ಮೂಡುಬಿದಿರೆ: ಕಳೆದ ನಲುವತ್ತನಾಲ್ಕು ವರುಷಗಳಿಂದ ಮುದ್ದಣ ಕಾವ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಕಾಂತಾವರ ಕನ್ನಡ ಸಂಘವು 2023ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹದ ಹಸ್ತ-ಪ್ರತಿಗಳನ್ನು ಆಹ್ವಾನಿಸಿದೆ.
ಪ್ರಶಸ್ತಿಯು ರೂ.10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿದೆ. ಆಸಕ್ತರು ಕನ್ನಡ ಸಂಘದ ಮೈಲ್ ಐಡಿ [email protected] ಅಥವಾ ಸಂಘದ ಅಧ್ಯಕ್ಷರು (99007 01666), ಪ್ರಧಾನ ಕಾರ್ಯದರ್ಶಿ (90089 78366) ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹಸ್ತಪ್ರತಿ ಸ್ವೀಕಾರಕ್ಕೆ ಸೆಪ್ಟೆಂಬರ್ 01 ಕೊನೆಯ ದಿನ. ನವೆಂಬರ್ 01ರಂದು ಪ್ರಶಸ್ತಿ ಘೋಷಣೆ ಹಾಗೂ ಮಾಡಲಾಗುವುದು.
ಕವಿ ಮುದ್ದಣ ಕಾವ್ಯ ಪ್ರಶಸ್ತಿ ಸ್ಪರ್ಧೆಯ ನಿಯಮಗಳು
1. ಪ್ರಕಾಶನಕ್ಕೆ ಸಿದ್ಧವಾಗಿರುವ, ಪತ್ರಿಕೆಗಳಲ್ಲಿ ಪ್ರಕಟವಾದ ಅಥವಾ ಆಗದೇ ಇರುವ ಕನಿಷ್ಠ 25 ಕವನಗಳುಳ್ಳ ಕವನ ಸಂಗ್ರಹದ ಹಸ್ತಪ್ರತಿಗೆ ಮಾತ್ರ ಅವಕಾಶ.
2. ಹನಿಗವನಗಳು, ಪ್ರಕಟಿತ ಕವನ ಸಂಗ್ರಹಗಳು, ಶಿಶುಗೀತೆಗಳು, ಖಂಡಕಾವ್ಯ, ಅನುವಾದಿತ ಕವನಗಳು, ಗಜಲ್ ಮತ್ತು ಭಾವಗೀತೆಗಳು ಸ್ಪರ್ಧೆಗೆ ಅರ್ಹವಾಗುವುದಿಲ್ಲ.
3. ಕನ್ನಡದ ಹಿರಿಯ – ಕಿರಿಯ ಕವಿಗಳಿಗೆ ಸ್ಪರ್ಧೆಗೆ ಮುಕ್ತ ಅವಕಾಶ, ಸ್ಪರ್ಧೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹಸ್ತಪ್ರತಿಗೆ ಮಾತ್ರ ಪ್ರಶಸ್ತಿ. ಸಮಾನ ಅಂಕಗಳು ಒಂದಕ್ಕಿಂತ ಹೆಚ್ಚು ಹಸ್ತಪ್ರತಿಗಳಿಗೆ ಬಂದರೆ ಪ್ರಶಸ್ತಿಯನ್ನು ಅವುಗಳಿಗೂ ನೀಡಲಾಗುವುದು. ಆದರೆ ಗೌರವ ಸಂಭಾವನೆಯ ಮೊತ್ತವನ್ನು ಮಾತ್ರ ಸಮಾನವಾಗಿ ಹಂಚಲಾಗುವುದು.
4. ಪ್ರಶಸ್ತಿ ಅಂದರೆ ರೂಪಾಯಿ 1೦,೦೦೦/-(ಹತ್ತು ಸಾವಿರ) ಗೌರವ ಸಂಭಾವನೆ, ಸನ್ಮಾನ ಮತ್ತು ಪ್ರಶಸ್ತಿ ಪತ್ರ.
