Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಶೋಧಕಿ ಬಿ.ಎಂ. ರೋಹಿಣಿ ಅವರಿಗೆ ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ 
    Awards

    ಸಂಶೋಧಕಿ ಬಿ.ಎಂ. ರೋಹಿಣಿ ಅವರಿಗೆ ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ 

    June 6, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಸಮತಾ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಡಾ.ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯಮಟ್ಟದ ಕಾವ್ಯ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 01-06-2023 ಗುರುವಾರ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಶೋಧಕಿ ಟಿ.ಎನ್. ನಾಗರತ್ನಾ “ಸ್ತ್ರೀಪರ ವಾದ ಬಲವಾಗಿದ್ದ ಕಾಲದಲ್ಲಿ ಮಹಿಳೆಯರ ಹಕ್ಕಿನ ಜೊತೆಗೆ ಅವರ ಕರ್ತವ್ಯದ ಬಗ್ಗೆಯೂ ಎಚ್ಚರಿಸುವ ಮನೋಭಾವ ವಿಜಯಾದಬ್ಬೆ ಅವರಲ್ಲಿತ್ತು. ವಿಜಯಾ ಮಾತು ಕಡಿಮೆಯಾದರೂ ಉತ್ತಮ ನಡವಳಿಕೆ ಹೊಂದಿದ್ದರು. ಜಾತಿ-ಧರ್ಮ ಮೀರಿದ ವ್ಯಕ್ತಿತ್ವ ಅವರದ್ದು. ಅವರ ಸ್ತ್ರೀಪರ ಕಾಳಜಿಯಿಂದ ಸ್ಥಾಪಿತವಾದ ಸಮತಾ ಅಧ್ಯಯನ ಕೇಂದ್ರವು ಹಿಂಜರಿಕೆ ಮನೋಭಾವ ಹೊಂದಿದ್ದ ಅನೇಕರಿಗೆ ದಾರಿದೀಪವಾಗಿ ಕೆಲಸ ಮಾಡಿದೆ” ಎಂದು ಹೇಳಿದರು.

    ಸಮತಾ ಅಧ್ಯಯನ ಕೇಂದ್ರದ ನಿಕಟಪೂರ್ವ ಅಧ್ಯಕ್ಷೆ ಎಂ.ಎನ್‌. ಸುಮನಾ ಮಾತನಾಡಿ, “ಇದೇ ಮೊದಲ ಬಾರಿಗೆ ಈ ಸಂಸ್ಥೆಯಿಂದ ಅವರ ಹೆಸರಿನಲ್ಲಿ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಒಟ್ಟು 46 ಲೇಖಕಿಯರಿಂದ ವಿಮರ್ಶೆ ಮತ್ತು ಸಂಶೋಧನಾ ಕೃತಿಗಳು ಬಂದಿದ್ದು, ಇದರಲ್ಲಿ ಬಿ.ಎಂ. ರೋಹಿಣಿ ಅವರ ‘ವೇಶ್ಯಾವಾಟಿಕೆಯ ಕಥೆ- ವ್ಯಥೆ’ ಎಂಬ ದಮನಿತರ ಕುರಿತ ಅಧ್ಯಯನದ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.

    ಪ್ರಶಸ್ತಿ ಪುರಸ್ಕೃತರಾದ ಸಂಶೋಧಕಿ ಬಿ.ಎಂ. ರೋಹಿಣಿ ಮಾತನಾಡಿ, “ವಿಜಯಾ ವಿದ್ಯಾರ್ಥಿ ದೆಸೆಯಲ್ಲಿ ನಮಗೆ ರೋಲ್ ಮಾಡೆಲ್ ಆಗಿದ್ದವರು. ನಡೆ ಮತ್ತು ನುಡಿ ಎರಡೂ ಒಂದೇ ಎಂಬಂತೆ ಬದುಕಿದವರು. ಅವರ ಹೆಸರಿನ ಮೊದಲ ಪ್ರಶಸ್ತಿ ನನಗೆ ಸಿಕ್ಕಿದ್ದು ನನ್ನ ಭಾಗ್ಯ ಎಂದರು.

    ಈ ಕಾರ್ಯಕ್ರಮದಲ್ಲಿ ‘ಕಾವ್ಯ ಮತ್ತು ಕಥಾ ಸ್ಪರ್ಧೆ’ಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾವ್ಯ ಸ್ಪರ್ಧೆಯ ತೀರ್ಪುಗಾರರಾದ ಲೇಖಕಿ ಎಂ.ಎಸ್‌. ವೇದಾ ಮಾತನಾಡಿ, “ವಿದ್ಯಾರ್ಥಿಗಳಿಗೆ ಮಹಿಳಾ ಕೇಂದ್ರಿತ ವಿಷಯವನ್ನು ಕಾವ್ಯ ಮತ್ತು ಕಥಾ ಸ್ಪರ್ಧೆಗೆ ನೀಡಲಾಗಿತ್ತು. 68 ಕವಿತೆಗಳು ಸ್ಪರ್ಧೆಗೆ ಬಂದಿದ್ದವು. ಅದರಲ್ಲಿ 26 ಕವಿತೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದ್ದೆವು. ಭವಿಷ್ಯದಲ್ಲಿ ನವೀನತೆ ಹಾಗೂ ಹೊಸ ಚಿಂತನೆಗಳನ್ನು ಒಳಗೊಂಡಿರುವ ಉತ್ತಮ ಕವಿತೆಗಳನ್ನು ಬರೆಯಬಲ್ಲ ಭರವಸೆ ಇಲ್ಲಿ ಕಂಡಿದೆ” ಎಂದರು.

    ಕಥೆ ವಿಭಾಗದ ತೀರ್ಪುಗಾರ ಚಿಕ್ಕಮಗಳೂರು ಗಣೇಶ್ ಹಾಗೂ ಸ್ಪರ್ಧೆಯ ವಿಜೇತರು ಮಾತನಾಡಿದರು. ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆರ್. ಸುನಂದಮ್ಮ, ಲೇಖಕಿ ಎನ್‌. ಗಾಯತ್ರಿ ಉಪಸ್ಥಿತರಿದ್ದರು.

    ಕಥೆ ಹಾಗೂ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ರೂ.5,000/-, ದ್ವಿತೀಯ ರೂ.3,000/-, ತೃತೀಯ ರೂ.2,000/- ಮತ್ತು ತೀರ್ಪುಗಾರರು ಮೆಚ್ಚಿದ ಹತ್ತು ಕಥೆಗಳಿಗೆ ತಲಾ ರೂ.1,000/-ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ಮೀನಾ ಮೈಸೂರು, ಸಂತೋಷ್ ಚೊಕ್ಕಾಡಿ, ಎಂ.ಎಸ್‌. ವೇದಾ ಕವನ ವಿಭಾಗಕ್ಕೆ ಹಾಗೂ ಸುಮಾ ಎಂಬಾರ್, ಚಿಕ್ಕಮಗಳೂರು ಗಣೇಶ್‌, ಎಚ್‌.ಎಂ. ಕಲಾಶ್ರೀ ಇವರುಗಳು ಕಥಾ ವಿಭಾಗಕ್ಕೆ ತೀರ್ಪುಗಾರರಾಗಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleʻಪದ್ಮಭೂಷಣ ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿʼಗೆ ಡಾ.ಪುಷ್ಪಾ ಐಯ್ಯಂಗಾರ್ ಹಾಗೂ ಶ್ರೀಮತಿ ಜಯಲಕ್ಷ್ಮಿ ಪಾಟೀಲ ಆಯ್ಕೆ
    Next Article ಭಕ್ತಿ ಗಂಧರ್ವ ಎಂ.ಎಸ್. ವಿದ್ವಾನ್ ದೀಪಕ್ – ‘ವಚನಾಮೃತ ಸಾರ’
    roovari

    Add Comment Cancel Reply


    Related Posts

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಡಾ. ಸದಾನಂದ ಪೆರ್ಲಗೆ ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

    June 17, 2025

    ಬಾಸುಮ ಕೊಡಗು ಇವರ ಕವನ ಸಂಕಲನ ಲೋಕಾರ್ಪಣೆ ಸಮಾರಂಭ | ಜೂನ್ 22

    June 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.