ಮಂಗಳೂರು: ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆ ಜೂನ್ 11ರಂದು ‘ನೃತ್ಯೋತ್ಸವ-2023’ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅಂದು ಮಧ್ಯಾಹ್ನ 2.45ಕ್ಕೆ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಲಾನಿಕೇತನ ಡಾನ್ಸ್ ಫೌಂಡೇಶನ್ ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್ ಚಾಲನೆ ನೀಡುವರು. ಯುವ ನೃತ್ಯೋತ್ಸವ-2023ರ ಅಂತಿಮ ಸುತ್ತಿಗೆ ಆಯ್ಕೆಯಾದ ಕಲಾವಿದೆ ಅಪರ್ಣಾ ಮೋಹನ್, ಗಾಯತ್ರಿ ಜೋಶಿ, ಕಾರ್ತಿಕ್ ಮಣಿಕಂದನ್, ಮೀರಾ ಶ್ರೀ ದಂಡಪಾಣಿ, ಮೇಘಾ ಮಲರ್ ಪ್ರಭಾಕರ್, ಪಿ.ಜಿ.ಪನ್ನಗ ರಾವ್, ಪಿ.ಸ್ನವಜಾ ಕೃಷ್ಣನ್, ತ್ವಿಶಾ ವಧುಲ್ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು.
ಬಳಿಕ ಗುರು ವಿದ್ಯಾ ಮನೋಜ್ ಅವರ ಶಿಷ್ಯೆಯಂದಿರಾದ ಡಾ.ಮಹಿಮಾ ಪಣಿಕ್ಕರ್, ಅನುಷಾ ಎನ್.ರಾವ್ ಅವರ ಯುಗಳ ನೃತ್ಯ ಪ್ರದರ್ಶನ ಇರಲಿದೆ. ಅನಂತರ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯರು ಸಮೂಹ ನೃತ್ಯ ಪ್ರಸ್ತುತಪಡಿಸುವರು. ಆಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

