ಪೆರ್ಡೂರು: ಇಲ್ಲಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯು ನಡೆಸುತ್ತಿರುವ ಸಂಗೀತ ಶಾಲೆಯ ಹನ್ನೊಂದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಮತ್ತು ದ.ಕ ಜಿಲ್ಲಾಮಟ್ಟದ ಆಯ್ದ ತಂಡಗಳ ಕುಣಿತ ಭಜನಾ ಸ್ಪರ್ಧೆಯನ್ನು ಜುಲೈ 16ರಂದು ಪೆರ್ಡೂರಿನ ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಭಜನಾ ತಂಡಗಳು ಸಮಿತಿಯನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆಯಬಹುದು.
ಸಂಪರ್ಕ ಸಂಖ್ಯೆ :9900408243, 9743579059
ಕುಣಿತ ಭಜನೆಯ ನಿಯಮಗಳು
1. ಪಕ್ಕವಾದ್ಯದವರನ್ನು ಸೇರಿ ಕನಿಷ್ಟ 10 ಮಂದಿ, ಗರಿಷ್ಠ 16 ಮಂದಿ ಭಜಕರಿರಬೇಕು.
2. ಯಾವುದೇ ದೇವರನಾಮಗಳನ್ನು ಹಾಡಬಹುದು.
3. ಕುಣಿತದೊಂದಿಗೆ ಹಾಡುವ ಮೂಲ ಹಾಡುಗಾರರು ಕನಿಷ್ಠ 3 ಮಂದಿ ಹಾಡಬೇಕು.
4. ಪಕ್ಕವಾದ್ಯವನ್ನು ತಂಡದವರೇ ತರಬೇಕು.
5. ತಾಳ, ತಬಲಾ ಮತ್ತು ಹಾರ್ಮೋನಿಯಂ ಕಡ್ಡಾಯವಾಗಿದ್ದು ತಪ್ಪಿದಲ್ಲಿ ಅಂಕಗಳನ್ನು
ಕಡಿತಗೊಳಿಸಲಾಗುವುದು. ಇವುಗಳೊಂದಿಗೆ ಇತರೆ ಪಕ್ಕವಾದ್ಯಗಳನ್ನು ಬಳಸಬಹುದು.
6. ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲು ಹಾಜರಿದ್ದು ನೋಂದಾಯಿಸಿಕೊಳ್ಳಬೇಕು.
7. ವಯೋಮಿತಿ ಮತು ಲಿಂಗ ಭೇದವಿಲ್ಲ.
8. ಪ್ರತಿ ತಂಡಕ್ಕೆ 20 ನಿಮಿಷಗಳ ಕಾಲಾವಧಿ ಮಾತ್ರ.
9 . ಕುಣಿತ ಭಜನೆ ಆರಂಭವಾಗಿ 15 ನಿಮಿಷ ಆದ ಕೂಡಲೇ ಮೊದಲ ಕರೆಗಂಟೆ ಬಾರಿಸಲಾಗುವುದು. ಉಳಿದ ಐದು ನಿಮಿಷದ ಒಳಗೇ ಭಜನೆ ಮುಗಿಸಬೇಕು. 15 ನಿಮಿಷಗಳ ಒಳಗೆ ಮತ್ತು 20 ನಿಮಿಷಗಳನ್ನು ಮೀರಿದಲ್ಲಿ ಅಂಕಗಳಲ್ಲಿ ಕಡಿತಗೊಳಿಸಲಾಗುವುದು.
10.ಎರಡನೇ ಕರೆಗಂಟೆ ಅಂದರೆ 20ನೇ ನಿಮಿಷದ ಬೆಲ್ ಹಾಡುತ್ತಿರುವ ತಂಡಕ್ಕೆ ಅಂತಿಮ ಕರೆಗಂಟೆ ಆಗಿರುತ್ತದೆ.
11. ಸ್ಪರ್ಧಾವಧಿಯಲ್ಲಿ 15 ನಿಮಿಷವಾದ ಕೂಡಲೇ ಮೊದಲ ಕರೆಗಂಟೆ ಬಾರಿಸಲಾಗುವುದು. ಮುಂದಿನ ತಂಡದವರು ಸ್ಪರ್ಧೆಗಾಗಿ ತಯಾರಿರಬೇಕು.
12.ತಂಡಗಳಿಗೆ ನೀಡಿರುವ ಕಾಲಾವಧಿಯನ್ನು ಉಪಯೋಗಿಸಬೇಕು.
13.ತೀರ್ಪು ನೀಡುವಾಗ ಭಜನೆ ಆರಂಭ, ಭಜನಾ ಸಂಪ್ರದಾಯದ ಸಮವಸ್ತ್ರ, ಭಜನೆ
ಹಾಡಿನ ಆಯ್ಕೆ, ರಾಗ-ತಾಳ-ಲಯ, ಕುಣಿತದ ಸಂಯೋಜನೆ, ತಂಡದ ಹೊಂದಾಣಿಕೆ, ತಂಡದ ಕ್ರಿಯಾಶೀಲತೆ ಹಾಗೂ ಭಜನೆಯ ಮುಕ್ತಾಯ ಇತ್ಯಾದಿ ಅಂಶಗಳನ್ನು ಗಮನಿಸಿ ಅಂಕಗಳನ್ನು ನೀಡಲಾಗುವುದು.
14.ಎಲ್ಲ ಭಜನಾ ತಂಡಗಳಿಗೆ ಪ್ರಮಾಣ ಪತ್ರ ಹಾಗೂ ಗೌರವಧನವನ್ನು ಸಮಾರೋಪ ಸಮಾರಂಭದ ಸಂದರ್ಭದಲ್ಲಿ ನೀಡಲಾಗುವುದು.
15.ತೀರ್ಪುಗಾರರ ತೀರ್ಮಾನವೇ ಅಂತಿಮ.
Subscribe to Updates
Get the latest creative news from FooBar about art, design and business.
ಉಡುಪಿ-ದ.ಕ. ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ‘ಕುಣಿತ ಭಜನಾ ಸ್ಪರ್ಧೆ‘ಗೆ ತಂಡಗಳಿಗೆ ಆಹ್ವಾನ | ಸ್ಪರ್ಧೆ ಜುಲೈ 16ರಂದು
Next Article ಸಂಗೀತ ಪ್ರಿಯರ ಮನಸೂರೆಗೊಂಡ ‘ಸುರ್ ಓ ಸಾಜ್’