5. ಪ್ರಶಸ್ತಿ ಪುರಸ್ಕೃತರು ಪ್ರಶಸ್ತಿ ಪುರಸ್ಕೃತ ಕೃತಿಯನ್ನು ಒಂದು ವರುಷದೊಳಗೆ ಸ್ವತಃ ಅಥವಾ ಬೇರೆ ಪ್ರಕಾಶನದ ಮೂಲಕ ಮುದ್ರಿಸಿ ಕನಿಷ್ಠ ಇಪ್ಪತ್ತೈದು ಪ್ರತಿಗಳನ್ನು ಸಂಘಕ್ಕೆ ನೀಡಬೇಕು. ಆ ನಂತರವೇ ಪ್ರಶಸ್ತಿಯ ಗೌರವ ಸಂಭಾವನೆಯ ಪಾವತಿ, ಪ್ರಶಸ್ತಿ ಪುರಸ್ಕೃತ ಕೃತಿಯನ್ನು ಹೊರತರುವಾಗ ಅದರ ರಕ್ಷಾ ಪಟದಲ್ಲಿ ಇಲ್ಲವೇ ಮೊದಲ ಪಟದಲ್ಲಿ “ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟಿನ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ” ಎಂದು ಮುದ್ರಿಸಬೇಕು. ಹೀಗೆ ಮುದ್ರಿಸದಿದ್ದಲ್ಲಿ ಗೌರವ ಸಂಭಾವನೆಯನ್ನು ತಡೆಹಿಡಿಯಲಾಗುವುದು.
6. ಸ್ಪರ್ಧೆಯಲ್ಲಿ ಎಷ್ಟು ಸಲವೂ ಭಾಗವಹಿಸಬಹುದು. ಒಮ್ಮೆ ಪ್ರಶಸ್ತಿ ಪಡೆದವರಿಗೆ ಮತ್ತೆ ಅವಕಾಶ ಇಲ್ಲ.
7. ಪ್ರತಿಯೊಂದು ಹಸ್ತಪ್ರತಿಯ ಜೊತೆ ರೂಪಾಯಿ 100 (ನೂರು)ನ್ನು ಪ್ರವೇಶ ಶುಲ್ಕವಾಗಿ ನೀಡಬೇಕು. ಅದನ್ನು ಸೆಪ್ಟ್ ರೂಪದಲ್ಲಿ ನೀಡಬಹುದಾಗಿದ್ದು ಬ್ಯಾಂಕಿನ ಮಾಹಿತಿ ಹೀಗಿದೆ : ಬ್ಯಾಂಕಿನ ಹೆಸರು : ಕೆನರಾ ಬ್ಯಾಂಕ್ ಬೆಳುವಾಯಿ ಶಾಖೆ (Belvai), ಖಾತೆಯ ಹೆಸರು : ಕನ್ನಡ ಸಂಘ ಕಾಂತಾವರ, ಖಾತೆಯ ನಂಬ್ರ 0645101009877 IFSC No CNRB0000645), ನೆಪ್ಟ್ ಮಾಡಲು ಆಗದಿದ್ದಲ್ಲಿ ಸಂಘದ ಅಧ್ಯಕ್ಷರ ಹೆಸರಿಗೆ ಪ್ರವೇಶ ಶುಲ್ಕವನ್ನು ಎಂ.ಓ. ಮಾಡಬಹುದು.
