Subscribe to Updates

    Get the latest creative news from FooBar about art, design and business.

    What's Hot

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನದ ಕಾರ್ಯಕ್ರಮ

    February 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶ್ರೀ ಜಯಕೀರ್ತಿ ಹೆಚ್. ಇವರ ‘ಮುಕ್ತ ಜಿನದತ್ತ’ ಕಾದಂಬರಿ ಲೋಕಾರ್ಪಣೆ
    Book Release

    ಶ್ರೀ ಜಯಕೀರ್ತಿ ಹೆಚ್. ಇವರ ‘ಮುಕ್ತ ಜಿನದತ್ತ’ ಕಾದಂಬರಿ ಲೋಕಾರ್ಪಣೆ

    June 27, 2023Updated:August 19, 20231 Comment2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾರ್ಕಳ : ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ದಿನಾಂಕ : 18-06-2023ರಂದು ನಡೆದ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಶ್ರೀ ಜಯಕೀರ್ತಿ ಹೆಚ್. ಇವರು ರಚಿಸಿರುವ ‘ಮುಕ್ತ ಜಿನದತ್ತ’ ಕಾದಂಬರಿಯನ್ನು ಬಿಡುಗಡೆಗೊಳಿಸಲಾಯಿತು. ‘ಮುಕ್ತ ಜಿನದತ್ತ’ ಹೊಂಬುಜ ಕ್ಷೇತ್ರದ ಐತಿಹಾಸಿಕ ಕಾದಂಬರಿಯಾಗಿದ್ದು, ಇದನ್ನು ಹೊಂಬುಜ ಕ್ಷೇತ್ರದ ಮಠಾದೀಶರಾದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮೊದಲೇ ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದು, ಜೈನ್ ಮಿಲನ್ ಮಾಸಿಕ ಸಭೆಯ ಕಾರ್ಯಕ್ರಮದಲ್ಲಿ ಮಾನ್ಯ ಜೈನ ವಿದ್ವಾಂಸರೂ, ಕವಿ ರತ್ನಾಕರ ವರ್ಣಿ ಪ್ರಶಸ್ತಿ ವಿಜೇತರೂ ಆದ ನಿವೃತ್ತ ಮುಖ್ಯ ಶಿಕ್ಷಕ ಶ್ರೀಯುತ ಮುನಿರಾಜ ರೆಂಜಾಳ ಇವರಿಂದ ಲೋಕಾರ್ಪಣೆಗೊಂಡಿತು.

    ಶ್ರೀಯುತ ರೆಂಜಾಳರು ಮಾತನಾಡುತ್ತಾ “ಮುಕ್ತ ಜಿನದತ್ತ ಕಾದಂಬರಿಯು ಇಂದಿನ ದಿನಗಳಲ್ಲಿ ಹೊಂಬುಜ ಕ್ಷೇತ್ರದ ಬಗೆಗಿನ ಪೂರ್ಣ ಇತಿಹಾಸವನ್ನು ಜನರಿಗೆ ತಲುಪಿಸಲು ಬಹಳ ಅನುಕೂಲವಾಗಲಿದೆ. ಹಿಂದೆ ಪದ್ಮನಾಭ ಕವಿ ವಿರಚಿತ ಜಿನದತ್ತರಾಯ ಚರಿತ್ರೆಯು ಕಾವ್ಯ ರೂಪದಲ್ಲಿದ್ದು ಓದುಗರಿಗೆ ಕಷ್ಟವಾಗಿತ್ತು. ಆದರೆ ಈ ‘ಮುಕ್ತ ಜಿನದತ್ತ’ ಕಾದಂಬರಿಯು ಇಂದಿನ ಜನಾಂಗಕ್ಕೆ ಸುಲಲಿತವಾಗಿ ಓದಿಸಿಕೊಂಡು ಹೋಗಬಲ್ಲುದು. ಅಂತೆಯೇ ಜನರಿಗೆ ಹೊಂಬುಜದ ಇತಿಹಾಸ ತಿಳಿಯಲು ಒಂದು ಒಳ್ಳೆಯ ಪುಸ್ತಕವಾಗಿದೆಯಲ್ಲದೆ ಸರಳವಾಗಿದ್ದು ಎಲ್ಲರೂ ಓದಿ ಆನಂದಿಸಬಹುದು” ಎಂದು ಶುಭ ಹಾರೈಸಿದರು.

