ಮುಂಬೈ: ತ್ರಿರಂಗ ಸಂಗಮ ಮುಂಬೈ ಇವರ ಸಂಚಾಲಕತ್ವದಲ್ಲಿ ಮಂಗಳೂರಿನ ಜೈ ಮಾತಾ ಕಲಾತಂಡ ಅಭಿನಯಿಸುವ ‘ ಗುಸು ಗುಸು ಉಂಡುಗೆ ‘ ತುಳು ನಾಟಕದ ಮುಂಬೈ ಪ್ರವಾಸವು ದಿನಾಂಕ 22-07-2023 ರಿಂದ 30-07-2023ರ ವರೆಗೆ ನಡೆಯಲಿದೆ.
ಅರುಣ್ ಶೆಟ್ಟಿ ಕಥೆ ಮತ್ತು ಸಂಚಾಲಕತ್ವದ ಈ ತಂಡದ ಸಾರಥ್ಯ ರಮೇಶ್ ರೈ ಕುಕ್ಕುವಳ್ಳಿ ಅವರದ್ದು. ಈ ನಾಟಕಕ್ಕೆ ದಿನಕರ ಭಂಡಾರಿ ಕಣಂಜಾರು ಸಂಭಾಷಣೆ ಬರೆದಿದ್ದು, ಸಂಗೀತ ಸಂದೀಪ್ ಮಧ್ಯ ಅವರದ್ದು.
ಮುಂಬೈ ಕಾರ್ಯಕ್ರಮದ ಮಾಹಿತಿಗಾಗಿ ಕರ್ನೂರು ಮೋಹನ ರೈ-9867304757, ಅಶೋಕ್ ಪಕ್ಕಳ-9323822352, ನವೀನ್ ಶೆಟ್ಟಿ ಇನ್ನ ಬಾಳಿಕೆ-9820411114, ಇವರನ್ನು ಸಂಪರ್ಕಿಸಬಹುದು.