8. ಹಸ್ತಪ್ರತಿಯನ್ನು D.T.P. ಇಲ್ಲವೇ ಟೈಪ್ ಮಾಡಿಸಿ ಕಳುಹಿಸಬೇಕು. ಹಸ್ತಪ್ರತಿಯನ್ನು ಹೊಲಿದು ಬೈಂಡ್ ಮಾಡಿ ಯಾವುದೇ ಹಾಳೆಗಳು ಕಳೆದು ಹೋಗದ ಹಾಗೆ ಎಚ್ಚರವಹಿಸಬೇಕು. ಹಸ್ತಪ್ರತಿಯಲ್ಲಿ ಕವಿಯ ಹೆಸರು ಇರಬಾರದು, ಆದರೆ ಸಂಕಲನಕ್ಕೆ ಒಂದು ಶಿರೋನಾಮೆ ಇರಬೇಕು. ಕವಿಯ ಪಾಸ್ಪೋರ್ಟ್ ಗಾತ್ರದ ಫೋಟೋ, ವಿಳಾಸ (ಪಿನ್ ಕೋಡು ಸಮೇತ) ಮತ್ತು ದೂರವಾಣಿ ಸಂಖ್ಯೆ ಇರಬೇಕು.
9. ಅರ್ಹವೆನಿಸುವ ಪ್ರವೇಶಗಳು ಬಾರದಿದ್ದಲ್ಲಿ ಪ್ರಶಸ್ತಿಯನ್ನು ತಡೆಹಿಡಿಯುವ ಹಕ್ಕು ಸಂಘಕ್ಕಿದೆ.
10. ಹಸ್ತಪ್ರತಿಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಹಾಗಾಗಿ ಅಂಚೆ ಚೀಟಿ ಕಳುಹಿಸಿದರೆ ಅದನ್ನು ಪರಿಗಣಿಸುವುದಿಲ್ಲ.
11. ಪ್ರತಿ ವರುಷವೂ ಜೂನ್ ಎರಡನೇ ವಾರದಲ್ಲಿ ಪತ್ರಿಕೆಗಳ ಮೂಲಕ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಲಾಗುವುದು. ಪ್ರಶಸ್ತಿಯ ಮಾಹಿತಿಯನ್ನು [email protected] ಮಿಂಚಚೆಯ ಮೂಲಕ ಪಡೆದುಕೊಳ್ಳಬಹುದು. ಹಸ್ತಪ್ರತಿ ಸ್ವೀಕಾರದ ಕೊನೆಯ ದಿನಾಂಕ ಸಪ್ಟೆಂಬರ್ 1, ಪ್ರಶಸ್ತಿ ಘೋಷಣೆ ನವಂಬರ 1.
12. ಹಸ್ತಪ್ರತಿಯನ್ನು ಡಾ. ನಾ.ಮೊಗಸಾಲೆ, ಅಧ್ಯಕ್ಷರು ಕಾಂತಾವರ ಕನ್ನಡ ಸಂಘ – ಈ ಹೆಸರಿಗೆ ಕಳುಹಿಸಬೇಕು. ಅಂಚೆ ಮೂಲಕ ಕಳುಹಿಸುವುದಾದರೆ ಅಂಚೆ ಕಾಂತಾವರ – 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂದೂ, ಕೋರಿಯರ್ ಮೂಲಕ ಕಳುಹಿಸುವುದಾದರೆ, ಪ್ರೊಫೆಶನಲ್ ಕೊರಿಯರ್ ಮೂಲಕವೇ ‘ಅಧ್ಯಕ್ಷರು, ಕನ್ನಡ ಸಂಘ ಕಾಂತಾವರ ಸಂವೇದನಾ, ಅಂಚೆ ಬೆಳುವಾಯಿ -574213, ವಯಾ ಮೂಡಬಿದ್ರೆ, ದ.ಕ. (Samvedana, P.O: BELUVAI – 574213. VIA – MUDABIDRI, D.K) ಈ ವಿಳಾಸಕ್ಕೆ ಕಳುಹಿಸಬೇಕು.
13. ಪ್ರಶಸ್ತಿಯನ್ನು ಸಂಘವು ನಿಯೋಜಿಸಿದ ಮೂರು ಮಂದಿ ತೀರ್ಪುಗಾರರು ನೀಡಿದ ಅಂಕಗಳ ಆಧಾರದಲ್ಲಿ ಮಂದಿ ನಿರ್ಧರಿಸಲಾಗುವುದು. ಅವರ ನಿರ್ಣಯವನ್ನು ಸ್ಪರ್ಧಾಳುಗಳಾಗಲೀ, ಸಂಘದ ಸದಸ್ಯರಾಗಲೀ ಪ್ರಶ್ನಿಸುವ ಹಾಗಿಲ್ಲ.
