ಮಂಗಳೂರು : ಧ್ವನಿ ಬಳಗದವರಿಂದ ಪದವಿ ಪೂರ್ವ, ಪದವಿ ಹಂತ, ಸ್ನಾತಕೋತ್ತರ ಹಾಗೂ ಸಾರ್ವಜನಿಕರಿಗೆ ‘ಧ್ವನಿ ಕವನ ಸ್ಪರ್ಧೆ’ಯನ್ನು ಆಯೋಜಿಸಿದೆ. ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ : 20-07-2023 ಆಗಿರುತ್ತದೆ.
ನಿಬಂಧನೆಗಳು :
1. ಸ್ಪರ್ಧೆಯು ಎರಡು ಹಂತಗಳಲ್ಲಿ ನಡೆಯಲಿರುವುದು
1) ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ
2) ಸ್ನಾತಕೋತ್ತರ ಮತ್ತು ಸಾರ್ವಜನಿಕ
2) ಕೈಪಿಡಿಯಲ್ಲಿ ನೀಡಿರುವ ಎರಡು ವಿಷಯಗಳಲ್ಲಿ ಒಂದು ವಿಷಯದ ಕುರಿತು ಹನ್ನೆರಡು ಸಾಲುಗಳ ಕವಿತೆ ರಚಿಸಬೇಕು
ಪದವಿ ಪೂರ್ವ ಮತ್ತು ಪದವಿ ಹಂತ
1) ಚಿಗುರು 2) ಮಳೆ
ಸ್ನಾತಕೋತ್ತರ ಮತ್ತು ಸಾರ್ವಜನಿಕ
1) ಅಂಬೆಗಾಲು 2) ಕೈತುತ್ತು
3) ಕವಿತೆಯನ್ನು ಕನ್ನಡ ಭಾಷೆಯಲ್ಲಿಯೇ ರಚಿಸಬೇಕು. ಕೃತಿ ಚೌರ್ಯ ಕಂಡುಬಂದಲ್ಲಿ ಕವಿತೆಯನ್ನು ಸರ್ಧೆಗೆ ಪರಿಗಣಿಸಲಾಗುವುದಿಲ್ಲ.
4) ಸ್ಪರ್ಧಿಯು ರಚಿಸಿದ ಕವಿತೆ ಈಗಾಗಲೇ ಯಾವುದೇ ಜಾಲತಾಣ ಮಾಧ್ಯಮಗಳಲ್ಲಿ ಪ್ರಕಟಗೊಂಡಿರಬಾರದು.
5) ಸ್ಪರ್ಧಿಯು ತಮ್ಮ ಕವಿತೆಯನ್ನು ಸಂಸ್ಥೆ ವತಿಯಿಂದ ಪಡೆದ ಕೈ ಪಿಡಿಯಲ್ಲಿಯೇ ಬಾಲ್ ಪೆನ್ ಬಳಸಿ ಬರೆಯಬೇಕು.
6) ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪರ್ಧಿಯು ರೂ.199/- ನೋಂದಣಿ ಶುಲ್ಕವನ್ನು ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ
1) ವಿಜೇತರನ್ನು ಪ್ರಸಿದ್ಧ ಮೂರು ಮಂದಿ ಕವಿಗಳ ಮೂಲಕ ಆಯ್ಕೆ ಮಾಡಿಸಲಾಗುವುದು.
2) ಎರಡು ಹಂತದಲ್ಲಿ ಆಯ್ಕೆಯಾದ ಕವಿಗಳಿಗೆ ಪ್ರಥಮ, ದ್ವಿತೀಯ ಬಹುಮಾನ ನೀಡಲಾಗುವುದು.
3) ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
4) ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಉದಯೋನ್ಮುಖ ಕವಿಗಳಿಗೂ ಸಂಸ್ಥೆಯ ಪರವಾಗಿ ಪ್ರಶಸ್ತಿ ಪತ್ರ ನೀಡಲಾಗುವುದು.
ಪದವಿಪೂರ್ವ / ಪದವಿ ಹಂತ
ಪ್ರಥಮ ಬಹುಮಾನ ರೂ.2,222/-
ದ್ವಿತೀಯ ಬಹುಮಾನ ರೂ.1,111/-
ಸ್ನಾತಕೋತ್ತರ | ಸಾರ್ವಜನಿಕ ಹಂತ
ಪ್ರಥಮ ಬಹುಮಾನ ರೂ.3,333/-
ದ್ವಿತೀಯ ಬಹುಮಾನ ರೂ.2,222/-
ಹೆಚ್ಚಿನ ವಿವರಣೆಗಾಗಿ : 9686043469, [email protected]