    ಲೇಖಕರಾದ ಶ್ರೀ ಜಯಕೀರ್ತಿ ಹೆಚ್. ಇವರು ಮಾತನಾಡುತ್ತಾ, ತಾನು ಕಾದಂಬರಿ ಬರೆಯಲು ಪ್ರೇರೇಪಿಸಿದ ಮತ್ತು ಚಿಕ್ಕಂದಿನಲ್ಲೇ ಕಥೆ ಹೇಳಿದ ತನ್ನ ಮಾತೃಶ್ರೀಯವರನ್ನು ನೆನಪಿಸಿಕೊಂಡರು. ಇದೇ ಸಂದರ್ಭ ಧಾರ್ಮಿಕ ಚಿಂತಕ ಶ್ರೀಧರ ಭಂಡಾರಿ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಹರ್ಷಿಣಿ ವಿಜಯರಾಜ್ ಅವರನ್ನು ಅಭಿನಂದಿಸಲಾಯಿತು. ಜೈನ್ ಮಿಲನ್‌ ಅಧ್ಯಕ್ಷೆ ಮಾಲತಿ ವಸಂತರಾಜ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೈನ್ ಮಿಲನ್ ನಿರ್ದೇಶಕ ಯುವರಾಜ್ ಬಲಿಪ ಸಾಣೂರು, ಜೈನ್‌ ಮಿಲನ್‌ ಮಾಜಿ ಅಧ್ಯಕ್ಷೆ ಶಶಿಕಲಾ ಕೆ. ಹೆಗ್ಡೆ, ರವಿವರ್ಮ ಜೈನ್, ಆದಿರಾಜ ಜೈನ್‌, ದೇವರಾಜ ಅಧಿಕಾರಿ, ಜಯಕೀರ್ತಿ ಎಚ್., ಅರವಿಂದ ಕುಮಾರ್, ಸುಭಾಶ್ಚಂದ್ರ ಹೆಗ್ಡೆ, ಪ್ರಭಾತ್ ಕುಮಾರ್, ಅಶ್ವಿನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಲೇಖಕರಾದ ಶ್ರೀ ಜಯಕೀರ್ತಿ ಎಚ್. ಇವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಲ್ಲಿ ವ್ಯವಸ್ಥಾಪಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಸಾಹಿತ್ಯದ ಕಡೆಗಿನ ತಮ್ಮ ಒಲವನ್ನು ಹವ್ಯಾಸವನ್ನಾಗಿಸಿಕೊಂಡಿದ್ದು, ನಿವೃತ್ತಿಯ ನಂತರವೂ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ರಚನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಹಲವು ಕೃತಿಗಳನ್ನು ಪ್ರಕಟಿಸಿದ್ದು, ಇಂದು ಬಿಡುಗಡೆಗೊಂಡ ಈ ಕೃತಿ ಅವರ ಸಾಧನೆಯ ಮುಕುಟಕ್ಕೆ ಸೇರಿದ ಇನ್ನೊಂದು ಗರಿ. ಈ ನಿಟ್ಟಿನಲ್ಲಿ ಅವರ ಪರಿಶ್ರಮ ಶ್ಲಾಘನೀಯ.

    ಇವರ ಪ್ರಕಟಿತ ಕೃತಿಗಳು ಚೈತ್ರ ಸಂಭ್ರಮ – ಕವನ ಸಂಕಲನ, ದೇವರ ಕಳವು – ಕಾದಂಬರಿ, ಕುಲದೀಪ – ಕಥಾ ಸಂಕಲನ, ಹೊಸ ನೋಟ – ಗೀತಾಂಜಲಿಯ ಭಾವಾನುವಾದ ಮತ್ತು ಇತರ ಬರಹಗಳು, ಸಮ್ಯಕ್ ಸೌರಭ – ಧಾರ್ಮಿಕ ವಿಚಾರ ಹಾಗೂ ಪೌರಾಣಿಕ ನಾಟಕ, ತೌಳವಿಗ್ ನಾಲೆಸಲ್ – ತುಳು ನಾಟಕ ಮತ್ತು ಇತರ ಬರಹಗಳು ಹಾಗೂ ಮುಕ್ತ ಜಿನದತ್ತ – ಹೊಂಬುಜ ಕ್ಷೇತ್ರದ ಐತಿಹಾಸಿಕ ಕಾದಂಬರಿ. ಮುಂದಿನ ಕವನ ಸಂಕಲನ ‘ಕಾವ್ಯ ಕಲರವ’ ಪ್ರಕಟಣೆಗೆ ಸಿದ್ಧವಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ | ಜೂನ್ 28ರಂದು
    Next Article ಡೊಂಬಿವಲಿಯಲ್ಲಿ ಅನಿತಾ ಪಿ. ತಾಕೊಡೆಯವರ ಕೃತಿ ಲೋಕಾರ್ಪಣೆ – ‘ನಿವಾಳಿಸಿಬಿಟ್ಟ ಕೋಳಿ’ ಹಾಗೂ ‘ಲೋಕಲ್ ಟ್ರೈನ್’
    roovari