14. ಪ್ರಶಸ್ತಿ ಘೋಷಣೆಯನ್ನು ಎಲ್ಲ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
15. ಸ್ಪರ್ಧಾಳುಗಳಿಗೆ ಹಸ್ತಪ್ರತಿ ತಲುಪಿದ ಬಗ್ಗೆ ಒಂದು ತಿಂಗಳ ಒಳಗೆ ಅಂಚೆ ಕಾರ್ಡಿನಲ್ಲಿ ತಿಳಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಇದಕ್ಕಿಂತ ಮೀರಿದ ವಿಶೇಷ ಮಾಹಿತಿಗಳು ಬೇಕಾಗಿದ್ದರೆ ಸಂಘದ ಅಧ್ಯಕ್ಷರನ್ನು 9900701666 (ಸಂಚಾರಿ) ಅಥವಾ ಸಂಘದ ಕಾರ್ಯದರ್ಶಿಯವರನ್ನು (9008978366) ದೂರವಾಣಿಯ ಮೂಲಕ ಸಂಪರ್ಕಿಸಬಹುದು.
ಈವರೆಗಿನ ಕವಿ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತರು (1979 – 2013).
ಆನಂದ ಜಂಝರವಾಡ (1979), ಶ್ರೀಕೃಷ್ಣ ಚೆನ್ನಂಗೋಡು (1980), ರಾಮದಾಸ್ ಉಡುಪಿ (1981), ಸು.ರಂ.ಎಕ್ಕುಂಡಿ (1982), ಯು.ಕೆ.ವಿ. ಆಚಾರ್ಯ (1983), ವೇಣುಗೋಪಾಲ್ ಕಾಸರಗೋಡು (1984), ಹೆಚ್.ದುಂಡೀರಾಜ್ (1985), ಶ್ರೀಶದೇವ ಪೂಜಿತ್ತಾಯ (1986), ಹೊರೆಯಾಲ ದೊರೆಸ್ವಾಮಿ (1987), ಡಾ.ಪಿ.ಎಸ್.ರಾಮಾನುಜನ್ (1988), ಮಹಾಬಲಮೂರ್ತಿ ಕೊಡ್ಲಕೆರೆ (1989), ಶ್ರೀಮತಿ ಪ್ರತಿಭಾ ನಂದಕುಮಾರ್ (1990), ಸ. ರಘುನಾಥ (1991), ಶ್ರೀಮತಿ ಎಂ.ಆರ್. ಕಮಲ (1992), ಶ್ರೀಮತಿ ಹೇಮಾ ಪಟ್ಟಣ ಶೆಟ್ಟಿ (1993), ಮೋಹನ ನಾಗಮ್ಮನವರ ಮತ್ತು ಕೆ.ಪಿ.ಮೃತ್ಯುಂಜಯ (1994), ಸುಬ್ರಾಯ ಚೊಕ್ಕಾಡಿ (1995), ಜಿ.ಕೆ. ರವೀಂದ್ರ ಕುಮಾರ್ (1996), ಬಿ.ಎಂ.ಬಶೀರ್ ಮತ್ತು ಎಸ್.ದಿವಾಕರ್ (1997), ಗುರುರಾಜ ಮಾರ್ಪಳ್ಳಿ (1998), ಎಸ್. ಮಂಜುನಾಥ್ (1999), ರಾಧಾಕೃಷ್ಣ ಬೆಳ್ಳೂರು (2000), ಅಂಶುಮಾಲಿ (2001), ಡಾ. ಎಸ್.ವಿ.ಪ್ರಭಾವತಿ ಮತ್ತು ಕೆ.ಪಿ.