Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ | “ಶ್ರವಣಾಕ್ಷರ – ಯುಗಳ ಶತಕ” – ಶ್ರವಣ್ ಕಾರಂತ್ ಕೆ.
    Article

    ವಿಶೇಷ ಲೇಖನ | “ಶ್ರವಣಾಕ್ಷರ – ಯುಗಳ ಶತಕ” – ಶ್ರವಣ್ ಕಾರಂತ್ ಕೆ.

    June 6, 2023Updated:August 19, 2023No Comments12 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಕ್ಷಗಾನ ಕರಾವಳಿಯಲ್ಲಿ ಹುಟ್ಟಿ ಮಲೆನಾಡಿನವರೆಗೂ ಹಬ್ಬಿರುವ ಆಕರ್ಷಕ ಕಲೆ. ಕರಾವಳಿಯ ಈ ಗಂಡುಕಲೆ ಕನ್ನಡದ ಕಂಪನ್ನು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ಬಿತ್ತರಿಸಿದೆ. ಕರಾವಳಿ ತೀರದ ಸಮುದ್ರದ ಅಲೆಗಳಂತೆ ಯಕ್ಷಗಾನಕ್ಕೂ ಸಮುದ್ರದ ಅಲೆಗಳ ನಾದವಿದೆ; ಭೋರ್ಗರೆತವಿದೆ. ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಯಕ್ಷಗಾನ-ಪ್ರಸಂಗ, ಆಟ, ಬಯಲಾಟ, ಹರಕೆಯಾಟ, ದಶಾವಾತಾರದ ಆಟ ಎಂಬೆಲ್ಲ ಹೆಸರುಗಳಿಂದ ಪ್ರಚಾರದಲ್ಲಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ಕೆಳಗೆ ಮತ್ತು ಅದರ ಸೆರಗಂಚಿನ ಹಲವು ತಾಲೂಕು-ಜಿಲ್ಲೆಗಳಲ್ಲಿ ಪ್ರಚಾರದಲ್ಲಿರುವ ಪ್ರಾದೇಶಿಕ ಕಲೆಯಾಗಿ ಯಕ್ಷಗಾನ ಹೆಸರಾಗಿದೆ. ಅತ್ಯಾಕರ್ಷಕ ವೇಷಭೂಷಣಗಳಿಂದ ಅದು ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಬಣ್ಣ ಹಾಗೂ ವೇಷಭೂಷಣಗಳಿಂದ ಯಕ್ಷಗಾನವೂ ಯಕ್ಷಲೋಕವನ್ನು ಸೃಷ್ಟಿಸುತ್ತದೆ.

    ಯಕ್ಷಗಾನ ಉಗಮ:-
    ಯಕ್ಷಗಾನದ ಮೊದಲ ಉಲ್ಲೇಖ ಶಾರ್ಣದೇವನ “ಸಂಗೀತ ರತ್ನಾಕರ”ದಲ್ಲಿ (೧೨೧೦ ಕ್ರಿಶ) “ಜಕ್ಕ” ಎಂದು ಆಗಿದ್ದು ಮುಂದೆ “ಯಕ್ಕಲಗಾನ” ಎಂದು ಕರೆಯಲ್ಪಟ್ಟಿತು ಎಂಬುದು ಒಂದು ಅಭಿಪ್ರಾಯ. ಕ್ರಿಶ ೧೫೦೦ ರ ವೇಳೆಗೆ  ವ್ಯವಸ್ಥಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎಂಬುದು ಬಹಳ ವಿದ್ವಾಂಸರು ಒಪ್ಪುವ ವಿಚಾರ. ಜಾಗತಿಕ ರಂಗಭೂಮಿಯನ್ನು ಅವಲೋಕಿಸಿದರೆ ಇಷ್ಟು ಸುದೀರ್ಘ ಕಾಲದಲತ್ತ ಬಂದಿರುವ ಕಲೆಗಳಾದ ಕಥಕಳಿ, ಮೋಹನಿ ಅಷ್ಟಂ, ಸದೀರ್ ನೃತ್ಯ, ಷೇಕ್ಸ್ ಫಿಯರ್ ನಾಟಕಗಳಂತೆ ಯಕ್ಷಗಾನವೂ ಒಂದು. ಶುದ್ಧ ಕನ್ನಡದ ಉಳಿವಿಗೆ ಯಕ್ಷಗಾನದ ಕೊಡುಗೆ ಅಪಾರ. ಇದು ಸಮಾಜದಲ್ಲಿ‌ ಪೌರಾಣಿಕ ‌ಪ್ರಜ್ಞೆ ಮೂಡಿಸಿದ ಕಲೆ. ಯಕ್ಷಗಾನದ ಮೇಲೆ ದಾಸ ಪಂಥದ ಪ್ರಭಾವವೂ ಗಮನಾರ್ಹ. ಇದನ್ನು ಯಕ್ಷಗಾನದ ಪ್ರಸಂಗ ಸಾಹಿತ್ಯದಲ್ಲಿ ಕಾಣಬಹುದು.

    ಯಕ್ಷಗಾನದ ಪ್ರಮುಖ ಅಂಶಗಳು:-
    ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.
    ರಂಗಸ್ಥಳ:-
    ಇದು ಯಕ್ಷಗಾನದ‌ ವೇದಿಕೆ. ಚೌಕಿಯಲ್ಲಿ‌ ಸಿದ್ಧವಾದ ವೇಷಗಳು ಪ್ರಸಂಗದ ಮೂಲಕ ಯಕ್ಷ ಲೋಕವನ್ನು ಧರೆಗಿಳಿಸುವ ಪವಿತ್ರ ಸ್ಥಳ. ಹಿಮ್ಮೇಳ ಹಾಗೂ ಮುಮ್ಮೇಳದ ಕಲಾಭಿವ್ಯಕ್ತಿಗೆ ಈ ಸ್ಥಳ ಆಶ್ರಯಭೂಮಿಯಾಗಿದೆ.

    ಚೌಕಿ:-
    ಇದು ಯಕ್ಷಗಾನದ ಬಣ್ಣದ ಮನೆ. ಚೌಕಿಯ ಮುಕ್ಕಾಲು ಭಾಗದ ಶಿರೋಭಾಗದಲ್ಲಿ ಗಣಪತಿಯನ್ನು ಇರಿಸುವ ಕ್ರಮ. ಗಣಪತಿ ಪೆಟ್ಟಿಗೆಯ ಹಿಂದೆ ಅಡ್ಡ ಚೌಕಿ ಇದೆ. ಇದು ಹಿಮ್ಮೇಳದವರ ಸ್ಥಳ. ಹಿಮ್ಮೇಳದವರು ಸಿದ್ಧರಾಗುವುದು ಇಲ್ಲಿಯೇ‌. ಗಣಪತಿಯ ನೇರಕ್ಕೆ ಇಕ್ಕೆಲಗಳಲ್ಲಿ ವೇಷಧಾರಿಗಳು ಕುಳಿತುಕೊಳ್ಳುವರು. ಬಣ್ಣದವೇಷ, ಎರಡನೇ ವೇಷ, ಮುಖ್ಯ ಸ್ತ್ರೀ ‌ವೇಷ, ಪುರುಷ ವೇಷ.‌. ಹೀಗೆ ತಂತಮ್ಮ ವೇಷ ಸ್ಥಾನಕ್ಕನುಗುಣವಾಗಿ ಮುಖಾಮುಖಿಯಾಗಿ ಕುಳಿತು ವೇಷಧಾರಣೆ ಮಾಡುತ್ತಾರೆ. ಹಾಸ್ಯಗಾರರು ಗಣಪತಿಯ ನೇರಕ್ಕೆ ಅಡ್ಡ ಪಂಕ್ತಿಯಲ್ಲಿ ಕುಳಿತುಕೊಳ್ಳುವರು.