    1 Comment

    1. ಜಯಕೀರ್ತಿ ಯಚ್ on June 28, 2023 10:22 am

      ರೂವಾರಿ .ಕಾಮ್ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದೆ .ಅವರ ಈ ಕೆಲಸದಿಂದ ಸಾಹಿತ್ಯಕಲಾಸಕ್ತರನ್ನು ಪರಿಚಯಿಸುವಮತ್ತುಅವರನ್ನುಒಂದೆಡೆಗೆಲಕರೆತರುವಮಹತ್ವದಪರಿಚಾರಿಕೆಯನ್ನುಮಾಡುತ್ತಿರುವುದುನಿಜಕ್ಕೂಅಭಿನಂದನಾರ್ಹವಾದುದು.ಸಾಹಿತ್ಯ ಮತ್ತು ಕಲೆಗೆ ಉತ್ತಮ ಸ್ಪಂದನೆಪ್ರೇರಣೆದೊರೆತರೇನೇಅದುಇನ್ನಷ್ಟುಮುಂದುವರಿಯಲು ಪ್ರೇರೇಪಿಸ ಬಹುದು ರೂವಾರಿಯು ವಿಶ್ವಾದ್ಯಂತ. ಪಸರಿಸುವ ಈ ವಿಚಾರವೆಲ್ಲವೂ ಎಲ್ಲರ ಮೆಚ್ಚುಗೆ ಗಳಿಸಲಿ

      Reply

    Add Comment Cancel Reply


    Related Posts

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

    February 26, 2026

    ಉಷಾ ಕೆ.ವಿ. ಇವರ ‘ವೇದಾಂತ’ ಹಾಗೂ ‘ಸ್ಪಂದನ’ ಕೃತಿಗಳ ಲೋಕಾರ್ಪಣಾ ಸಮಾರಂಭ

    February 26, 2026

    ಸುಳ್ಳದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ವಿಚಾರಗೋಷ್ಠಿ

    February 26, 2026

    ಪುಸ್ತಕ ವಿಮರ್ಶೆ | ಪೌರಾಣಿಕ ಕಥೆಗಳಲ್ಲಿ ಆಸಕ್ತಿ ಮೂಡಿಸುವ ‘ಕಿರಿಯರ ಸಚಿತ್ರ ರಾಮಾಯಣ’

    February 26, 2026

    1 Comment

    1. ಜಯಕೀರ್ತಿ ಯಚ್ on June 28, 2023 10:22 am

      ರೂವಾರಿ .ಕಾಮ್ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದೆ .ಅವರ ಈ ಕೆಲಸದಿಂದ ಸಾಹಿತ್ಯಕಲಾಸಕ್ತರನ್ನು ಪರಿಚಯಿಸುವಮತ್ತುಅವರನ್ನುಒಂದೆಡೆಗೆಲಕರೆತರುವಮಹತ್ವದಪರಿಚಾರಿಕೆಯನ್ನುಮಾಡುತ್ತಿರುವುದುನಿಜಕ್ಕೂಅಭಿನಂದನಾರ್ಹವಾದುದು.ಸಾಹಿತ್ಯ ಮತ್ತು ಕಲೆಗೆ ಉತ್ತಮ ಸ್ಪಂದನೆಪ್ರೇರಣೆದೊರೆತರೇನೇಅದುಇನ್ನಷ್ಟುಮುಂದುವರಿಯಲು ಪ್ರೇರೇಪಿಸ ಬಹುದು ರೂವಾರಿಯು ವಿಶ್ವಾದ್ಯಂತ. ಪಸರಿಸುವ ಈ ವಿಚಾರವೆಲ್ಲವೂ ಎಲ್ಲರ ಮೆಚ್ಚುಗೆ ಗಳಿಸಲಿ

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.