ಮೈಸೂರು : ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು, ಸಾಹಿತಿ ಶಿಕ್ಷಕರ ವೇದಿಕೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಿದ ಸಾಧಕ ಮಹಿಳೆಯರ ಕುರಿತು ‘ಕವನ ರಚನೆ ಮತ್ತು ವಾಚನ ಸ್ಪರ್ಧೆ’ಯ ಫಲಿತಾಂಶ ಘೋಷಣೆ ಮತ್ತು ಅಭಿನಂದನಾ ಪ್ರಮಾಣ ಪತ್ರ ವಿತರಣಾ ಸಮಾರಂಭವು ದಿನಾಂಕ 05-06-2023ರಂದು ನಡೆಯಿತು.
ಸಮಾರಂಭದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ.) ಮೈಸೂರು ಇವರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಪಿ. ಮಹೇಶ್ ವಹಿಸಿದ್ದು, ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ ಕುಮಾರ ಬಂಡೆ ಇವರು ಮುಖ್ಯ ಅತಿಥಿಗಳಾಗಿ, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಶ್ರೀ ಚಂದ್ರಶೇಖರ ನಾಯಕ ಇವರು ಗೌರವ ಅತಿಥಿಗಳಾಗಿ ಹಾಗೂ ಸಹಕಾರ ಸಮಿತಿಗಳ ಮುಖ್ಯಸ್ಥರಾದ ಶ್ರೀಮತಿ ಉಮಾದೇವಿ ಗುಡ್ಡದ ಅತಿಥಿಗಳಾಗಿ ಭಾಗವಹಿಸಿದ್ದರು. ಪರಿಷತ್ತಿನ ಮುಖ್ಯಸ್ಥರಾದ ಶ್ರೀ ಲೀಲಾಧರ ಮೊಗೇರ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಲಕ್ಷ್ಮೀ ವಿ. ಭಟ್ – ಪ್ರಥಮ ಬಹುಮಾನ
ಶ್ರೀಮತಿ ಭುವನೇಶ್ವರಿ ಅಂಗಡಿ – ದ್ವಿತೀಯ ಬಹುಮಾನ
ಶ್ರೀಮತಿ ಭಾಗ್ಯ ಎಂ.ವಿ. – ಮೂರನೇ ಬಹುಮಾನ
ಕವನ ರಚನೆ ಮತ್ತು ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಂಗಳೂರು ಉರ್ವಾ ಕೆನರಾ ಪ್ರೌಢಶಾಲೆಯ ಶಿಕ್ಷಕಿ ಲಕ್ಷ್ಮೀ ವಿ. ಭಟ್, ದ್ವಿತೀಯ ಬಹುಮಾನವನ್ನು ಗದಗ ನವಗುಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ಭುವನೇಶ್ವರಿ ಅಂಗಡಿ ಮತ್ತು ಮೂರನೇ ಬಹುಮಾನವನ್ನು ಅರಸೀಕೆರೆ ಬಾಣಾವರದ ಶ್ರೀಮತಿ ಭಾಗ್ಯ ಎಂ.ವಿ. ಅವರು ಪಡೆದಿದ್ದಾರೆ. 125 ಶಿಕ್ಷಕ ಮತ್ತು ಶಿಕ್ಷಕಿಯರು ಭಾಗವಹಿಸಿದ ಈ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಲಕ್ಷಣ ಮಾಳಿ, ಶ್ರೀಮತಿ ಸವಿತಾ ನಾಯ್ಕ, ಶ್ರೀಮತಿ ವಿನಯ ನಾಯಕ್, ಶ್ರೀ ಆನಂದ ಹುಕ್ಕನ್ನವರ, ಶ್ರೀಮತಿ ಸುನೀತಾ ಮಾಳಗಿ ಮತ್ತು ಶ್ರೀಮತಿ ಕೀರ್ತಿಲತಾ ಹೊಸ್ಸಾಳೆಯವರು ಸಹಕರಿಸಿದರು.