    ಹಿಮ್ಮೇಳ:-
    ಯಕ್ಷಗಾನದ ಭಾಗವತರು, ಮದ್ದಳೆ, ಚಂಡೆಗಾರರ‌ ವಿಭಾಗ. ಬಡಗಿನಲ್ಲಿ ಭಾಗವತರು ತಾಳ ಹಿಡಿದರೆ, ತೆಂಕಿನ ಭಾಗವತರು ಜಾಗಟೆ ಹಿಡಿಯುವರು‌. ಬಡಗಿನಲ್ಲಿ ಮದ್ದಳೆಗಾರರ ಪಕ್ಕದಲ್ಲಿ ‌ರಂಗ‌ನಿರ್ಗಮನದ ದಾರಿಯನ್ನು ಬಿಟ್ಟು ಚಂಡೆಗಾರರು ಕುಳಿತು ಚಂಡೆ ಬಾರಿಸುವರು. ತೆಂಕಿನಲ್ಲಿ ಭಾಗವತರ ಪಕ್ಕ‌ ರಂಗ ಆಗಮನ ದಾರಿಯನ್ನು‌ ಬಿಟ್ಟು ಚಂಡೆಗಾರರು‌ ನಿಂತು ಚಂಡೆ ಬಾರಿಸುತ್ತಾರೆ.

    ಭಾಗವತಿಕೆ:-
    ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.

    ಪ್ರಸಂಗ:-
    ಯಕ್ಷಗಾನದಲ್ಲಿ ಯಾವುದಾದರೊಂದು ಕಥೆಯನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತ್ತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು “ಗದಾಯುದ್ದ ಪ್ರಸಂಗ” ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದುಕೊಳ್ಳುವುದು ಯಕ್ಷಗಾನದಲ್ಲಿ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.

    ಪಾತ್ರಧಾರಿಗಳು:-
    ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ – ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.

    ವೇಷಭೂಷಣ:-
    ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗುತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.

    ಮಾತುಗಾರಿಕೆ:-
    ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.

    ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದ ಬಗ್ಗೆ ಅಪಾರವಾದ ಅಭಿಮಾನ ಹಾಗೂ ಕಲೆಯ ಮೇಲಿನ ಪ್ರೀತಿಯಿಂದ ಪ್ರಾರಂಭ ಮಾಡಿದ ಸರಣಿ ಲೇಖನಕ್ಕೀಗ ೨೦೦ನೇ ಸಂಭ್ರಮ. ನನ್ನ ಈ ಕನಸಿಗೆ ಪ್ರೋತ್ಸಾಹ ಹಾಗೂ ಗುರುಗಳಾಗಿ ಮಾರ್ಗದರ್ಶನ ನೀಡಿದವರು ಯಕ್ಷಕವಿ, ವಾಗ್ಮಿ ಪ್ರೊ. ಪವನ್ ಕಿರಣ್ ಕೆರೆ ಹಾಗೂ ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು. ೧೫ ಏಪ್ರಿಲ್ ೨೦೨೦ ರಂದು ಬರೆದ ಪ್ರಥಮ ಲೇಖನವು ಪ್ರೊ. ಪವನ್ ಕಿರಣ್ ಕೆರೆ ಇವರ “ನಗಾರಿ ಧ್ವನಿ” ಪತ್ರಿಕೆಯಲ್ಲಿ ಪ್ರಕಟಗೊಂಡು,

    ೨೦.೦೨.೨೦೨೨ ರಂದು
    “ಸುವರ್ಣ ಸ್ವರ ಶ್ರವಣ”
    “ಮಯ್ಯರ ಕಲಾರೂಪ..ಮಧುರಾಲಾಪ”
    ಎಂಬ ಶೀರ್ಷಿಕೆಯಲ್ಲಿ ಸ್ವರ ಸ್ನೇಹ ಜೀವಿ ಶ್ರೀಯುತ ರಾಘವೇಂದ್ರ ಮಯ್ಯ ಹಾಲಾಡಿ ಅವರ ನೇರ ಸಂದರ್ಶನವು “ಯಕ್ಷಗಾನ ನಾಟ್ಯ” ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಿದೆ.
    ಬರೆದ ಲೇಖನಗಳು Face Book, ಯಕ್ಷ ಸಾಧಕರು website ನಲ್ಲಿ, ಉಪಯುಕ್ತ ನ್ಯೂಸ್‌ ವೆಬ್‌ ಪೋರ್ಟಲ್ ಪತ್ರಿಕೆಯಲ್ಲಿ, ರೂವಾರಿ ಪತ್ರಿಕೆಯಲ್ಲಿ, ಭಾರತವಾಣಿ, ಹರ್ಷವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.

    ಪ್ರೊ. ಪವನ್ ಕಿರಣ್ ಕೆರೆ ಹಾಗೂ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ತುಂಬಾ ಅಪಾರವಾದದು. ಲೇಖನ ಬರೆಯುವಾಗ ಏನೇ ಮಾಹಿತಿಯನ್ನು ಕೇಳಿದಾಗ ತುಂಬಾನೇ ಸಹಾಯ ಮಾಡಿದ್ದಾರೆ. ನನ್ನ ಈ ಸರಣಿ ಲೇಖನ ಇಂದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಇವರಿಬ್ಬರ ಪಾತ್ರ ಬಹಳ ದೊಡ್ಡದಾಗಿದೆ.

