ತೆಕ್ಕಟ್ಟೆ: ನಿರಂತರವಾಗಿ ಹಲವಾರು ವರ್ಷಗಳಿಂದ ನೆರವೇರಿದ ಬಡಗು ಯಕ್ಷಗಾನ ಹಿಮ್ಮೇಳ ತರಗತಿ ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ನೇತೃತ್ವದಲ್ಲಿ ಈ ವರ್ಷ ಜೂನ್ 4ರ ಭಾನುವಾರದಂದು ಮಧ್ಯಾಹ್ನ 3ರಿಂದ ಪ್ರತೀ ದಿನ ಆರು ತಿಂಗಳುಗಳ ಕಾಲ ನಡೆಯಲಿದೆ. ಪ್ರಸಂಗಕರ್ತರಾದ, ಕಲಾ ಪೋಷಕರಾದ ಮಹಾಬಲ ಹೇರಿಕುದ್ರು ತರಗತಿಯನ್ನು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಉಪನ್ಯಾಸಕರಾದ ಸುಜಯೀಂದ್ರ ಹಂದೆ, ಯಕ್ಷಗುರುಗಳಾದ ಸೀತಾರಾಮ ಶೆಟ್ಟಿ ಕೋಕೂರು, ಯಕ್ಷ ಸಂಘಟಕರಾದ ಕೋಟ ಸುದರ್ಶನ ಉರಾಳ ಆಗಮಿಸಲಿದ್ದಾರೆ. ಗುರುಗಳಾಗಿ ವಿದ್ವಾನ್ ಗಣಪತಿ ಭಟ್, ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆ ನಿಟ್ಟೂರು ಹಾಗೂ ಅತಿಥಿಯಾಗಿ ಪ್ರಾಚಾರ್ಯ ಕೆ.ಪಿ. ಹೆಗಡೆ ತೆಕ್ಕಟ್ಟೆ ಕೇಂದ್ರದ ಗುರುಗಳಾಗಿ ನೇಮಕಗೊಂಡಿರುತ್ತಾರೆ. ಭಾಗವತಿಗೆ, ಚಂಡೆ, ಮದ್ದಲೆ, ಹೆಜ್ಜೆ ತರಗತಿಗೆ ಸೇರಲಿಚ್ಚಿಸುವವರು ಉದ್ಘಾಟನೆಯಲ್ಲಿ ಹಾಜರಿರಬೇಕೆಂದು ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕ:9945947771