ಮಂಗಳೂರು: ತುಳು ಕೂಟ ಕುಡ್ಲದ ಆಶ್ರಯದಲ್ಲಿ 17-06-2023ರಂದು ಬೆಳಿಗ್ಗೆ 10 ಗಂಟೆಗೆ ನಂತೂರಿನ ಭಾರತೀ ಕಾಲೇಜಿನ ಶಂಕರ ಸದನದಲ್ಲಿ ‘ಬಂಗಾರ್ ಪರ್ಬ ಸರಣಿ ಕಾರ್ಯಕ್ರಮ-4’ದಲ್ಲಿ ‘ಯಕ್ಷಗಾನೊಡು ತುಳು ಸಾಹಿತ್ಯೊ’ ಕಾರ್ಯಕ್ರಮವು ನಡೆಯಲಿದೆ.
ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸರಣಿ ಕಾರ್ಯಕ್ರಮದಲ್ಲಿ ‘ಯಕ್ಷಗಾನೊಡು ತುಳು ಸಾಹಿತ್ಯೊ’ ಎಂಬ ವಿಷಯದ ಬಗ್ಗೆ ಪರಿಚಯ ಕೊಡಲಿದ್ದಾರೆ ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ ಸಾರ್. ನಂತೂರಿನ ಶ್ರೀ ಭಾರತೀ ಗ್ರೂಪ್ ಆಫ್ ಇನಿಸ್ಟಿಟ್ಯೂಷನ್ಸ್ ಇದರ ಕಾರ್ಯದರ್ಶಿಗಳಾದ ಶ್ರೀ ಶ್ರೀಕೃಷ್ಣ ಭಟ್ ನೀರಮೂಲೆ, ಶ್ರೀ ಭಾರತೀ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಂಗಾರತ್ನ, ಶ್ರೀ ಭಾರತೀ ಪ. ಪೂ ಕಾಲೇಜಿನ ಕೋಶಾಧಿಕಾರಿಗಳಾದ ಶ್ರೀ ಉದಯ ಶಂಕರ್ ನೀರ್ಪಾಜೆ ಹಾಗೂ ಹವ್ಯಕ ಮಹಾಮಂಡಲದ ಮುಷ್ಟಿಭಿಕ್ಷಾ ಪ್ರಧಾನದ ಶ್ರೀ ಸರವು ರಮೇಶ್ ಭಟ್ ಇವರೆಲ್ಲರೂ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶ್ರೀ ಅಕ್ಷಯ ಸುವರ್ಣರ ನೇತೃತ್ವದಲ್ಲಿ ‘ರವಿರತ್ನೊ’ ಎಂಬ ಯಕ್ಷಗಾನ ನಡೆಯಲಿದೆ.
ತುಳು ಕೂಟ ಮಂಗಳೂರಿನ ಅಧ್ಯಕ್ಷರಾದ ಶ್ರೀ ದಾಮೋದರ ನಿಸರ್ಗ, ಪ್ರಧಾನ ಕಾರ್ಯದರ್ಶಿ ಶ್ರೀ ರವಿ ಅಲೆವೂರಾಯ, ಉಪಾಧ್ಯಕ್ಷರುಗಳಾದ ಶ್ರೀ ವಿ.ಜಿ. ಪಾಲ್ ಹಾಗೂ ಶ್ರೀ ಜೆ.ವಿ. ಶೆಟ್ಟಿ, ಕಾರ್ಯದರ್ಶಿಗಳಾದ ಡಾ. ರಾಕೇಶ್ ಕುಮಾರ್, ಜೊತೆ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ಪಿ. ಹಾಗೂ ಕೋಶಾಧಿಕಾರಿ ಶ್ರೀ ಚಂದ್ರಶೇಖರ ಸುವರ್ಣ ತಮ್ಮೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.