    ಈ ಸರಣಿ ಲೇಖನದಲ್ಲಿ ೨೦೦ ಕಲಾವಿದರ ಪರಿಚಯ ಮಾಡಿದ ವಿವರ:-
    ೧. ಶ್ರವಣ್ ಕುಮಾರ್ ಕೊಳಂಬೆ.
    ೨. ಯಕ್ಷಪ್ರಿಯೆ ಅರ್ಷಿಯಾ
    ೩. ಮನೆಯನ್ನೇ ರಂಗಸ್ಥಳವನ್ನಾಗಿಸಿದ ಕಲಾವಿದರು; ನವ್ಯ ಹೊಳ್ಳ, ದಿವ್ಯ ಹೊಳ್ಳ, ದೀಪಾ ಹೊಳ್ಳ, ಆದಿತ್ಯ ಹೊಳ್ಳ.
    ೪. ಯಕ್ಷರಂಗದ ಧಿಗಿಣ ವೀರ ಲೋಕೇಶ್ ಮುಚ್ಚೂರು.
    ೫. ಯಕ್ಷರಂಗದ ದೇವಿ ಭಟ್ರು ರಮೇಶ್ ಭಟ್ ಬಾಯಾರು.
    ೬. ಬಹುಮುಖ ಪ್ರತಿಭೆ ವಿಕ್ರಮ್ ಮಯ್ಯ ಪೈವಳಿಕೆ.
    ೭. ಪಂಚರಾಜ್ಯ ಯಕ್ಷಪ್ರಭೃತಿ ಕೆ ಗೋವಿಂದ ಭಟ್ ನಿಡ್ಲೆ.
    ೮. ಬಡಗುತಿಟ್ಟಿನ ಆಲ್ ರೌಂಡರ್ ಕಲಾವಿದ ನೀಲ್ಕೋಡು ಶಂಕರ ಹೆಗಡೆ.
    ೯. ಯಕ್ಷಪಟು ಸುಷ್ಮಾ ಮೈರ್ಪಾಡಿ.
    ೧೦. ಯಕ್ಷರಂಗದ ಯುವ ಪ್ರತಿಭೆ ಶರವೂರು ಶಿಖಿನ್ ಶರ್ಮ.
    ೧೧. ಯಕ್ಷರಂಗದ ಯುವ ಪುಂಡುವೇಷಧಾರಿ ಶಿವಾನಂದ ಶೆಟ್ಟಿ ಪೆರ್ಲ.
    ೧೨. ತೆಂಕುತಿಟ್ಟು ಯಕ್ಷಗಾನದ ಜೂ.ಪುತ್ತಿಗೆ ಶೈಲಿಯ ಸ್ವರ ಸಾಮ್ಯ ಉಳ್ಳ ಭಾಗವತರು ಶ್ರೀಯುತ ಮಹೇಶ ಜೆ ರಾವ್ ಕನ್ಯಾಡಿ.
    ೧೩. ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಸಮರ್ಥ ಪುಂಡುವೇಷಧಾರಿ  ವಿಷ್ಣುಶರ್ಮ ವಾಟೆಪಡ್ಪು.
    ೧೪. ಸುಮಧುರ ಕಂಠದ  ಭಾಗವತರು ಶ್ರೀಯುತ ಚಂದ್ರಕಾಂತ್ ರಾವ್ ಮೂಡುಬೆಳ್ಳೆ.
    ೧೫. ತೆಂಕುತಿಟ್ಟು ಪ್ರಸಿದ್ಧ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ.
    ೧೬. ಯಕ್ಷಸಂಸಾರ:- ಶ್ರೀಯುತ ಸತ್ಯನಾರಾಯಣ ಅಡಿಗ ಹಾಗೂ ಇವರ ಮಕ್ಕಳು ಶ್ರೀಮತಿ ಅಮೃತಾ ಅಡಿಗ, ಅನನ್ಯ ಅಡಿಗ, ಅಳಿಯ ಕೌಶಿಕ್ ರಾವ್ ಹಾಗೂ ಇವರ ತಮ್ಮ ಕೌಶಲ್ ರಾವ್.
    ೧೭. ಕೌಟುಂಬಿಕ ಕಥಾನಕಗಳ ಕಥಾಕರ್ತ ಅಲ್ತಾರು ನಂದೀಶ್ ಶೆಟ್ಟಿ.
    ೧೮. ಯಕ್ಷಲೋಕದ ಕೋಲ್ಮಿಂಚು ಪ್ರಕಾಶ್ ಮೊಗವೀರ ಕಿರಾಡಿ.
    ೧೯. ಬಡಗುತಿಟ್ಟಿನ ಯುವ ಭಾಗವತರು ಗಣೇಶ್ ಆಚಾರ್ ಬಿಲ್ಲಾಡಿ.
    ೨೦. ತೆಂಕುತಿಟ್ಟು ಯಕ್ಷಗಾನದ ಯುವ ಮದ್ದಳೆ ಹಾಗೂ ಚೆಂಡೆ ವಾದಕರು ಶ್ರೀಯುತ ಲವ ಕುಮಾರ್ ಐಲ.
    ೨೧. ಬಡಗುತಿಟ್ಟಿನ ಯುವ ಕಥಾಕರ್ತ ಅಕ್ಷಯ್ ಶೆಟ್ಟಿ ಮುಂಬಾರು.
    ೨೨. ಯಕ್ಷರಂಗದ ಯುವ ಕಲಾವಿದೆ ಶರಣ್ಯ ರಾವ್ ಶರವೂರು.
    ೨೩. ತೆಂಕು-ಬಡಗಿನ ಭಾಗವತರು ಶ್ರೀಯುತ ದಿನೇಶ್ ಭಟ್ ಯಲ್ಲಾಪುರ.
    ೨೪. ಯಕ್ಷಗಾನದ ಸರ್ವ ಸಮರ್ಥ ವೇಷಧಾರಿ ಮಂಜುನಾಥ್ ಭಟ್ ಬೆಳ್ಳಾರೆ.
    ೨೫. ರಂಗ ನಿಷ್ಠೆ, ಯಕ್ಷ ಕಿರೀಟಿ ಸುಬ್ರಾಯ ಹೊಳ್ಳ ಕಾಸರಗೋಡು.
    ೨೬. ಯಕ್ಷರಂಗದ ಪ್ರಸಿದ್ಧ ಮಹಿಳಾ ಕಲಾವಿದೆ ಶ್ರೀಮತಿ ಸಾಯಿಸುಮಾ ಎಂ ನಾವಡ ಕಾರಿಂಜ.
    ೨೭. ಬಡಗುತಿಟ್ಟಿನ ಖ್ಯಾತ ಸ್ತ್ರೀ ವೇಷಧಾರಿ ಹಾಗೂ ಯಕ್ಷ ಗುರು ಶ್ರೀಯುತ ಮನೋಜ್ ಭಟ್.
    ೨೮. ಚೆಂಡೆಯ ಏಕಲವ್ಯ ಶ್ರೀಯುತ ಸುಜನ್ ಕುಮಾರ್ ಹಾಲಾಡಿ.
    ೨೯. ಬಹುಮುಖ ಪ್ರತಿಭೆ ಕಿಶನ್ ಅಗ್ಗಿತ್ತಾಯ.
    ೩೦. ಯಕ್ಷಗಾನದ ಸವ್ಯಸಾಚಿ, ಯಕ್ಷ ದಶಾವತಾರಿ, ಯಕ್ಷ ಗುರು, ಯಕ್ಷ ಕವಿ, ಪ್ರಸಂಗಕರ್ತ, ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು.
    ೩೧. ತೆಂಕುತಿಟ್ಟು ಯಕ್ಷರಂಗದ ಯುವ ಭಾಗವತರು ಶ್ರೀಯುತ ಹರಿಪ್ರಸಾದ್ ಕಾರಂತ್ ಸರಪಾಡಿ.
    ೩೨. ಬಹುಮುಖ ಪ್ರತಿಭೆ ಅಜಿತ್ ಕೆರೆಕಾಡು.
    ೩೩. ಯಕ್ಷ ನಾಟ್ಯ ಗುರು, ವೇಷಧಾರಿ ಶ್ರೀಯುತ ದಿವಾಣ ಶಿವಶಂಕರ ಭಟ್.
    ೩೪. ಸುಮಧುರ ಕಂಠದ ಭಾಗವತರು ಶ್ರೀಯುತ ಪ್ರದೀಪ್ ಕುಮಾರ್ ಗಟ್ಟಿ.
    ೩೫. ಬಡಗುತಿಟ್ಟಿನ ಖ್ಯಾತ ಭಾಗವತರು ಸ್ವರ ನಿಧಿ ಶ್ರೀಯುತ ಪ್ರಸನ್ನ ಭಟ್ ಬಾಳ್ಕಲ್.
    ೩೬. ಮದ್ದಳೆ ಮಾಂತ್ರಿಕ ರಾಘವೇಂದ್ರ ಪರಮೇಶ್ವರ ಹೆಗಡೆ.
    ೩೭. ಯಕ್ಷ ಗುರು, ಸಂಘಟಕ, ಕಲಾ ಪೋಷಕ, ನಿರೂಪಕ ಶ್ರೀಯುತ ರವಿ ಅಲೆವೂರಾಯ ವರ್ಕಾಡಿ.
    ೩೮. ಯಕ್ಷರಂಗದಲ್ಲಿ ಮಿನುಗುತ್ತಿರುವ ಉಪನ್ಯಾಸಕಿ  ಶ್ರೀಮತಿ ವಿನುತ ನಿತೇಶ್ ಪೂಜಾರಿ.
    ೩೯. ಯಕ್ಷಕುವರಿ ದಿಶಾ ಸಿ ಶೆಟ್ಟಿ ಕಟ್ಲ.
    ೪೦. ಯಕ್ಷಗಾನದ ಪ್ರಸಂಗಕರ್ತ ಶ್ರೀಯುತ ಬೇಳೂರು ವಿಷ್ಣುಮೂರ್ತಿ ನಾಯಕ್.
    ೪೧. ಯಕ್ಷರಂಗದ ಯುವ ವೇಷಧಾರಿ ಶ್ರೀಯುತ ರವಿಕುಮಾರ್ ಮುಂಡಾಜೆ.
    ೪೨. ಯಕ್ಷ ಮಾಣಿಕ್ಯ ಶ್ರೀಯುತ ರಾಕೇಶ್ ರೈ ಅಡ್ಕ.
    ೪೩. ತೆಂಕುತಿಟ್ಟು ಯಕ್ಷಗಾನ ರಂಗದ ಹಸನ್ಮುಖಿ ಕಲಾವಿದ ಶ್ರೀಯುತ ಆನಂದ್ ಪೂಜಾರಿ ಕೊಕ್ಕಡ.
    ೪೪. ರಂಗದ ಚೆಲುವ ಹರೀಶ್ ಮೊಗವೀರ ಜಪ್ತಿ‌ .
    ೪೫. ಯಕ್ಷಸಂಸಾರ:- ಶಾಲಿನಿ ಹೆಬ್ಬಾರ್, ಜಯಪ್ರಕಾಶ್ ಹೆಬ್ಬಾರ್, ವರುಣ್ ಹೆಬ್ಬಾರ್.
    ೪೬. ಮದ್ದಳೆ ಮಾಂತ್ರಿಕ ಪರಮೇಶ್ವರ್ ಪ್ರಭಾಕರ್ ಭಂಡಾರಿ.
    ೪೭. ಉಭಯತಿಟ್ಟಿನ ಭಾಗವತರು ಶ್ರೀಯುತ ಕೃಷ್ಣ ಪ್ರಪುಲ್ಲ.
    ೪೮. ಮದ್ದಳೆಯ ನಾದ ಶ್ರೀಯುತ ಕೃಷ್ಣಪ್ರಕಾಶ ಉಳಿತ್ತಾಯ.
    ೪೯. ತೆಂಕುತಿಟ್ಟು ಯಕ್ಷಗಾನ ರಂಗದ ಭಾಗವತರು ಶ್ರೀಯುತ ಡಾ.ಸತೀಶ್ ಪುಣಿಂಚತ್ತಾಯ ಪೆರ್ಲ.
