ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಒಂದು ದಿನದ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆ ವ್ಯೋಮ್ -2023 ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ : 17-06-2023ರಂದು ನಡೆಯಿತು. ಡೈಜಿ ವರ್ಲ್ಡ್ ಮೀಡಿಯಾದ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಾಲ್ಟರ್ ಡಿ’ಸೋಜಾ ನಂದಳಿಕೆ ಅಂದಿನ ಮುಖ್ಯ ಅಭ್ಯಾಗತರಾಗಿದ್ದರು. ಅವರು ಮಾತನಾಡಿ “ವಿದ್ಯಾರ್ಥಿಗಳು ತಮ್ಮಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಈ ಚಿಂತನೆಗಳು ನಿಸ್ಸಂದೇಹವಾಗಿ ಅವರನ್ನು ಯಶಸ್ಸಿನ ಗುರಿ ತಲುಪುವಂತೆ ಮಾಡುತ್ತದೆ” ಎ೦ದರು.
ಬೆಸೆಂಟ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಶ್ಯಾಮ್ ಸುಂದರ್ ಕಾಮತ್ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ವಿದ್ಯಾರ್ಥಿಗಳು ದೇಶದ ಆಸ್ತಿ, ಅವರು ಸದ್ಬಳಕೆಯಾದಲ್ಲಿ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ” ಎಂಬ ಸಂದೇಶ ಇತ್ತರು. ಪ್ರಾಂಶುಪಾಲ ಡಾ. ಲಕ್ಷ್ಮೀ ನಾರಾಯಣ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದ ಸಂಘಟಕ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಗೋಪಾಲ ರಡ್ಡಿರಿತ್ತಿ ಸ್ವಾಗತಿಸಿ, ಸಂಯೋಜಕಿ ಶ್ರೀವಿದ್ಯಾ ವ್ಯೋಮ್ -2023 ಕಾರ್ನಿವಲ್ ಆಫ್ ಕಲ್ಚರ್ ಬಗ್ಗೆ ವಿವರಿಸಿದರು. ಐ.ಕ್ಯೂ.ಎ.ಸಿ.ಯ ಸಂಚಾಲಕ ಡಾ. ಪ್ರಸನ್ನ ಕುಮಾರ್ ಎಂ.ಜಿ ವಂದಿಸಿದರು. ವಿದ್ಯಾರ್ಥಿ ತುಷಾರ್ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 12 ಕಾಲೇಜುಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು, ಸಮಗ್ರ ಪ್ರಶಸ್ತಿಯನ್ನು ವಿವೇಕಾನಂದ ಕಾಲೇಜು ಪುತ್ತೂರು ಮತ್ತು ರನ್ನರ್ ಅಪ್ ಪ್ರಶಸ್ತಿಯನ್ನು ಮಿಲಾಗ್ರಿಸ್ ಕಾಲೇಜು ತಂಡಗಳು ಪಡೆದುಕೊಂಡವು.
ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿದ್ದ ತುಳು ಮತ್ತು ಕನ್ನಡ ಚಿತ್ರರಂಗ ಕಲಾವಿದ ಸ್ವರಾಜ್ ಶೆಟ್ಟಿ ಅವರು ತುಳು ಚಲನಚಿತ್ರದಲ್ಲಿ ಬದಲಾವಣೆಯ ಅನಿವಾರ್ಯದ ಕುರಿತು ಮಾತನಾಡಿ ಶುಭಹಾರೈಸಿದರು. ಸಂಧ್ಯಾ ಕಾಲೇಜಿನ ಸಂಚಾಲಕ ಗಣೇಶ್ ಕೃಷ್ಣ ಭಟ್ ಸೋಲು ಅವರು ಅಧ್ಯಕ್ಷತೆ ವಹಿಸಿದ್ದರು. ಫ್ರೀದಾ ಎಲ್ಸಾ ಅಬ್ರಹಾಂ ಅವರು ಕಾರ್ಯಕ್ರಮ ನಿರೂಪಿಸಿ, ನಿರೀಕ್ಷಾ ವಂದಿಸಿದರು.
1 Comment
ಬಹಳ ಚೆನ್ನಾಗಿ ಡಿಸೈನ್ ಮಾಡಿದ್ದೀರ