ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಸಹಭಾಗಿತ್ವದಲ್ಲಿ ಅನುಪಲ್ಲವಿಯಲ್ಲಿ ಶಾಸ್ತ್ರೀಯ ಸಂಗೀತ ಸರಣಿಯ ಉದಯರಾಗ-44ನೇ ಕಾರ್ಯಕ್ರಮವು ದಿನಾಂಕ 04-06-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೈಕಂಪಾಡಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಘಟಕ ಮುಖ್ಯಸ್ಥರಾದ ಶ್ರೀ ಕುಮಾರಸ್ವಾಮಿ ಬಿ.ಎಸ್. ಮಾತನಾಡುತ್ತಾ “ಇತ್ತೀಚೆಗೆ ಉದಯೋನ್ಮುಖ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಲಭ್ಯವಾಗುತ್ತಿದೆ” ಎಂದು ನುಡಿದರು.
ಬಹುವಚನ ಸಂಸ್ಥೆಯ ಸಂಯೋಜಕ ಡಾ. ಶ್ರೀಶಕುಮಾರ್ ಪುತ್ತೂರು ಮಾತನಾಡಿ, “ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಸಾತ್ವಿಕ ಪ್ರತಿರೋಧವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಗೆ ಮೂಲ ಪ್ರೇರಣೆಯಾಗಿರುತ್ತದೆ” ಎಂದರು.
ಶ್ರೀಯುತ ಸುನಾದ ಪಿ.ಎಸ್. ಇವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್ ನಲ್ಲಿ ಸುಪ್ರಿತಾ ಪಿ.ಎಸ್., ಮೃದಂಗದಲ್ಲಿ ಕೃಷ್ಣ ಪವನ್ ಕುಮಾರ್ ಸಹಕರಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್ ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ನಿರೂಪಿಸಿದರು.