    ೫೦. ಕಲಾವಿದರ ಕಾಮಧೇನು, ಯಕ್ಷಗಾನ ರಂಗದ ಧ್ರುವ ತಾರೆ, ಪಾವಂಜೆ ಮೇಳದ ಪ್ರದಾನ ಭಾಗವತರು ಶ್ರೀಯುತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ.
    ೫೧. ಯಕ್ಷರಂಗದಲ್ಲಿ ಮಿನುಗುತ್ತಿರುವ ಇಂಗ್ಲಿಷ್ ಉಪನ್ಯಾಸಕ ಶ್ರೀಯುತ  ಶಶಾಂಕ್ ಪಟೇಲ್ ಕೆ.ಜಿ.
    ೫೨. ಯಕ್ಷರಂಗದಲ್ಲಿ ಮಿನುಗುತ್ತಿರುವ ಕನ್ನಡ ಅಧ್ಯಾಪಕಿ ಸುಷ್ಮಾ ಉದ್ಯಾವರ.
    ೫೩. ರಂಗಮಂಚದ ಯಕ್ಷ ಸ್ಪೂರ್ತಿಯ ಚಿಲುಮೆ.
    ೫೪. ಯಕ್ಷಗಾನ ರಂಗದ ಧ್ರುವ ತಾರೆ ಗಾನ ಕೋಗಿಲೆ ಶ್ರೀಯುತ ದಿ.ಕಾಳಿಂಗ ನಾವಡ.
    ೫೫. ಕಲಾಧರ್ಮ ದೇಗುಲದ ಯಕ್ಷ ‌ಪ್ರಣತಿ ಅಬ್ದುಲ್ ರವೂಫ್
    ೫೬. ಚೆಂಡೆ ವಾದಕಿ ದಿವ್ಯಶ್ರೀ ನಾಯಕ್ ಸುಳ್ಯ.
    ೫೭. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ತಾಯಿ-ಮಗಳು; ಶ್ರೀಮತಿ ಜ್ಯೋತಿ ಟಿ.ಎನ್ ಹಾಗೂ ಅವರ ಮಗಳು ಕುಮಾರಿ ಟಿ.ಎನ್ ಶ್ರೀರಕ್ಷಾ ಭಟ್.
    ೫೮. ಪರಂಪರೆ ನೆಚ್ಚುವ ಯುವ ಕಲಾವಿದ ಉದಯ ಹೆಗಡೆ.
    ೫೯. ಬಡಗುತಿಟ್ಟಿನ ಯುವ ಮಹಿಳಾ ಭಾಗವತರು ಕುಮಾರಿ ಶ್ರೀರಕ್ಷಾ ರತ್ನವರ್ಮ ಹೆಗಡೆ.
    ೬೦. ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಭಾಗವತರಾದ ಶ್ರೀಯುತ ರಮೇಶ್ ಭಟ್ ಪುತ್ತೂರು.
    ೬೧. ಯಕ್ಷಗಾನ ರಂಗದ ಮೋಹಕ ತಾರೆ ಸುಧೀರ್ ಉಪ್ಪೂರು.
    ೬೨. ಬಡಗುತಿಟ್ಟು ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರು ಯಕ್ಷಮಾಣಿಕ್ಯ ಕು.ಚಿಂತನಾ ಹೆಗಡೆ ಮಾಳಕೋಡು.
    ೬೩. ಬಡಗುತಿಟ್ಟು ಯಕ್ಷಗಾನದ ಯುವ ಭಾಗವತರು ಶ್ರೀಯುತ ಪಲ್ಲವ ಗಾಣಿಗ ಹೇರಂಜಾಲು.
    ೬೪. ಯಕ್ಷ ಮೇನಕೆ ಶ್ರೀಯುತ ಮಹೇಶ್ ಕುಮಾರ್ ಸಾಣೂರು.
    ೬೫. ಯಕ್ಷ ರಂಗದ ಯುವ ಮಹಿಳಾ ಕಲಾವಿದೆ ಕುಮಾರಿ ಸುಷ್ಮಿತಾ ಸಾಲಿಗ್ರಾಮ.
    ೬೬. ಬಹುಮುಖ ಪ್ರತಿಭೆ ನೃತ್ಯ ವಿದುಷಿ ಶ್ರೀಮತಿ ಬಿ ಸುಮಂಗಲಾ ರತ್ನಾಕರ್ ರಾವ್.
    ೬೭. ಯಕ್ಷ ಚಿರ ಕನ್ಯೆ ಪಂಜು ಪೂಜಾರಿ ಬಗ್ವಾಡಿ.
    ೬೮. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕನ್ನಡ ಉಪನ್ಯಾಸಕ ಶ್ರೀಯುತ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ.
    ೬೯. ಯಕ್ಷಗಾನ ಕಲಾವಿದ, ಕಲಾ ಪೋಷಕ, ಸಮಾಜ ಸೇವಕ ಶ್ರೀ ಪಿ.ಜಿ ಜಗನ್ನಿವಾಸ ರಾವ್ ಪುತ್ತೂರು.
    ೭೦. ಯುವ ಯಕ್ಷ ರಂಗಕರ್ಮಿ ಶ್ರೀಯುತ ಶಮಂತ್ ಕುಮಾರ್ ಕೆ ಎಸ್.
    ೭೧. ಯಕ್ಷಗಾನದ ಬೆಂಕಿ ಚೆಂಡು ಶ್ರೀಯುತ ವಿಶ್ವನಾಥ್ ಪೂಜಾರಿ ಹೆನ್ನಾಬೈಲ್.
    ೭೨. ಬಡಗುತಿಟ್ಟಿನ ಪ್ರಖ್ಯಾತ ಚೆಂಡೆ ವಾದಕರು ಶ್ರೀಯುತ ರಾಧಾಕೃಷ್ಣ ಕುಂಜಿತ್ತಾಯ.
    ೭೩. ಕಟೀಲು ಮೇಳದ ದೇವಿ ಪಾತ್ರಧಾರಿ ಶ್ರೀಯುತ ಅರುಣ್ ಕೋಟ್ಯಾನ್.
    ೭೪. ತೆಂಕುತಿಟ್ಟು ಯಕ್ಷಗಾನ ರಂಗದ ಹವ್ಯಾಸಿ ಚೆಂಡೆ,ಮದ್ದಳೆ ವಾದಕರು ವೇಷಧಾರಿ ಶ್ರೀ ಮಧ್ವರಾಜ್ ಅಡಿಗ.
    ೭೫. ಯಕ್ಷಗಾನ ಪರಂಪರೆಯ ಪ್ರತಿಪಾದಕ ಗುರು ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ ಭಾಗವತೀ ಶ್ರೀಮತಿ ಲೀಲಾ ಬೈಪಾಡಿತ್ತಾಯ.
    ೭೬. ಬಡಗುತಿಟ್ಟಿನ “ಯಕ್ಷಯುವರಾಜ” ಚಂದ್ರಹಾಸ ಭೈರು ಗೌಡ.
    ೭೭. ಸುಮಧುರ ಕಂಠದ  ಭಾಗವತರು ಶ್ರೀಯುತ ಗಣೇಶ್ ಕುಮಾರ್ ನೆಲ್ಲಿಕಟ್ಟೆ.
    ೭೮. ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸ್ತ್ರೀ ವೇಷಧಾರಿ ಶ್ರೀಯುತ ಮುರಳೀಧರ ಕನ್ನಡಿಕಟ್ಟೆ.
    ೭೯. ಕಟೀಲು ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶ್ರೀಯುತ ಶೇಖರ್ ಗೌಡ ಹಿರೇಬಂಡಾಡಿ.
    ೮೦. ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಮಹಿಳಾ ಕಲಾವಿದೆ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ.
    ೮೧. “ಬಿಸ್ಮಿಲ್ಲಾ ಖಾನ್ ರಾಷ್ಟ್ರೀಯ ಯುವ ಪುರಸ್ಕಾರ” ಪ್ರಶಸ್ತಿ ಪುರಸ್ಕಾರ ಪಡೆದ ಭಾಗವತರು ಶ್ರೀಯುತ  ಅನಂತ ಹೆಗಡೆ ದಂತಳಿಗೆ.
    ೮೨. ಬಡಗುತಿಟ್ಟು ಯಕ್ಷಗಾನ ರಂಗದ  ಯುವ ವೇಷಧಾರಿ ವಿನಯ ಭಟ್  ಬೇರೊಳ್ಳಿ.
    ೮೩. ಯಕ್ಷಗಾನ ಕಥಾಕರ್ತೆ,ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀಮತಿ ಅರ್ಪಿತಾ ಹೆಗಡೆ.
    ೮೪. ಯಕ್ಷಗಾನ ಪ್ರಸಂಗಕರ್ತೆ ಶುಭಾಶಯ.
    ೮೫. ದುಬೈ ಯಕ್ಷಗಾನ ಅಭ್ಯಾಸ ತರಗತಿಯ ನಾಟ್ಯ ಗುರು ಶ್ರೀಯುತ ಶರತ್ ಕುಡ್ಲ.
    ೮೬. ಬಹುಮುಖ ಪ್ರತಿಭೆ ಯಕ್ಷಗಾನ ನಿರ್ದೇಶಕಿ  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ.
    ೮೭. ಯಕ್ಷ ಗಾರುಡಿ, ಸವ್ಯಸಾಚಿ ಶ್ರೀಯುತ ಸುಬ್ರಾಯ ಹೆಬ್ಬಾರ್ ಬಿ.
    ೮೮. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸೋದರಿಯರು. (ಕುಮಾರಿ ಹೇಮಸ್ವಾತಿ ಹಾಗೂ ದೇವಿಕಾ ಕುರಿಯಾಜೆ.)
