ಉಡುಪಿ : ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಇದರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ‘ಜಾನಪದ ಸ್ಪರ್ಧೆಗಳು 2023’ ದಿನಾಂಕ 18-06-2022ರಂದು ಉಡುಪಿಯ ಅಂಬಾಗಿಲಿನ ಅಮೃತ ಗಾರ್ಡನ್ ನಲ್ಲಿ ನಡೆಯಲಿದೆ. ಖ್ಯಾತ ಜಾನಪದ ಕಲಾವಿದರಾದ ಶ್ರೀ ರವಿ ಪಾಣಾರ ಪಡ್ದಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸ್ಪರ್ಧೆಯ ಬಳಿಕ ಬಹುಮಾನ ವಿತರಣೆ ಹಾಗೂ ಸೇವಾರತ್ನ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬೀ., ವಿಜಯ ಬಲ್ಲಾಳ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗೂರ್ಮೆ ಸುರೇಶ್ ಶೆಟ್ಟಿ, ಹಿರಿಯ ಜಾನಪದ ವಿದ್ವಾಂಸರಾದ ಡಾ. ವೈ.ಎನ್. ಶೆಟ್ಟಿ, ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲೋಸೊಫಿಕಲ್ ಆರ್ಟ್ಸ್ & ಸೈನ್ಸ್, ಮಾಹೆ ಇದರ ನಿರ್ದೇಶಕರಾದ ಪ್ರೊ. ವರದೇಶ ಹಿರೇಗಂಗೆ ಮತ್ತು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಭಾಗವಹಿಸಲಿದ್ದು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಷನ್ ನ ಶ್ರೀ ಸುನೀಲ್ ಸಾಲ್ಯಾನ್ ಕಡೆಕಾರ್ ಇವರಿಗೆ ‘ಸೇವಾರತ್ನ ಜಾನಪದ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿಯಾದ ರವಿರಾಜ ನಾಯಕ್, ಖಜಾಂಚಿಯಾದ ಪ್ರಶಾಂತ ಭಂಡಾರಿ ಹಾಗೂ ಸರ್ವ ಸದಸ್ಯರು ಆದರದ ಸ್ವಾಗತ ಬಯಸುತ್ತಿದ್ದಾರೆ.
ಗಾದೆ/ಒಗಟು ಹೇಳುವ ಸ್ಪರ್ಧೆ (ವೈಯಕ್ತಿಕ), ಜಾನಪದ ಗೀತೆ (ವೈಯಕ್ತಿಕ ಮತ್ತು ಸಮೂಹ), ಜಾನಪದ ವಾದ್ಯ (ಸಮೂಹ), ಜಾನಪದ ನೃತ್ಯ (ಸಮೂಹ) ಸ್ಪರ್ಧೆ ಆಯೋಜಿಸಲಾಗಿದ್ದು, ಎಲ್ಲಾ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ನಿಗದಿ ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಕೇವಲ ಉಡುಪಿ ಜಿಲ್ಲೆಯ ನಾಗರಿಕರು ಮಾತ್ರ ಭಾಗವಹಿಸಬಹುದಾಗಿದ್ದು, ಪ್ರತಿಯೊಬ್ಬ ಸ್ಪರ್ಧಿಯೂ ಆಧಾರ್ ಕಾರ್ಡ್ ಪ್ರತಿಯನ್ನು ನೊಂದಣಿಯ ವೇಳೆ ಸಲ್ಲಿಸಬೇಕು. ಜೊತೆಗೆ ರೂ.1,000 ಡಿಡಿಯೊಂದಿಗೆ ಜೂನ್ 15ರ ಸಂಜೆ 6 ಗಂಟೆಯೊಳಗಾಗಿ ಅನುಷಾ ಆಚಾರ್ಯ, ತಲ್ಲೂರ್ಸ್ ತಾಂಬೂಲಂ, ಕಂಫರ್ಟ್ ಟವರ್, ಕಲ್ಪನಾ ಚಿತ್ರ ಮಂದಿರ ಎದುರು, ಉಡುಪಿ ವಿಳಾಸಕ್ಕೆ ತಲುಪಿಸಬೇಕು. 1,000 ರೂ. ಡಿಡಿ ನೀಡಿ ನೊಂದಣಿ ಮಾಡಿ ಕೊಂಡವರ ಹಣವನ್ನು ಸ್ಪರ್ಧಾ ದಿನದಂದು ವಾಪಾಸು ನೀಡಲಾಗುವುದು.