ಸುರೇಶ್ (2002), ಮಾರ್ಕಾಂಡಪುರಂ ಶ್ರೀನಿವಾಸ (2003), ಡಾ. ಕಮಲ ಹೆಮ್ಮಿಗೆ (2004), ಬೆಳಗೋಡು ರಮೇಶ್ ಭಟ್ (2005), ಡಿ.ಎಸ್.ರಾಮಸ್ವಾಮಿ (2006), ವಾಸುದೇವ ನಾಡಿಗ್ (2007), ದೇಶಪಾಂಡೆ ಸುಬ್ಬರಾಯ (2008), ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ (2009), ಜಿ.ಎಸ್.ಉಬರಡ್ಕ ಮತ್ತು ಸುಬ್ಬು ಹೊಲೆಯಾರ್ (2010), ಡಾ. ಧನಂಜಯ್ ಕುಂಬ್ಳೆ (2011), ಡಾ. ವಸಂತಕುಮಾರ್ ಪೆರ್ಲ (2012), ಶ್ರೀ ಆರ್. ವಿಜಯರಾಘವನ್ (2013), ಡಾ. ಜಯಪ್ರಕಾಶ ಮಾವಿನಕುಳಿ (2014), ಶ್ರೀ ಎಂ.ಎಸ್.ರುದ್ರೇಶ್ವರ ಸ್ವಾಮಿ (2015), ಪ್ರೊ. ಟಿ.ಯಲ್ಲಪ್ಪ (2016), ಶ್ರೀಮತಿ ಜ್ಯೋತಿ ಗುರುಪ್ರಸಾದ್ ಕಾರ್ಕಳ (2017), ಡಾ. ಕುಮಾರ ಚಲ್ಯ (2018), ಡಾ.ಸತ್ಯಾನಂದ ಪಾತ್ರೋಟ (2019), ಚಿಂತಾಮಣಿ ಕೊಡ್ಲೆಕೆರೆ (2020), ತಾರಿಣಿ ಶುಭದಾಯಿನಿ (2021), ಡಾ. ಚಿದಾನಂದ ಸಾಲಿ (2022).
ಕನ್ನಡ ಸಂಘವು ಈ ಮೊದಲಿನ ಕವಿಗಳ ಆಯ್ದ ಐದೈದು ಕವನಗಳನ್ನು ಸಂಪೋಣಿಸಿ ‘ಕಾವ್ಯನಮಸ್ಕಾರ’ ಎಂಬ ಆ್ಯಂಥಾಲಜಿ (ಕವನಗುಚ್ಛ)ಯನ್ನು 2015ರಲ್ಲಿ ಪ್ರಕಟಿಸಿದೆ. ಇದರಲ್ಲಿ ಒಟ್ಟು 200 ಕವಿತೆಗಳಿದ್ದು ಇದು 80 GSM Maplitho ಕಾಗದದಲ್ಲಿ ಮುದ್ರಣವಾಗಿದೆ. 256 ಪುಟಗಳುಳ್ಳ ಈ ಹೊತ್ತಗೆಯಲ್ಲಿ 40 ಕವಿಗಳ ಪರಿಚಯ ವಿಳಾಸ ಇತ್ಯಾದಿ ಮಾಹಿತಿಗಳು ಸೇರಿವೆ. ಇದರ ಮುಖಬೆಲೆ ರೂಪಾಯಿ 210/- ಆಗಿದ್ದು, ಸರ್ಧೆಯಲ್ಲಿ ಭಾಗವಹಿಸುವವರಿಗೆ ರೂಖ್ಯಾ 175/- ಕೈ ನೀಡಲಾಗುವುದು. ಆಸಕ್ತರು ಪ್ರವೇಶ ಶುಲ್ಕದ ಜೊತೆ ಈ ಮೊತ್ತವನ್ನು ಸೇರಿಸಿ ಕಳುಹಿಸಿದರೆ, ‘ಕಾವ್ಯನಮಸ್ಕಾರ’ವನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಕಳುಹಿಸಲಾಗುವುದು.