    ೮೯. ಯಕ್ಷದ್ಯುಮಣಿ ಮೋಹನ್ ಕುಮಾರ್ ಅಮ್ಮುಂಜೆ
    ೯೦. ಕಿರುತೆರೆ ನಟಿ, ಯಕ್ಷಗಾನ ಕಲಾವಿದೆ ನಾಟ್ಯ ಮಯೂರಿ ನಾಗಶ್ರೀ ಜಿ ಎಸ್.
    ೯೧. ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ.
    ೯೨. ಯಕ್ಷರಂಗದ ಯುವ  ವೇಷಧಾರಿ ಶ್ರೀಯುತ ಮಧುರಾಜ್ ಎಡನೀರು
    ೯೩. ಸುಮಧುರ ಕಂಠದ ಭಾಗವತರು ಸುಧೀರ್ ಭಟ್ ಪೆರ್ಡೂರು.
    ೯೪. ಯಕ್ಷ ಲೋಕದ ನಾಟ್ಯ ಮಯೂರಿ ಶ್ರೀ ವಂಡಾರು ಗೋವಿಂದ ಮೊಗವೀರ.
    ೯೫. ಚೆಂಡೆಯ ಗಂಡುಗಲಿ ರಾಕೇಶ್ ಮಲ್ಯ ಹಳ್ಳಾಡಿ.
    ೯೬. ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ.
    ೯೭. ಯಕ್ಷ ಕುವರಿ ನಿಹಾರಿಕಾ ಕೆ ಭಟ್.
    ೯೮. ತೆಂಕು ಬಡಗಿನ ಯುವ ಕಲಾವಿದ ಶಬರೀಶ್ ಆಚಾರ್ಯ ಮುನಿಯಾಲು.
    ೯೯. ರಸಗಾನ ವಿಶಾರದ- ಸುರೇಶ ಶೆಟ್ಟಿ ಶಂಕರನಾರಾಯಣ.
    ೧೦೦. ಸ್ವರ ಸ್ನೇಹ ಜೀವಿ ರಾಘವೇಂದ್ರ ಮಯ್ಯ ಹಾಲಾಡಿ.
    ೧೦೧. ಅಭಿನಯ ಶಾರದೆ ಡಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ.
    ೧೦೨. ಯಕ್ಷ ರಂಗದ ಡೈನಮಿಕ್ ಸ್ಟಾರ್ ವಿದ್ಯಾಧರ ರಾವ್‌ ಜಲವಳ್ಳಿ.
    ೧೦೩.  ಯಕ್ಷ ರಂಗದ ಪುರುಷ ಹಾಗೂ ಸ್ತ್ರೀ ವೇಷಧಾರಿ ಪ್ರಸಾದ್ ಸವಣೂರು.
    ೧೦೪. ಮೌಲ್ಯಾಧಾರಿತ ಯಕ್ಷ ಕವಿ ಪ್ರೊ.ಪವನ್ ಕಿರಣ್ ಕೆರೆ.
    ೧೦೫. ಗಾನ ಸಾರಥಿ ಶ್ರೀಯುತ ರಾಘವೇಂದ್ರ ಆಚಾರ್ಯ ಜನ್ಸಾಲೆ.
    ೧೦೬. ಯಕ್ಷ ಪುರುಷೋತ್ತಮ ದೀಪಕ್ ರಾವ್ ಪೇಜಾವರ.
    ೧೦೭. ಯಕ್ಷಾಶ್ವತ್ಥ, ಯಕ್ಷ ವಾಗ್ವಾರಿಧಿ ಮಂಕಿ ಈಶ್ವರ  ನಾಯ್ಕ.
    ೧೦೮. ಯಕ್ಷ ವಚನ ಮೌಕ್ತಿಕ ಹರೀಶ್ ಬಳಂತಿಮೊಗರು.
    ೧೦೯. ಯಕ್ಷ ಕನ್ನಿಕೆ ನಾಗರಾಜ್ ಪೂಜಾರಿ ದೇವಲ್ಕುಂದ.
    ೧೧೦. ಸತ್ವ ಸಂಪನ್ನ ಭಾಗವತ ಲಂಬೋದರ ಹೆಗಡೆ.
    ೧೧೧. ಯುವ ಮದ್ದಳೆ ವಾದಕ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ.
    ೧೧೨. ಸ್ವರವಾರಿಧಿ ಕಾವ್ಯಶ್ರೀ ಗುರುಪ್ರಸಾದ್ ಆಜೇರು.
    ೧೧೩. ಯುವ ಚೆಂಡೆ, ಮದ್ದಳೆ ವಾದಕರು ಸಮರ್ಥ್ ಎಸ್‌ ಉಡುಪ ಕತ್ತಲ್ ಸಾರ್.
    ೧೧೪. ಬಡಗುತಿಟ್ಟಿನ ರಾಜ ಹಾಸ್ಯಗಾರ “ಅಭಿನವ ಕಲಾ ಕೊರ್ಗು” ಕಮಲಶಿಲೆ ಮಹಾಬಲ ದೇವಾಡಿಗ.
    ೧೧೫. ಯಕ್ಷಗಾನ ರಂಗದ ಯುವ ವೇಷಧಾರಿ ಹಾಗೂ ತಾಳಮದ್ದಳೆ ಅರ್ಥಧಾರಿ ಮಹೇಂದ್ರ ಆಚಾರ್ಯ ಹೆರಂಜೆ.
    ೧೧೬. ಯುವ ಹಾಸ್ಯ ಕಲಾವಿದ “ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ” ಪುರಸ್ಕೃತ ದ್ವಿತೇಶ್ ಕಾಮತ್.
    ೧೧೭. ಯಕ್ಷ ವಿನೋದ ಕೋವಿದ. – ಸತೀಶ ಹಾಲಾಡಿ.
    ೧೧೮. ಚೆಂಡೆ ಮದ್ದಳೆಯ ಚೈತನ್ಯ.
    ೧೧೯. ಉಭಯತಿಟ್ಟುಗಳ ಮೋಹಕ ಸ್ತ್ರೀವೇಷಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ.
    ೧೨೦. ಚಂಡೆಯ ಯಕ್ಷ ನಾದಶ್ರೀ. – ಶ್ರೀಕಾಂತ ಶೆಟ್ಟಿ ಯಾಡಮೊಗೆ.
    ೧೨೧. ಬಹುಮುಖ ಪ್ರತಿಭೆ ಅಪೂರ್ವ ಆರ್ ಸುರತ್ಕಲ್.
    ೧೨೨. ತೆಂಕುತಿಟ್ಟು ಯಕ್ಷಗಾನ ರಂಗದ ಯುವ ವೇಷಧಾರಿ ಅಕ್ಷಯ್ ಭಟ್ ಮೂಡಬಿದ್ರಿ.
    ೧೨೩. ಯಕ್ಷ ‘ಪ್ರಿಯೆ’-ಕಲಾ ಸಂಪನ್ನೆ.  (ಪ್ರಿಯಾ ಬ್ರಹ್ಮಾವರ).
    ೧೨೪. ಸತ್ವಪೂರ್ಣ ಪ್ರತಿಭೆ. (ಮಯೂರ ನಾಯ್ಗ).
    ೧೨೫. ಬಹುಮುಖ ಪ್ರತಿಭೆ ಮೈತ್ರಿ ಭಟ್ ಮವ್ವಾರು.
    ೧೨೬. ಯಕ್ಷ ಪ್ರತಿಭಾಪೂರ್ಣೆ. (ಶ್ರೀಮತಿ ಚಂದ್ರಿಕಾ).
    ೧೨೭. ಯಕ್ಷಕಲೋತ್ತಮ. (ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ).
    ೧೨೮. ಅಂಬಾತನಯ ತನಯ ಯಕ್ಷಪ್ರವೀಣ.
    ೧೨೯. ತೆಂಕಿನ ರಸಗಾನ ಸಿರಿ. – ಶ್ರೀನಿವಾಸ್ ಗೌಡ ಬಳ್ಳಮಂಜ.
    ೧೩೦. ಯಕ್ಷ ರಂಗದ ರಜತ ಚಂದ್ರ.
    ೧೩೧. ಯಕ್ಷಲೋಕದ ಸಂಪನ್ನ ಪ್ರತಿಭೆ ಥಂಡಿಮನೆ ಶ್ರೀಪಾದ ಭಟ್ಟ.
    ೧೩೨. ನಾದ ಮಾಂತ್ರಿಕ. (ಸುನೀಲ ಭಂಡಾರಿ ಕಡತೋಕ).
    ೧೩೩. ಯಕ್ಷ ಕಲಾಸೌರಭ. (ಸೌರಭ ಡಿ ಮೂರ್ತಿ).
    ೧೩೪. ಚಿಟ್ಟಾಣಿ ವಂಶ ವಲ್ಲರಿ.
    ೧೩೫. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಸೋದರಿಯರು. (ನಂದನ ಮಾಲೆಂಕಿ ಹಾಗೂ ವಂದನ ಮಾಲೆಂಕಿ).
    ೧೩೬. ‘ಕಲಾಭೂಷಣ’ ಪ್ರಶಸ್ತಿ ಪುರಸ್ಕೃತೆ ಯಕ್ಷಗಾನ ಕಲಾವಿದೆ ವೈಷ್ಣವಿ ರಾವ್ ಪಡುಬಿದ್ರಿ.
    ೧೩೭. ಯಕ್ಷ ಸುಪ್ರಸನ್ನ. (ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ).
    ೧೩೮. ಯಕ್ಷ ನಾದದ ಸಂಪನ್ನ ಪ್ರತಿಭೆ. (ಭರತ್ ಚಂದನ್ ಕೋಟೇಶ್ವರ).
    ೧೩೯. ಉಜ್ವಲ ಪ್ರತಿಭೆ.  (ಶಿವಾನಿ ಸುರತ್ಕಲ್).
    ೧೪೦. “ಯಕ್ಷ ರಕ್ಷಾ ಪ್ರಶಸ್ತಿ” ಪುರಸ್ಕೃತ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ.
    ೧೪೧. ನಾದ ಪ್ರತಿಭೆ. (ಅನಿರುದ್ಧ ಹೆಗಡೆ ವರ್ಗಾಸರ).
