರಿದ್ದರು ಆಶಾಕೀರ್ತಿ ಸ್ವಾಗತಿಸಿದರು. ಚೊಂದಮ್ಮ ಎಂ. ಎಂ ನಿರೂಪಿಸಿ, ಪೂಜಾ ಯು.ಕಾಂಚನ್ ವಂದಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಐಕಳ ಪಾಂಪೈ ಕಾಲೇಜು ಏಕಾದಶಿ ಮಹಾತ್ಮೆ, ಉರ್ವಸ್ಟೋರ್‌ನ ಸ್ವಸ್ತಿಕ್ ನ್ಯಾಶನಲ್ ಸ್ಕೂಲ್ ನಿಂದ ದಕ್ಷಯಜ್ಞ, ಮಂಗಳೂರು ವಿವಿ ಕಾಲೇಜು ತಂಡದ ದಕ್ಷಯಜ್ಞ ಸಂತ ಅಲೋಶಿಯಸ್ ಕಾಲೇಜು ತಂಡದಿಂದ ನರಕ ಹರಣ, ನಿಟ್ಟೆ ಡಾ. ಎನ್ ಎಸ್ ಎ.ಎಂ ಪ್ರಥಮ ದರ್ಜೆ ಕಾಲೇಜಿನ ತರಣಿಸೇನ,ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡದಿಂದ ದಕ್ಷಯಜ್ಞ ಪ್ರದರ್ಶನಗೊಂಡಿತು.
ದಿನಾಂಕ 31-05-2023 ರಂದು ಆಳ್ವಾಸ್ ಮೂಡುಬಿದಿರೆ, ಎಸ್ ಡಿಎಂ ಕಾನೂನು ಕಾಲೇಜ್, ಸುರತ್ಕಲ್ ಗೋವಿಂದ ದಾಸ ಕಾಲೇಜ್ ಹಾಗೂ ಕಟೀಲು ಕಾಲೇಜ್ ತಂಡದಿಂದ ಯಕ್ಷಗಾನ ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ.