ಮಂಗಳೂರು : ಜೂನ್ 9 ಶುಕ್ರವಾರ 2023 ರಂದು ಸಂಜೆ ಆರು ಗಂಟೆಗೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ‘ಸ್ವರುಣ್ ಸ್ಮರಣಾಂಜಲಿ 2023’ ಕಾರ್ಯಕ್ರಮವು ನಡೆಯಲಿದೆ. ಅದ್ವಿತೀಯ ಪ್ರತಿಭಾ ಶಾಲಿ, ಕಲಾಸಾಧಕ, ಸಮಾಜ ಸೇವಕ, ಸ್ಪೂರ್ತಿಯ ಚಿಲುಮೆ ಸ್ವರುಣ್ ರಾಜ್ ಇವರು ಈಗ ನಮ್ಮೊಂದಿಗಿಲ್ಲ. ಇವರ ಸಂಸ್ಮರಣೆಯ ಹತ್ತನೇ ವರ್ಷದ ಕಾರ್ಯಕ್ರಮ ‘ಸ್ವರುಣ್ ಸ್ಮರಣಾಂಜಲಿ’. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇದರ ಅಧ್ಯಕ್ಷರಾದ ಡಾಕ್ಟರ್ ಎಂ. ಮೋಹನ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಸ್ವರುಣ್ ರಾಜ್ ಗೆ ನುಡಿ ನಮನ ಸಲ್ಲಿಸಲಿದ್ದಾರೆ. ಸ್ವರುಣ್ ರಾಜ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸುರೇಶ್ ರಾಜ್ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಇದೇ ವೇದಿಕೆಯಲ್ಲಿ ಕನ್ನಡದ ಪೂಜಾರಿ ಶ್ರೀ ಹಿರೇಮಂಗಳೂರು ಕಣ್ಣನ್ ರಾಷ್ಟ್ರ ಧರ್ಮ ಜಾಗತಿಯ ಸಂದೇಶ ನೀಡಲಿರುವರು. ಸಭಾ ಕಾರ್ಯಕ್ರಮದ ನಂತರ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಇವರ ಪುತ್ರಿ, ದೆಹಲಿಯ ರಮಾ ವೈದ್ಯನಾಥನ್ ರ ಶಿಷ್ಯೆ ಶುಭಮಣಿ ಚಂದ್ರಶೇಖರ್ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ತಮ್ಮೆಲ್ಲರಿಗೂ ಸನಾತನ ನಾಟ್ಯಾಲಯ ಆದರದ ಸ್ವಾಗತವನ್ನು ಬಯಸಿದೆ.
ಸನಾತನ ನಟ್ಯಾಲಯದ ಮುಂದಿನ ಕಾರ್ಯಕ್ರಮಗಳು : ಜುಲೈ 9ನೆಯ ತಾರೀಕಿನಂದು ‘ಸನಾತನ ಗುರು ಪರಂಪರ’ ಹಾಗೂ ಭರತನಾಟ್ಯ ಕಾರ್ಯಕ್ರಮ ಮತ್ತು ಜುಲೈ 29ಕ್ಕೆ ‘ಸನಾತನ ನೃತ್ಯ ಪ್ರೇರಣ’ ಮತ್ತು ಭರತನಾಟ್ಯ ಕಾರ್ಯಕ್ರಮವಿದೆ. ಈ ಎರಡು ಕಾರ್ಯಕ್ರಮಗಳು ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಸನಾತನ ನಾಟ್ಯಾಲಯ ತಿಳಿಸಿದೆ.

