ಪುತ್ತೂರು : ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ವತಿಯಿಂದ ದಿನಾಂಕ 30-05-2023ರಂದು ಸಂಜೆ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಮೇಧಿನಿರ್ಮಾಣ’ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಜಯಪ್ರಕಾಶ್ ನಾಕೂರು, ಸತೀಶ್ ಇರ್ದೆ, ಆನಂದ ಸವಣೂರು, ಪದ್ಯಾಣ ಶಂಕರ ನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಆದಿಮಾಯೆ (ದುಗ್ಗಪ್ಪ ಯನ್.), ವಿಷ್ಣು (ಕು೦ಬ್ಳೆ ಶ್ರೀಧರ್ ರಾವ್ ಮತ್ತು ಭಾಸ್ಕರ್ ಶೆಟ್ಟಿ ಸಾಲ್ಮರ), ಬ್ರಹ್ಮ (ಭಾಸ್ಕರ್ ಬಾರ್ಯ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಈಶ್ವರ (ಚಂದ್ರಶೇಖರ್ ಭಟ್ ಬಡೆಕ್ಕಿಲ), ಮಧು (ಗುಂಡ್ಯಡ್ಕ ಈಶ್ವರ ಭಟ್) ಮತ್ತು ಕೈಟಭ (ಗುಡ್ಡಪ್ಪ ಬಲ್ಯ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಬನ್ನೂರು ರಾಜಗೋಪಾಲ್ ಭಟ್ ಪ್ರಾಯೋಜಿಸಿದ್ದರು.
ಇದೇ ಯಕ್ಷಗಾನ ಸಂಘದ 2022-2023 ಸಾಲಿನ ಕೊನೆಯ ಕೂಟ (ಪತ್ತನಾಜೆ)ವು ದಿನಾಂಕ 31-05-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಪಿ.ಜಿ.ಜಗನ್ನಿವಾಸ ರಾವ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಶುಭ ಜೆ.ಸಿ. ಅಡಿಗ ಮತ್ತು ಶುಭಾ ಗಣೇಶ್), ಬಲರಾಮ (ಹರಿಣಾಕ್ಷಿ ಜೆ. ಶೆಟ್ಟಿ), ಜಾಂಬವ (ಕಿಶೋರಿ ದುಗ್ಗಪ್ಪ ನಡುಗಲ್ಲು), ನಾರದ (ಪ್ರೇಮಲತಾ ಟಿ. ರಾವ್) ಸಹಕರಿಸಿದರು. ನಗರ ಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಪ್ರಾಯೋಜಿಸಿದ್ದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಚಿತ್ರೀಕರಣ ಮಾಡಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್ ವಂದಿಸಿದರು. ಸುಧಾಮ ಮಣಿಯಾಣಿ ಸಹಕರಿಸಿದರು.