ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಸಂಘದ 20ನೇ ವಾರ್ಷಿಕೋತ್ಸವ ಹಾಗೂ 2022ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 24.06.2023ನೇ ಶನಿವಾರ ಬೆಳಿಗ್ಗೆ ಬೆಂಗಳೂರಿನ ಕುಮಾರ ಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಲಿರುವುದು. ಗುಲ್ಬರ್ಗಾದ ಡಾ.ಪಿ.ಎಸ್.ಶಂಕರ್ ಅವರು – ‘ಸಾಹಿತ್ಯ ರತ್ನ ಪ್ರಶಸ್ತಿ’, ಹಾಸನದ ಶ್ರೀ ಕೌಶಿಕ್ ಕೂಡುರಸ್ತೆಯವರು ‘ಯುವ ಸಾಹಿತ್ಯ ರತ್ನ ಪ್ರಶಸ್ತಿ’, ಮೈಸೂರಿನ ಪುಸ್ತಕ ಪ್ರಕಾಶನದ ಪ್ರೊ.ಬಿ.ಎನ್.ಶ್ರೀರಾಮ ಅವರು ‘ಪುಸ್ತಕ ರತ್ನ ಪ್ರಶಸ್ತಿ’, ಮೈಸೂರಿನವರೇ ಆದ ಮೈಸೂರ್ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್‌ನ ಶ್ರೀ ಜಿ.ಎಚ್.ಕೃಷ್ಣಮೂರ್ತಿಯವರು ‘ಮುದ್ರಣ ರತ್ನ ಪ್ರಶಸ್ತಿ’ಗಳಿಗೆ ಆಯ್ಕೆಯಾಗಿದ್ದು ಈ ಪ್ರಶಸ್ತಿಯು ಫಲಕ ಹಾಗೂ ರೂಪಾಯಿ 10,000/- ನಗದು ಪುರಸ್ಕಾರವನ್ನು ಒಳಗೊಂಡಿದೆ .
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ನೆರವೇರಿಸಿಕೊಡಲು ಆಗಮಿಸುತ್ತಿರುವ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರಿಗೆ “ಗೌರವಾಭಿನಂದನೆಯನ್ನು” ಮಾಡಲಾಗುವುದು. ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನಾಡೋಜ ಡಾ.ಹಂಪ ನಾಗರಾಜಯ್ಯ, ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.