    ೧೪೨. ಯಕ್ಷತೇಜಶ್ರೀ. (ಗುರುತೇಜ್‌ ಶೆಟ್ಟಿ ಒಡಿಯೂರು).
    ೧೪೩. ಬಡಗಿನ ಭರವಸೆಯ ಯುವ ಚಂಡೆಗಾರ. (ಕುಮಾರ್ ಅಮೀನ್).
    ೧೪೪. ಯಕ್ಷರಂಗದ ನವರಸ ಕಲಾವಿದ ಭಾಸ್ಕರ ಬಿಲ್ಲವ ತುಂಬ್ರಿ.
    ೧೪೫. ರಂಗ ಮೇನಕೆ ರವೀಂದ್ರ ಶೆಟ್ಟಿ ಹಕ್ಲಾಡಿ.
    ೧೪೬. ಯಕ್ಷ ವಿನೋದ ನಿಧಿ (ಮಹೇಶ ಮಣಿಯಾಣಿ ದೊಡ್ಡತೋಟ).
    ೧೪೭. ಚೆಂಡೆಯ ಚತುರ (ರವಿ ಆಚಾರ್ಯ ಕಾಡೂರು).
    ೧೪೮. ಯಕ್ಷಕಲಾಧರ್ಮಿ (ಮುಷ್ತಾಕ್ ಹೆನ್ನಾಬೈಲ್).
    ೧೪೯. ಪ್ರೌಢ ಹಾಸ್ಯಪಟು. (ರವಿಶಂಕರ್ ವಳಕ್ಕುಂಜ.)
    ೧೫೦. ಯಶಸ್ವಿ ಯಕ್ಷ‌ಸಂಪನ್ನೆ. (ಕಿರಣ್ ಆರ್ ಪೈ ಶಿವಮೊಗ್ಗ.)
    ೧೫೧. ವಿದ್ವತ್ ಪೂರ್ಣ ಕಲಾಸಿರಿ. (ಟಿ.ವಿ.ಅಜಿತ್ ಕಾರಂತ)
    ೧೫೨. ಯಕ್ಷಸಿಂದು ಅನ್ವಿತ ಕೆರೆಕಾಡು.
    ೧೫೩. ‘ಮತ್ತೆ ಹಾಡಿತು ಕೋಗಿಲೆ’ ಖ್ಯಾತಿಯ ಯಕ್ಷಭಾಗವತ. (ಸದಾಶಿವ ಅಮೀನ್ ಕೊಕ್ಕರ್ಣೆ.)
    ೧೫೪. ಕಲಾ ಪ್ರತಿಭಾ ರಂಜಿತೆ. (ಪೂಜಾ ಆಚಾರ್ ತೆಕ್ಕಟ್ಟೆ.)
    ೧೫೫. ಯಕ್ಷ ಪ್ರತಿಭಾ ಚೈತನ್ಯ. (ನಿತಿನ್ ಆಚಾರ್ಯ ಪಡುಬಿದ್ರಿ.)
    ೧೫೬. ಯಕ್ಷಹೆಜ್ಜೆ-ಗೆಜ್ಜೆಯ ಕಲಾಶೃತಿ. (ಶೃತಿ ಕಾಶಿ.)
    ೧೫೭. ಗಾನಕಲಾ ಕಣ್ಮಣಿ ಭಾಗವತ. (ಗೋಪಾಲಕೃಷ್ಣ ಮಯ್ಯ.)
    ೧೫೮. ಚಂಡೆವಾದನದ ನಾದಾಮೃತ. ( ಗಣೇಶ್ ವೆಂಕಟ್ರಮಣ ಗಾಂವ್ಕರ್.)
    ೧೫೯. ಯಕ್ಷಕಲೆಯ ಮಧುರ ಬಂಧುತ್ವದ ಕಲಾಕುಟುಂಬ. (ವೆಂಕಟೇಶ್ ಕ್ರಮಧಾರಿ, ವೇದಾಂತ್ ಕ್ರಮಧಾರಿ, ಶ್ರೀರಕ್ಷಾ ಕ್ರಮಧಾರಿ.)
    ೧೬೦. ಯಕ್ಷಕಲೈಸಿರಿ. (ಸಿಂಧುಶ್ರೀ ಹೆಬ್ಬಾರ್.)
    ೧೬೧. ಯಕ್ಷಲೋಕದ ಆರತಿ.
    ೧೬೨. ಯಕ್ಷ ಪಾದರಸ ಶಿವಮೂರ್ತಿ ರಾವ್ ತಾರೆಕೊಡ್ಲು.
    ೧೬೩. ಪ್ರಜಾವಾಣಿ ಯುವ ಸಾಧಕ ಪ್ರಶಸ್ತಿ ಪುರಸ್ಕೃತ ಕಲಾವಿದ ನಾಗರಾಜ ಗೋಪಾಲ ಭಟ್ ಕುಂಕಿಪಾಲ.
    ೧೬೪. ಯಕ್ಷಸಿರಿ. (ಶ್ರೀನಿಧಿ ಖಾರ್ವಿ).
    ೧೬೫. ಸಾಮಗ ಮನೆತನದ ಯಕ್ಷದೀಪ (ಡಾ.ಪ್ರದೀಪ ವಿ.ಸಾಮಗ).
    ೧೬೬. ಕಲಾ ಕನ್ನಿಕೆ. (ಮೇಘಶ್ರೀ ಕಜೆ).
    ೧೬೭. ಹಾಸ್ಯ ಕಾರಂಜಿ. (ಕಾರ್ತಿಕ್ ರಾವ್ ಪಾಂಡೇಶ್ವರ).
    ೧೬೮. ಯಕ್ಷ ಪ್ರತಿಭೆ ಶ್ರಾವಣಿ ಕಾಟುಕುಕ್ಕೆ.
    ೧೬೯. ಸತ್ವಭರಿತ ಪ್ರತಿಭೆ. (ಪ್ರಸಾದ್ ಚೇರ್ಕಾಡಿ).
    ೧೭೦. ಯಕ್ಷ ಕಲಾ ಸುಂದರಿ ರಾಜೇಶ್ ನಿಟ್ಟೆ.
    ೧೭೧. ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಕಲಾವಿದ ನಿತ್ಯಾನಂದ ನಾಯಕ್.
    ೧೭೨. ಕಲ್ಕೂರ ಯುವ ಪ್ರಶಸ್ತಿ, ಜ್ಞಾನಶ್ರೀ ರಾಜ್ಯ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಅಶ್ವಿನಿ ವಿ ಭಟ್.
    ೧೭೩. ಉತ್ಸಾಹೀ ಯುವ ಪ್ರತಿಭೆ. (ಪುನೀತ್ ಬೋಳಿಯಾರು).
    ೧೭೪. ಗಾನ ಕೋವಿದ. (ಪದ್ಯಾಣ ಗೋವಿಂದ ಭಟ್).
    ೧೭೫. ಯಕ್ಷಗಾಯನ ಸಂತೋಷ.
    ೧೭೬. ಯಕ್ಷಗಾನ ರಂಗದಲ್ಲಿ ಪ್ರಜ್ವಲಿಸುತ್ತಿರುವ ನಕ್ಷತ್ರ ಪ್ರಜ್ವಲ್ ಕುಮಾರ್.
    ೧೭೭. ಬಹುಮುಖ ಪ್ರತಿಭೆ ಪಂಚಮಿ ವೈದ್ಯ ತೆಕ್ಕಟ್ಟೆ.
    ೧೭೮. ಕದ್ರಿ ವಿಷ್ಣು ಪ್ರಶಸ್ತಿ ಪುರಸ್ಕೃತ ಕಲಾವಿದ ಮೋಹನ ಬೆಳ್ಳಿಪ್ಪಾಡಿ.
    ೧೭೯. ಯಕ್ಷಸಿರಿ (ಸುಕೇಶ ಹೆಗ್ಡೆ ಮಡಾಮಕ್ಕಿ).
    ೧೮೦. ಯಕ್ಷ ಕವಯಿತ್ರಿ. (ಶಾಂತಾ ವಾಸುದೇವ ಪೂಜಾರಿ).
    ೧೮೧. ಯಕ್ಷ ಕಲಾ ಕುಸುಮ. (ವೈ ಎಲ್ ವಿಶ್ವರೂಪ ಮಧ್ಯಸ್ಥ).
    ೧೮೨. ಯಕ್ಷಪ್ರೇಮರಾಜ. (ಪ್ರೇಮ್ ರಾಜ್‌  ಕೊಯಿಲ).
    ೧೮೩. ಯಕ್ಷ ಯುವ ರತ್ನ ಧೀರಜ್ ರೈ ಸಂಪಾಜೆ.
    ೧೮೪.  ರಜತ ಯಕ್ಷಮಣಿ ವಸುಂಧರಾ ಹರೀಶ್ ಶೆಟ್ಟಿ.
    ೧೮೫. ಬಹುಮುಖಿ ಪಾತ್ರಪ್ರವೀಣ. (ದಿನೇಶ್ ನಾಯ್ಕ ಕನ್ನಾರು).
    ೧೮೬. ಯಕ್ಷೋತ್ಸಾಹೀ ಕಲಾಪಟು. (ಅಜಿತ್ ಪುತ್ತಿಗೆ).
    ೧೮೭. ಯಕ್ಷಪ್ರತಿಭಾ ಕಲೈಸಿರಿ. (ಪಡುಕರೆ ಮಂಜುನಾಥ ಭಂಡಾರಿ).
    ೧೮೮. ಯಕ್ಷ ಮೋಹಿನಿ. (ದಿನಕರ್ ಕುಂದರ್ ನಡೂರು).
    ೧೮೯. ಪ್ರತಿಭೆಯ ಬಹುಮುಖದ ವಿದ್ವಾಂಸ. (ಡಾ.ವಿನಾಯಕ ಭಟ್ಟ ಗಾಳಿಮನೆ).
    ೧೯೦. ಜ್ಞಾನಶ್ರೀ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ ಚೈತ್ರ ಹೆಚ್.
    ೧೯೧. ಯಕ್ಷಕಲಾ ಪ್ರದೀಪ. (ಚಾರ ಪ್ರದೀಪ ಹೆಬ್ಬಾರ್).
    ೧೯೨. ತೆಂಕು ಬಡಗಿನ ಕಲಾವಿದೆ ವಿಂಧ್ಯಾ ಆಚಾರ್ಯ ಕೆ.
    ೧೯೩. ಯಕ್ಷೋತ್ಸಾಹಿ ಪ್ರತಿಭೆ. (ಟಿ.ಎಸ್.ಶ್ರೀವತ್ಸ ಭಟ್).
    ೧೯೪. ಯಕ್ಷೋತ್ಸಾಹೀ ಕಲಾಕಿನ್ನರ. (ಸನ್ಮಯ್ ಭಟ್ ಮಲವಳ್ಳಿ).
    ೧೯೫. ಸರ್ವಾಂಗ ಶುದ್ಧ ಪ್ರಬುದ್ಧ ವೇಷಧಾರಿ. (ಗಿಳಿಯಾರು ಗೋಪಾಲಕೃಷ್ಣ ಪೈ).
    ೧೯೬. ಯಕ್ಷಕನ್ಯೆ. (ಛಾಯಾಲಕ್ಷ್ಮೀ ಆರ್.ಕೆ).
    ೧೯೭.ದಿವ್ಯ ಗಾನಶ್ರೀ. (ದಿವ್ಯಶ್ರೀ ಭಟ್ ಪುತ್ತಿಗೆ).
    ೧೯೮. ನಾದ ಮಾಂತ್ರಿಕ ಎನ್.ಜಿ ಹೆಗಡೆ.
    ೧೯೯. ಚೆಂಡೆಯ ನಾದ ಗಾರುಡಿಗ. (ಕೋಟ ಶಿವಾನಂದ).
    ೨೦೦. ಸಿಡಿಲಮರಿ – ರಂಗಪಾದರಸ. (ತೀರ್ಥಹಳ್ಳಿ ಗೋಪಾಲ ಆಚಾರ್ಯ).

    ಇನ್ನು ಮುಂದಕ್ಕೆ ಈ ಸರಣಿ ಲೇಖನದಲ್ಲಿ ಇನ್ನೂ ಅನೇಕ ಕಲಾವಿದರನ್ನು ಪರಿಚಯಿಸುವ ಪ್ರಯತ್ನವನ್ನು ಮಾಡುತ್ತೇನೆ. ಮುಂದೆ ಬರುವ ಎಲ್ಲಾ ಲೇಖನ ಹಾಗೂ ನಮ್ಮ ಯೋಜನೆಗೆ ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ….

    ಈ ಸರಣಿ ಲೇಖನ ಬರೆಯಲು ನನಗೆ ಪ್ರೋತ್ಸಾಹ ನೀಡಿದ ಪ್ರತೀಯೊಬ್ಬರಿಗೂ ಹಾಗೂ ಲೇಖನದಲ್ಲಿ ಪರಿಚಯಿಸಲ್ಪಟ್ಟಿರುವ ಪ್ರತೀಯೊಬ್ಬ ಕಲಾವಿದರಿಗೂ ತುಂಬು ಹೃದಯದ ಧನ್ಯವಾದಗಳು ಹಾಗೂ ಈ ಸರಣಿ ಲೇಖನದಲ್ಲಿ ಕಲಾವಿದರ ಬಗ್ಗೆ ಮಾಹಿತಿ, ಫೋಟೋ, ವಿಡಿಯೋ ನೀಡಿ ಸಹಕರಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳು.

