ಬೆಂಗಳೂರು: ನಗರದ ಸಾಲಿಗ್ರಾಮ ಜೈನ ಮಿತ್ರ ಮಂಡಲಿಯವರು ನೀಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼಯನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪ್ರೊ. ಬಿ.ಪಿ. ನ್ಯಾಮಗೌಡ ಇವರಿಗೆ ಮತ್ತು ʻಶ್ರೇಯೋಭದ್ರʼ ಪ್ರಶಸ್ತಿಯನ್ನು ಮಂಚೇನಹಳ್ಳಿ ಭಗವಾನ್ ಬಾಹುಬಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೆ.ಬಿ. ಅಶೋಕ ಕುಮಾರ ಇವರಿಗೆ ಇದೇ ಭಾನುವಾರ 18ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾ ಮಂದಿರದಲ್ಲಿ ಪ್ರದಾನ ಮಾಡಲಾಗುವುದು.
ಜೈನ ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸಿದ ಸಾಹಿತಿಗಳಿಗೆ ಕೊಡಮಾಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼ ಹಾಗೂ ಉತ್ತಮ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಾಗಿ ನೀಡುವ ‘ಶ್ರೇಯೋಭದ್ರ’ ಪ್ರಶಸ್ತಿಯು ತಲಾ ರೂಪಾಯಿ10,000/-(ಹತ್ತು ಸಾವಿರ) ನಗದು, ಪ್ರಶಸ್ತಿ ಫಲಕ ಮತ್ತು ಫಲ ತಾಂಬೂಲಗಳನ್ನು ಒಳಗೊಂಡಿದೆ. ಸಾಲಿಗ್ರಾಮ ಜೈನ ಮಿತ್ರ ಮಂಡಲಿಯ 22ನೇ ವಾರ್ಷಿಕೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮೈಸೂರಿನ ಡಾ. ಸರಸ್ವತಿ ವಿಜಯಕುಮಾರ ಅವರು ʻಜೈನೇಂದ್ರ ಸಿದ್ಧಾಂತ ಕೋಶʼದ ವಿಷಯವಾಗಿ ಮತ್ತು ಪ್ರೊ.ಬಿ.ಪಿ.ನ್ಯಾಮಗೌಡ ಇವರು ‘ಮೂಕಮಾಟಿ’ ಕೃತಿಯ ವಿಷಯವಾಗಿ ಮಾತನಾಡಲಿದ್ದಾರೆ. ಜೈನ ಮಿತ್ರ ಮಂಡಳಿಯ ಅಧ್ಯಕ್ಷರಾದ ಡಾ.ನೀರಜಾ ನಾಗೇಂದ್ರಕುಮಾರ ಇವರು ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಬಯಸಿದ್ದಾರೆ.
Subscribe to Updates
Get the latest creative news from FooBar about art, design and business.
ಸಾಲಿಗ್ರಾಮ ಜೈನ ಮಿತ್ರ ಮಂಡಲಿಯವರು ನೀಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼ ಹಾಗೂ ʻಶ್ರೇಯೋಭದ್ರʼ ಪ್ರಶಸ್ತಿ ಪ್ರಕಟ
Previous Articleಕಪ್ಪಣ್ಣ ಅಂಗಳದಲ್ಲಿ 70ನೇ ಸರಣಿ ಕಾರ್ಯಕ್ರಮ ‘ಆಲಾಪ್’
Next Article ಹರಿಕಥಾ ಪರಿಷತ್ತಿನಿಂದ ‘ಮನೆ-ಮನೆ ಹರಿಕಥೆ’