ಮಂಗಳೂರು : ನೆಹರು ಯುವ ಕೇಂದ್ರದ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಒಳಗೊಂಡ ‘’ಜಿಲ್ಲಾ ಯುವ ಉತ್ಸವ’ ಜೂ.10ರಂದು ಬೆಳಿಗ್ಗೆ 10.30ಕ್ಕೆ ನಗರದ ಪುರಭವನದ ಮಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲು ಜಿಲ್ಲಾ ಯುವ ಉತ್ಸವವನ್ನು ಉದ್ಘಾಟಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ನೆಹರು ಯುವ ಕೇಂದ್ರ ಕ್ಷೇತ್ರೀಯ ನಿರ್ದೇಶಕ ಎಂ.ಎನ್. ನಟರಾಜ್ ಭಾಗವಹಿಸುವರು.
ಯುವ ಉತ್ಸವದ ಸ್ಪರ್ಧೆಗಳು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆಯಲಿವೆ. ಚಿತ್ರಕಲೆ, ಕವನ ಬರವಣಿಗೆ, ಮೊಬೈಲ್ ಫೋಟೋಗ್ರಫಿ, ಸಾಂಸ್ಕೃತಿಕ ಜಾನಪದ ಗುಂಪು ನೃತ್ಯ, ಭಾಷಣ ಸ್ಪರ್ಧೆಗಳು ನಡೆಯಲಿದ್ದು ಈಗಾಗಲೇ 200ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಕಚೇರಿ, ಕಂದಾಯ ಭವನ, ಮಂಗಳೂರು (0824-2422264 ಅಥವಾ 9611134944) ಇಲ್ಲಿ ಸಂಪರ್ಕಿಸಬಹುದು.
ಸ್ಪರ್ಧೆಯ ದಿನದಂದು ಬೆಳಿಗ್ಗೆ 9 ಗಂಟೆಯವರೆಗೆ ಸಳದಲ್ಲಿಯೇ ನೋಂದಣಿಗೂ ಅವಕಾಶವಿದೆ. 2023ರ ಏಪ್ರಿಲ್ 1ಕ್ಕೆ 15-29 ವರ್ಷ ವಯಸ್ಸಿನವರಾಗಿದ್ದು, ದ.ಕ. ಜಿಲ್ಲೆಯವರು ಮಾತ್ರ ಸರ್ಧೆಯಲ್ಲಿ ಪಾಲ್ಗೊಳ್ಳಬಹುದು. ಕಾಲೇಜ್ ವಿದ್ಯಾರ್ಥಿಗಳು, ಯುವಕ ಮಂಡಲ, ಕ್ಲಬ್‌ಗಳ ಸದಸ್ಯರು ಭಾಗವಹಿಸಬಹುದು. ರೂ.5,000, ರೂ.3,000 ಮತ್ತು ರೂ.2,000 ನಗದು ಬಹುಮಾನ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದವರಿಗೆ ಸಿಗಲಿದೆ. ಅವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.