    ನಿಮ್ಮೆಲ್ಲರಿಗೂ ತಿಳಿದಿರುವಂತೆ ಯಕ್ಷಗಾನ ಕಲೆ ಹಾಗೂ ಕಲಾವಿದರ ಮೇಲಿನ ಪ್ರೀತಿ ಗೌರವದಿಂದ ಆರಂಭಿಸಿದ ಲೇಖನ ಮಾಲಿಕೆಯ ಸಂಖ್ಯೆ ತಲುಪಿದೆ ೨೦೦. ನನ್ನ ಈ ಅಳಿಲು ಸೇವೆಗೆ ನೀವೆಲ್ಲರೂ ನೀಡಿದ ಪ್ರೋತ್ಸಾಹ ಸಲಹೆ ಸಹಕಾರಕ್ಕೆ ಧನ್ಯವಾದಗಳು. ಇನ್ನು ಮುಂದೆಯೂ ದೇವರ ಅನುಗ್ರಹ ಹಾಗೂ ನಿಮ್ಮೆಲ್ಲರ ಆಶೀರ್ವಾದ ಪ್ರೋತ್ಸಾಹ ಸಲಹೆ ಸಹಕಾರವನ್ನು ಬಯಸುತ್ತಾ, ಇನ್ನೂ ಅನೇಕ ಹಿರಿಯ – ಕಿರಿಯ ಕಲಾವಿದರನ್ನು ಹಾಗೂ ತೆರೆಮರೆಯ ಯುವ ಕಲಾವಿದರನ್ನು ಪರಿಚಯಿಸಲು ಪ್ರಯತ್ನಿಸುವೆ. ಮಗದೊಮ್ಮೆ ಧನ್ಯವಾದಗಳೊಂದಿಗೆ..,

    Photos by:- Dheeraj Udupa Uppinakudru, Sandeep Ballal Photography,  Sharavoor Shikhin Sharma.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು

    Share. Facebook Twitter Pinterest LinkedIn Tumblr WhatsApp Email
    Previous Article‘ಸ್ವರುಣ್ ಸ್ಮರಣಾಂಜಲಿ 2023’ | ಜೂನ್ 9
    Next Article ಕನ್ನಡ ಸಾಹಿತ್ಯ ಪರಿಷತ್ತಿನ 2022ನೇ ಸಾಲಿನ ʻಕನ್ನಡ ಕಾಯಕ ದತ್ತಿ ಪ್ರಶಸ್ತಿʼ ಪ್ರಕಟ
    roovari

    Add Comment Cancel Reply


    Related Posts

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.